ತಾಲೂಕಿನ ಹಿಡಕಲ್ ಡ್ಯಾಮಿನ ಬಸವೇಶ್ವರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವನ್ನು ಮಲ್ಲಯ್ಯಾ ಸ್ವಾಮಿಗಳು ಉದ್ಘಾಟಿಸಿದರು. ಗುರಪ್ಪಾ ತಳವಾರ, ಸುನೀಲ ತಳವಾರ, ಆರ್.ಎಸ್.ನಾಶಿಪುಡಿ ಇತರರಿದ್ದರು.
ಹುಕ್ಕೇರಿ: ಸುಂದರ ಬದುಕಿಗೆ ಒಳ್ಳೆಯ ನಿರ್ಧಾರ ಅವಶ್ಯ. ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಮಹತ್ತರ ಘಟ್ಟವಾಗಿದೆ ಎಂದು ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಹಿಡಕಲ್‌ಡ್ಯಾಮಿನಲ್ಲಿ ಬಸವೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜುನಲ್ಲಿ ನಡೆದ ೨೦೨೫-೨೬ನೇ ಸಾಲಿನ ಪಿಯುಸಿ ದ್ವೀತಿಯ ವರ್ಷ ವಿದ್ಯಾರ್ಥಿಗಳ ಬಿಳ್ಕೋಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿದ್ಯ ವಹಿಸಿ ಮಾತನಾಡಿದರು.
ನಕಾರಾತ್ಮಕ ವಿಚಾರಗಳನ್ನು ನಿರ್ಲಕ್ಷಿಸಿ ಸಕಾರಾತ್ಮಕ ವಿಚಾರಗಳು ಸ್ವೀಕರಿಸಿ ಜೀವನ ಸಾಗಿಸಬೇಕು. ಕಲಿಸಿದ ಗುರುಗಳನ್ನು ಗೌರವಿಸಬೇಕೆಂದು ಹೇಳಿದರು.
ಶಿಕ್ಷಣ ಪ್ರೇಮಿ ಗುರಪ್ಪ ತಳವಾರ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಅನೇಕ ಏಳು ಬೀಳುಗಳ ನಡುವೆ ಛಲದಿಂದ ಬೆಳಸಿ ಉಳಿಸಿಕೊಂಡು ಬಂದಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಲ್ತಾನಪೂರ ಎಸ್.ಬಿ.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ ವಹಿಸಿದರು. ಆರ್,ಪಿ ನಾಯಕ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಾದ ಸುಪ್ರೀಯಾ ಹರಿಜನ, ತೇಜಸ್ವಿನಿ ವಡ್ಡರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಸುನೀಲ ತಳವಾರ, ಸಾಹಿತಿಗಳಾದ ಮಹೇಶ ದೇಶಪಾಂಡೆ, ಪ್ರಾಚಾರ್ಯ ಆರ್.ಎಸ್. ನಾಶಿಪುಡಿ, ನಿವೃತ್ತ ಪ್ರಾಚಾರ್ಯ ಎಂ.ಎಲ್. ಮಗದುಮ್ಮ, ನಿವೃತ್ತ ಉಪನ್ಯಾಸಕ ಎ.ಎಲ್. ದಳವಾಯಿ, ಉಪನ್ಯಾಸಕರಾದ ಎಸ್.ಸಿ. ಪಾಟೀಲ, ಆರ್.ಜಿ. ಹವಾಲ್ದಾರ, ಎ.ಬಿ. ಗುರಕ್ಕನವರ, ಆರ್.ಆರ್. ಹಿರೇಮನಿ, ಎಸ್.ಎ. ಮಲನಾಯಕ, ವ್ಹಿ.ಎಸ್. ತಳವಾರ ಮತ್ತಿತರರಿದ್ದರು.





