ಪಟ್ಟಣದ ವಿದ್ಯುತ್ ಸಹಕಾರಿ ಸಂಘದ ನೌಕರರ ವಸತಿ ಗೃಹಗಳ ಕಾಲನಿಯ ಗಣಪತಿ ದೇವಸ್ಥಾನದ 39ನೇ ವಾರ್ಷಿಕೋತ್ಸವದಲ್ಲಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಮಹಾವೀರ ನಿಲಜಗಿ, ಅಜಿತ ಮುನ್ನೋಳಿ, ಪೃಥ್ವಿ ಕತ್ತಿ, ವಿನಯಗೌಡ ಪಾಟೀಲ ಇತರರಿದ್ದರು.
ಹುಕ್ಕೇರಿ : ಧಾರ್ಮಿಕ ಕಾರ್ಯಕ್ರಮಗಳಿಂದ ನಮ್ಮಲ್ಲಿ ಒಳ್ಳೆಯ ಆಚಾರ ವಿಚಾರಗಳು ಬೆಳೆಯುತ್ತವೆ. ಅದಕ್ಕಾಗಿ ಹಿರಿಯರು ಮೊದಲಿನಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನ ಹಮ್ಮಿಕೊಳ್ಳುತ್ತಾರೆಂದು ಉದ್ಯಮಿ ಪೃಥ್ವಿ ಕತ್ತಿ ಹೇಳಿದರು.
ಸೋಮವಾರದಂದು ಪಟ್ಟಣದ ವಿದ್ಯುತ್ ಸಹಕಾರಿ ಸಂಘದ ನೌಕರರ ವಸತಿ ಗೃಹಗಳ ಕಾಲನಿಯಲ್ಲಿ ಗಣಪತಿ ದೇವಸ್ಥಾನದ ೩೯ನೇ ವಾರ್ಷಿಕೋತ್ಸವದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಇಂದಿನ ಯುವ ಜನಾಂಗಕ್ಕೆ ಇಂತಹ ಆಚಾರ ವಿಚಾರಗಳ ತಿಳುವಳಿಕೆ ಅವಶ್ಯ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದರು.
ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ನಿರ್ದೇಶಕ ವಿನಯಗೌಡ ಪಾಟೀಲ ಅವರು ಮಾತನಾಡಿ ಸಂಘದ ನೌಕರರು ತಮ್ಮ ವಸತಿ ಗೃಹದಲ್ಲಿ ನಿರ್ಮಿಸಿಕೊಂಡ ಗಣಪತಿ ದೇವಸ್ಥಾನ ಇಂದು ಪಟ್ಟಣದ ಜತೆಗೆ ನೆರೆಯ ಗ್ರಾಮಗಳ ಭಕ್ತರ ಆರಾಧ್ಯ ಮತ್ತು ಶ್ರದ್ಧಾ ಭಕ್ತಿಗಳೋ ತಾಣವಾಗಿದೆ. ಪ್ರತಿ ವರ್ಷ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಭಕ್ತಿ ಭಾವ ಹೆಚ್ಚಿಸಿದ್ದಾರೆಂದರು.
ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ನೇಮಿನಾಥ ಖೇಮಲಾಪೂರೆ ಅವರು ಸಂಘದ ನಿರ್ದೇಶಕರನ್ನು ಸನ್ಮಾನಿಸಿದರು. ಆರ್ಚಕ ಶಾಂತಯ್ಯಾ ಹಿರೇಮಠ ಅವರ ನೇತೃತ್ವದಲ್ಲಿ ಹೋಮ ಹವನ, ವಿಶೇಷ ಪೂಜೆ ಜರುಗಿತು.
ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಗಜಾನನ ಕ್ವಳ್ಳಿ, ಕಲಗೌಡ ಪಾಟೀಲ, ಕೆಂಪಣ್ಣಾ ದೇಸಾಯಿ, ಶಿವಾನಂದ ಮುಡಸಿ, ಶಿವನಗೌಡ ಮದವಾಲ, ಸತ್ತೆಪ್ಪಾ ನಾಯಿಕ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕೆಪ್ಪಗೋಳ ಮುಖಂಡರಾದ ಸಂಜಯ ನಿಲಜಗಿ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಮಲಗೌಡ ಪಾಟೀಲ, ಲಾಜಮ ನಾಯಿಕವಾಡಿ, ಆನಂದ ಲಕ್ಕುಂಡಿ, ಬಸವರಾಜ ಹಿರೇಮಠ, ವಿದ್ಯುತ್ ಸಹಕಾರಿ ಸಂಘದ ರೆಸಿಡೆಂಟ ಇಂಜನೀಯರ ನೇಮಿನಾಥ ಖೇಮಲಾಪೂರೆ, ಅಧಿಕಾರಿಗಳಾದ ಉದಯ ಮಗದುಮ್ಮ, ಬಸವರಾಜ ವಾಜಂತ್ರಿ, ವಿನಾಯಕ ರಾಮದುರ್ಗ, ಸಂದೀಪ ಕುಲಕರ್ಣಿ ಮತ್ತಿತರರಿದ್ದರು.





