ಹುಕ್ಕೇರಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಹಿನ್ನೆಲೆಯಲ್ಲಿ ಹೊಟೇಲ್ ವ್ಯವಹಾರ ಸ್ಥಗಿತಗೊಂಡು, ಸಾಲದ ಬಡ್ಡಿ ಹೆಚ್ಚಳದ ಒತ್ತಡ ತಾಳಲಾರದೆ ಹೊಟೇಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಘಟನೆ ವಿವರ: ಹುಕ್ಕೇರಿ ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿಯ ಹನುಮಾನ ಹೊಟೇಲ ನಡೆಸುತ್ತಿದ್ದ ರಾಮ ಹಳ್ಳೂರಿ (50) ಕಳೆದ ಕೆಲವು ದಿನಗಳಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಿಗದ ಕಾರಣ ಹೊಟೇಲ್ ಸಂಪೂರ್ಣವಾಗಿ ಬಂದ್ ಆಗಿತ್ತು. ಇದರಿಂದ ಆದಾಯ ಇಲ್ಲದೇ ಆರ್ಥಿಕ ಸಂಕಷ್ಟ ಗಂಭೀರಗೊ0ಡಿತ್ತು. ಸಾಲದ ಒತ್ತಡ ಮತ್ತು ವ್ಯಾಪಾರ ನಷ್ಟದಿಂದ ಮಾನಸಿಕವಾಗಿ ಕುಗ್ಗಿದ ಮೃತ ರಾಮ ಹಳ್ಳೂರಿ ಮಂಗಳವಾರ ಬೆಳಿಗ್ಗೆ ಹೊಟೇಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ0ದು ಅವರ ಪುತ್ರ ಉದಯ ಹಳ್ಳೂರಿ ತಿಳಿಸಿದ್ದಾನೆ.
ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆ ಘಟನೆಯ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.




