ಸ್ಥಳೀಯ ಬಸ್ ನಿಲ್ದಾಣದಲ್ಲಿ ಮುಖಂಡರಾದ ಪೃಥ್ವಿ ಕತ್ತಿ ಮತ್ತು ಶ್ಯಾನೂರ ತಹಸೀಲ್ದಾರ ಅವರನ್ನು ಸಾರಿಗೆ ಇಲಾಖೆಯಿಂದ ಸನ್ಮಾನಿಲಾಯಿತು. ಎಚ್.ಎಚ್.ಚಕ್ರವರ್ತಿ, ಎಸ್.ಸಿ ಹೊಸಪೇಟ, ಎಸ್.ಆರ್ ಜೋಗಿರಾಮಗೋಳ ಇತರರಿದ್ದರು.
ಹುಕ್ಕೇರಿ: ಸುರಕ್ಷಿತ ಪ್ರಯಾಣಕ್ಕಾಗಿ 20 ನೂತನ ಬಸ್‌ಗಳನ್ನು ಸಾರಿಗೆ ಇಲಾಖೆಗೆ ಕೇಳಿಕೊಳ್ಳಲಾಗಿತ್ತು ಆ ಪೈಕಿ ಈಗ 6 ಬಸ್ ಹುಕ್ಕೇರಿ ಡಿಪೋ ಬಂದಿವೆ. ಮುಂಬರುವ ದಿನಗಳಲ್ಲಿ ಉಳಿದ ಬಸ್‌ಗಳು ಸಹ ಹಂತ ಹಂತವಾಗಿ ಬರಲಿವೆ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಶನಿವಾರದಂದು ಸ್ಥಳೀಯ ಬಸ್ ನಿಲ್ದಾಣದಲ್ಲಿ ನೂತನವಾಗಿ ಪ್ರಾರಂಭಗೊ0ಡ ಹುಕ್ಕೇರಿ-ಪಂಡರಪುರ ಮತ್ತು ಹುಕ್ಕೇರಿ-ಪುಣೆ ನೂತನ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು. ಶಾಸಕ ನಿಖಿಲ ಕತ್ತಿ ಅವರು ಹುಕ್ಕೇರಿ ಮತ್ತು ಸಂಕೇಶ್ವರ ಡಿಪೋಗಳಿಗೆ ನೂತನ ಬಸ್ ಗಳನ್ನು ನೀಡಲು ಸಾರಿಗೆ ನಿಗಮದ ಅಧ್ಯಕ್ಷ ಶಾಸಕ ರಾಜು ಕಾಗೆ ಅವರಲ್ಲಿ ವಿನಂತಿಸಿಕೊ0ಡಿದ್ದರು. ಅದರ ಪರಿಣಾಮ ಇದೀಗ 6 ಬಸ್ ಬಂದಿವೆ. ಇನ್ನಷ್ಟೂ ಬಸ್ ಬರಲಿವೆ ಎಂದರು.

ಹುಕ್ಕೇರಿ ಬಸ್ ಡಿಪೋ ಮ್ಯಾನೇಜರ್ ಎಚ್.ಎಚ್.ಚಕ್ರವತಿ ಮಾತನಾಡಿ ಈ ಭಾಗದಿಂದ ಪಂಡರಪುರ್ ವಿಠ್ಠಲ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಧರ್ಶನಕ್ಕೆ ತೆರಳುತ್ತಾರೆ. ಅವರ ಅನುಕೂಲಕ್ಕಾಗಿ ಈ ಬಸ್ ಗಳನ್ನು ಪ್ರಾರಂಭಿಸಲಾಗಿದೆ. ಕಾರಣ ಪ್ರಯಾಣಿಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿ ನೂತನ ಬಸ್‌ಗಳ ಪ್ರಯಾಣದ ವಿವರ ತಿಳಿಸಿದರು.


ಇದೇ ಸಂದರ್ಭದಲ್ಲಿ ಪೃಥ್ವಿ ಕತ್ತಿ ಮತ್ತು ಶ್ಯಾನೂರ ತಹಸೀಲ್ದಾರ ಅವರನ್ನು ಸನ್ಮಾನಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶ್ಯಾನೂರ ತಹಸೀಲ್ದಾರ, ಸಾರಿಗೆ ಇಲಾಖೆ ಅಧಿಕಾರಿಗಳಾದ ಎಸ್.ಸಿ ಹೊಸಪೇಟ, ಎಸ್.ಆರ್.ಜೋಗಿರಾಮಗೋಳ, ಸಿದ್ದಪ್ಪಾ ತಳವಾರ, ಬಿ.ಕೆ.ಕರೋಶಿ, ಎಸ್.ಆರ್.ರಾಣವ್ವಗೋಳ, ಎಚ್.ಆರ್.ಹೂಗಾರ, ಎಲ್.ಬಿ.ಚೌಗಲಾ, ಬಸವರಾಜ ಖೋತ, ವಿರುಪಾಕ್ಷಿ ಚಿಕ್ಕಣಗಿ ಮತ್ತಿತರರಿದ್ದರು.





