ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಶ್ರೀ ಹೊಳೆಮ್ಮಾ ದೇವಿ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ವಿರಕ್ತಮಠದ ಶಿಬಸವ ಸ್ವಾಮಿಜಿ, ಹಾಗೂ ಭಕ್ತಾಧಿಗಳು.
ಹುಕ್ಕೇರಿ: “ಮಠ-ಮಂದಿರಗಳಿಂದ ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಏಕಾಗ್ರತೆ ದೊರೆಯುತ್ತದೆ. ಇದರಿಂದ ಉತ್ತಮ ಜೀವನ ಹಾಗೂ ಆರೋಗ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಎಲಿಮುನ್ನೋಳಿ ಗ್ರಾಮದ ಶಿವಬಸವ ನಗರದ ತೋಟದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಹೊಳೆಮ್ಮಾ ದೇವಿ ಮಂದಿರದ ಉದ್ಘಾಟನೆ ಹಾಗೂ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗ್ರಾಮದ ಶ್ರೀ ಮಹಾಲಕ್ಷ್ಮೀ ಹಾಗೂ ರಾಮಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಿತು. ಸುಮಂಗಲೆಯರಿ0ದ ಆರತಿ, ಭಕ್ತರಿಗೆ ಅಂಬಲಿ ಹಾಗೂ ಕೊಡ ಅನ್ನಪ್ರಸಾದ ವಿತರಿಸಲಾಯಿತು.
ಗ್ರಾಮದ ಮುಖಂಡರಾದ ಬಸವರಾಜ ಮುತ್ತೂರ, ದತ್ತಾತ್ರೇಯ ಕುಲಕರ್ಣಿ, ಕೆಂಪಣ್ಣ ಊರಮನಟ್ಟಿ, ಅಂದಾನಿ ಕುಪಾಟಿ, ಸದಾಶಿವ ಮುತ್ತೂರ, ಅಜೀತ ಖಾನಾಪುರಿ, ಶಿವಾಜಿ ಖಟ್ರಿ, ಬಾಬು ಗೋಣಿ, ಅಶೋಕ ಕುಪಾಟಿ, ಕಾಡಪ್ಪ ತೇರದಾಳಿ, ಸಂತೋಷ ಮರಡಿ, ಅಜೀತ ಮೆಟಗೋಡ್ಲಿ, ರಾಮಪ್ಪ ಖಾನಾಪುರಿ, ರಾಜಶೇಖರ ರೋಡಬಸ್ಸನವರ, ಸಂತೋಷ ಮುತ್ತೂರ, ಶಂಕರ ಹಂಚಿನಾಳ, ಶಿವು ಬೆಳಗುಂದಿ ಸೇರಿದಂತೆ ಗ್ರಾಮದ ಹಿರಿಯರು, ಭಕ್ತರು ಪಾಲ್ಗೊಂಡಿದ್ದರು.ಲಕ್ಷ್ಮಣ ಗೋಣಿ ಸ್ವಾಗತಿಸಿದರು. ಸಿದ್ರಾಮ ಮುತ್ತೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





