ಸ್ಥಳೀಯ ಆಂಜನೇಯ ನಗರದಲ್ಲಿ ರಮೇಶ ಕತ್ತಿ ಅವರನ್ನು ಸನ್ಮಾನಿಸಿದರು. ಮಹಾವೀರ ನಿಲಜಗಿ, ರವಿ ಕರಾಳೆ, ಗುರುರಾಜ ಕುಲಕರ್ಣಿ, ಮಲ್ಲಪ್ಪಾ ಬಿಸಿರೊಟ್ಟಿ, ಸಂಜೀವ ವಂಜೀರೆ ಇತರರಿದ್ದರು.
ಹುಕ್ಕೇರಿ : ಮಾನ ಸಂಘ ಜೀವಿ, ಸಂಘಟನೆ ಮತ್ತು ಜನಪರ ಹೋರಾಟ ಯಾವಾಗಲೂ ನಾವು ರೂಢಿಸಿಕೊಳ್ಳಬೇಕು. ಆದರೆ ಅದು ನ್ಯಾಯಪರವಾದ ಬೇಡಿಕೆಯಾಗಿರಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸೋಮವಾರದಂದು ಪಟ್ಟಣದ ಆಂಜನೇಯ ನಗರ ನಿವಾಸಿಗಳು ಪ್ರಾರಂಭಿಸಿದ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಹುಕ್ಕೇರಿ ಪಟ್ಟಣ ಇತ್ಥಿಚಿನ ದಿನಗಳಲ್ಲಿ ಜನದಟ್ಟ್ಟಣೆ ಪಟ್ಟಣವಾಗುತ್ತಿದೆ. ನೂತನ ಬಡಾವಣೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಾದ ಕರ್ತವ್ಯ ನಮ್ಮದಾಗಿದೆ. ಅದಕ್ಕಾಗಿ ಯಾವಾಗಲೂ ಕತ್ತಿ ಕುಟುಂಬ ಬದ್ಧವಾಗಿದೆ ಎಂದು ತಿಳಿಸಿದರು.

ಇಲ್ಲಿನ ರಹವಾಸಿಗಳು ರಚಿಸಿಕೊಂಡ ಸಂಘದ ಮೂಲಕ ಹಲವಾರು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರೂ ಒಂದು ಕುಟುಂಬದAತೆ ವಾಸಿಸಬೇಕು.ಸ ಪ್ರತಿಯೊಬ್ಬರ ಕುಶಲೋಪರಿ ಚರ್ಚಿಸಿ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆಯಿತ್ತರು.
ಶಿಕ್ಷಣ ಇಲಾಖೆಯ ಬಿ.ಆರ್.ಪಿ ನಾಗವೇಣಿ ಮಾತನಾಡಿ ಹುಕ್ಕೇರಿ ಹೂವಿನಕೇರಿ ಆಗಿತ್ತು. ಅಂತಹ ಗತವೈಭವ ಮರುಕಳಿಸುವಂತೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣವೆಂದರು. ಸಂಘದ ಅಧ್ಯಕ್ಷ ಸಂಜೀವ ವಂಜೀರೆ ಮಾತನಾಡಿ ಸಂಘದ ಉದ್ದೇಸಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಎರಡನೇ ಸ್ಥಾನ ಪಡೆದ ನಿಖಿತಾ ಮುದವೀರ ಅವರನ್ನು ಸನ್ಮಾನಿಸಿದರು.
ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡರಾದ ರವಿ ಕರಾಳೆ, ಗುರುರಾಜ ಕುಲಕರ್ಣಿ, ಮಲ್ಲಪ್ಪಾ ಬಿಸಿರೊಟ್ಟಿ, ಬಸವರಾಜ ಗಂಗನ್ನವರ, ಲಾಜಮ ನಾಯಿಕವಾಡಿ, ಡಾ.ವಿಜಯ ಬಡಿಗೇರ, ರೇಖಾ ಚಿಕ್ಕೋಡಿ, ಸವಿತಾ ಏಣಗಿಮಠ, ಶರ್ಮಿಳಾ ಬಡಮಲ್ಲನವರ, ಶಾಂತಾ ಸೊಲ್ಲಾಪೂರೆ ಹಾಗೂ ಸಂಘದ ಪದಾದಿಕಾರಿಗಳಿದ್ದರು. ಆಯ್.ಡಿ.ಜಕಾತಿ ಸ್ವಾಗತಿಸಿದರು. ಸಿ.ಎಂ.ದರಬಾರೆ ನಿರೂಪಿಸಿದರು. ಕೆಂಪಣ್ಣಾ ಮೋಶಿ ವಂದಿಸಿದರು.





