ಹುಕ್ಕೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶಿಲ್ಪಾ ನಿಪನ್ಯಾಳಿ, ಸುಹಾಸಿನಿ ಪಾಟೀಲ, ಪೂಜಾ ಬಾಳಿಕಾಯಿ ಇತರರನ್ನು ಸನ್ಮಾನಿಸಲಾಯಿತು. ಬಿ.ಎಸ್.ಮಗದುಮ್ಮ, ಪಿ.ಜಿ.ಕೊಣ್ಣೂರ, ಸವಿತಾ ಏಣಗಿಮಠ, ಎಂ.ಎನ್.ನಾಯಿಕ ಇತರರಿದ್ದರು.
ಹುಕ್ಕೇರಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರವು ಕಡಿಮೆ ವೆಚ್ಚದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ವಿದ್ಯಾರ್ಥಿಗಳು ಸೌಲಭ್ಯದ ಸದುಪಯೋಗ ಪಡೆದು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಮತ್ತು ತಂದೆ ತಾಯಿಗೆ ಕೀರ್ತಿ ತಂದು ಕೊಡಿ ಎಂದು ಚಿಕ್ಕೋಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಐ.ಭಂಡಾರೆ ಹೇಳಿದರು.
ಇತ್ತೀಚೆಗೆ (ಗುರುವಾರ) ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ, ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ನಿವೃತ್ತ ಉಪನ್ಯಾಸಕರಿಗೆ ಸತ್ಕಾರ ಸಮಾರಂಭ ಉದ್ಧೇಶಿಸಿ ಮಾತನಾಡಿದರು.
ಸಿಡಿಸಿ ಉಪಾಧ್ಯಕ್ಷ ಬಿ.ಎಸ್.ಮಗದುಮ್ಮ, ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ್, ಪ್ರಮೋದ ನಾಯ್ಕ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾಚಾರ್ಯ ಎಂ.ಎನ್.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಐ.ಡಿ.ಜಕಾತಿ, ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶಿಲ್ಪಾ ನಿಪನ್ಯಾಳಿ, ಸುಹಾಸಿನಿ ಪಾಟೀಲ್, ಪೂಜಾ ಬಾಳಿಕಾಯಿ, ಉಪನ್ಯಾಸಕರಾದ ಪ್ರತಿಜ್ಞಾ ಜೈನ, ರಾಜಶ್ರೀ ಖೇಮಾಳೆ, ಶ್ವೇತಾ ಬೆಳಗುಂದಿ, ಪ್ರಶಾಂತ ಮಜಲಟ್ಟಿ ಮತ್ತು ಸವಿತಾ ಕೊಣ್ಣೂರ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳಾದ ಐಮನ್ ಮಕಾನದಾರ, ಹಾಲಪ್ಪ ಕಂಕಣವಾಡಿ, ಶಿವಾಣಿ ಮಸರಗುಪ್ಪಿ ಮತ್ತು ಉಪನ್ಯಾಸಕ ಎ.ಎಂ.ಬಾಗೇವಾಡಿ ಅನಿಸಿಕೆ ವ್ಯಕ್ತಪಡಿಸಿದರು.
ಸಿಡಿಸಿ ಸದಸ್ಯರಾದ ಸವಿತಾ ಏಣಗಿಮಠ, ಸಲಿಂ ನದಾಫ, ಅಶೋಕ ಕುಂಬಾರ, ಪ್ರಾಧ್ಯಾಪಕರಾದ ಎ.ಐ. ತಳವಾರ, ಮತ್ತಿತರರಿದ್ದರು. ನಂದಿನಿ ಬಡಿಗೇರ ಪ್ರಾರ್ಥಿಸಿದರು. ಪ್ರೊ.ಆರ್.ಬಿ.ಪಾಟೀಲ ಸ್ವಾಗತಿಸಿದರು. ಪ್ರೊ.ರಾಘವೇಂದ್ರ ಕುರಣಿ ನಿರೂಪಿಸಿದರು. ಪ್ರೊ. ಪ್ರಸಾದ್ ವಂದಿಸಿದರು.





