ಯುವ ಜನರಲ್ಲಿ ದೇಸಿ ಕ್ರೀಡೆಗಳ ಆಸಕ್ತಿ ಬೆಳೆಸಲು ಅಂತರಾಜ್ಯ ಮಹಿಳಾ ಕಬಡ್ಡಿ ಆಯೋಜನೆ: ಶಾಸಕ ನಿಖಿಲ ಕತ್ತಿ

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನಡೆದ ಹೊನಲು ಬೆಳಕಿನ ಅಂತರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ನಿಖಿಲ ಮತ್ತು ಪವನ ಕತ್ತಿ ಸೋದರರು ಉದ್ಘಾಟಿಸಿದರು. ಸಂದೀಪ ಕತ್ತಿ, ಸುಧೀರ ಕತ್ತಿ, ಮಹಾವೀರ ನಿಲಜಗಿ, ಕೆಂಪಣ್ಣಾ ದೇಸಾಯಿ ಇತರರಿದ್ದರು.

ಹುಕ್ಕೇರಿ : ಯುವ ಜನಾಂಗದ ಒತ್ತಾಸೆ ಮತ್ತು ದೇಸಿ ಕ್ರೀಡೆಗಳನ್ನು ಬೆಳೆಸುವ ಆಶಯದೊಂದಿಗೆ ಅಂತರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ದೇಸಿ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಯುವ ಜನರಲ್ಲಿ ದೇಶಾಭಿಮಾನ ಹಾಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸುತ್ತೇವೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಅವರು ಶನಿವಾರದಂದು ಸಂಜೆ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ರಾಜ್ಯ ಅಮೆಚ್ಯೂರ ಕಬಡ್ಡಿ ಅಸೋಸಿಯೇಷನ್ ಮತ್ತು ರಾಹುಲ ಕತ್ತಿ ಸ್ಪೋರ್ಟ್ಸ ಮತ್ತು ಸೋಶಿಯಲ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಅಂತರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಮನೆತನ ಯಾವಾಗಲೂ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸೋದರ ದಿ. ರಾಹುಲ ಕತ್ತಿ ಹೆಸರಿನಲ್ಲಿ ಸುಸಜ್ಜಿತ ಕ್ರೀಡಾ ಮೈದಾನ ನಿರ್ಮಿಸಿ ಅಲ್ಲ್ಲಿ ಹಲವು ವರ್ಷಗಳಿಂದ ಅಂತರಾಷ್ಟಿಯ ಮಟ್ಟದ ಸೌಲಭ್ಯ ಒದಗಿಸಿ ಕ್ರಿಕೆಟ್ ಪಂದ್ಯಾವಳಿ ನಡೆಸಿದ್ದೇವೆ.

ಅರ್ಬನ್ ಬ್ಯಾಂಕ ಅಧ್ಯಕ್ಷ ಪವನ ಕತ್ತಿ ಮಾತನಾಡಿ ಕಲೆ, ಕ್ರೀಡೆ, ಧಾರ್ಮಿಕ ಮತ್ತು ಸಮಾಜ ಸೇವೆಗಳಿಗೆ ಪ್ರೋತ್ಸಾಹಿಸುವುದೇ ನಮ್ಮ ಗ್ರಾಮದ ವೈಶಿಷ್ಟ್ಯ. ದೇಸಿ ಕ್ರೀಡೆಗಳು ಗ್ರಾಮೀಣ ಜನರಿಂದ ಉಳಿದಿವೆ. ಅದಕ್ಕಾಗಿ ಜಿಲ್ಲಾ ಮತ್ತು ತಾಲೂಕ ಪಂಚಾಯತಿ ಮಟ್ಟದಲ್ಲಿ ಕಬಡ್ಡಿ, ವಾಲಿಬಾಲ್, ಖೋ-ಖೋ ಮೊದಲಾದ ದೇಸಿ ಕ್ರೀಡೆಗಳನ್ನು ಆಯೋಜಿಸುವ ಚಿಂತನೆ ಇದೆ ಎಂದರು.

ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಕೆಂಪಣ್ಣಾ ವಾಸೇದಾರ, ನಂದು ಮುಡಸಿ, ಶಿವನಗೌಡ ಮದವಾಲ, ಪಿಕಾರ್ಡ ಬ್ಯಾಂಕ ನಿರ್ದೇಶಕ ಶೀತಲ ಬ್ಯಾಳಿ, ಗುರಪ್ಪಾ ತಳವಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಗಂಗಾಧರ ನಾಂವಿ, ಮುಖಂಡರಾದ ಸಂದೀಪ ಕತ್ತಿ, ಸುಧೀರ ಕತ್ತಿ, ಮಹಾನಿಂಗ ಶೆಟ್ಟಿ, ಎಂ.ಕೆ.ಪೂಜೇರಿ, ಸಿದ್ದಲಿಂಗಯ್ಯಾ ಕಡಹಟ್ಟಿಮಠ, ಅಶೋಕ ಬೆಲ್ಲದ, ಅಪ್ಪಾಸಾಹೇಬ ಖೇಮಲಾಪೂರೆ, ಎ.ಕೆ.ಪಾಟೀಲ, ಲಾಜಮ್ ನಾಯಿಕವಾಡಿ, ಶ್ರೀಶೈಲ ಮಠಪತಿ, ಬಸವರಾಜ ತಳವಾರ, ಲಕ್ಷ್ಮಣ ರಾಮದುರ್ಗ, ಯಾಸೀನ್ ಕಲೈಗಾರ, ಸತ್ತೆಪ್ಪಾ ಚಂದರಗಿ, ಆನಂದ ಲಕ್ಕುಂಡಿ, ಇಲಿಯಾಸ ಅತ್ತಾರ, ರಾಜು ಮುನ್ನೋಳಿ, ಗುರಪ್ಪಾ ತಳವಾರ, ಸುನೀಲ ಬೆಲ್ಲದ, ರವಿ ಕತ್ತಿ, ಶ್ರೀಶೈಲ ಚರಾಟಿ ಇತರರಿದ್ದರು. ವಿ.ಎಂ.ಕತ್ತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ ಸ್ವಾಗತಿಸಿದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept