ಹುಕ್ಕೇರಿ ತಹಸೀಲ್ದಾರ ಕಾರ್ಯಾಲಯದಲ್ಲಿ ಗ್ರೇಡ್ 2 ತಹಸೀಲ್ದಾರ ಪ್ರಕಾಶ ಕಲ್ಲೋಳಿ ಅವರು ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆನಂದ ಕುರ್ಲಿ. ರಮೇಶ ನಾವಿ, ಬಸು ಮುಗಳಿ, ಸಚಿನ ನಾವಿ, ಸಂತೋಷ ನಾವಿ ಇತರರಿದ್ದರು.
ಹುಕ್ಕೇರಿ: ತಾಲೂಕಾಡಳಿತ ಮತ್ತು ಹಡಪದ ಸಮಾಜ ಬಾಂಧವರ ಆಶ್ರಯದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 891 ನೇ ಜಯಂತಿಯನ್ನು ಆಚರಿಸಿದರು.
ಗುರುವಾರದಂದು ತಹಸೀಲ್ದಾರ ಕಾರ್ಯಾಲಯದಲ್ಲಿ ಗ್ರೇಡ್ ತಹಸೀಲ್ದಾರ ಪ್ರಕಾಶ ಕಲ್ಲೋಳಿ ಅವರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.ನಂತರ ಮಾತನಾಡುತ್ತಾ 12ನೇ ಶತಮಾನದಲ್ಲಿ ಬಸವಣ್ಣನವರು ಶಿವಶರಣ ಹಡಪದ ಅಪ್ಪಣ್ಣ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೇ ಎಲ್ಲ ಸಮಾಜಗಳಿಗೂ ಅನ್ವಯಿಸುವಂತೆ ವಚನಗಳನ್ನು ರಚಿಸಿದರು. ಅವರು ರಚಿಸಿದ ವಚನಗಳು ಎಲ್ಲರಲ್ಲಿಯೂ ಪ್ರೀತಿ ವಿಶ್ವಾಸ ಪರಸ್ಪರ ಸಂಬಂಧಗಳು ಮತ್ತು ಎಲ್ಲರೂ ಒಂದೇ ಎಂಬ ಸಮಾನತೆಯ ಮನೋಭಾವ ಹೊಂದಿದ್ದವು ಎಂದರು.
ಇದಕ್ಕೂ ಮುನ್ನ ತಾಲೂಕಿನ ಹಿಡಕಲ್ ಡ್ಯಾಮಿನ ದೂದ್ ನಾನಾ ಬುದ್ಧಿ ವಿಕಾಸ ಶಾಲೆಯ ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಹಾಗೂ ಒಂದು ದಿನದ ಪ್ರಸಾದ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದರು.
ಸಮಾಜದ ತಾಲೂಕ ಅಧ್ಯಕ್ಷರಾದ ಆನಂದ ಕುರ್ಲಿ. ರಮೇಶ ನಾವಿ, ಶಿವಾನಂದ ನಾವಿ, ರವಿ ಕೋರೆ, ವಿಠ್ಠಲ ನಾವಿ, ರಾಮಚಂದ್ರ ನಾವಿ. ಬಸು ಮುಗಳಿ, ಸಚಿನ ನಾವಿ, ವೀರಭದ್ರ ನಾವಿ, ವಿನೋದ ಯರನಾಳ, ಸುನೀಲ ಯರನಾಳ, ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾವಿ ಕಂದಾಯ ಇಲಾಖೆಯ ಅನಿತಾ ಎಸಿ, ಎನ್.ಆರ್. ಪಾಟೀಲ. ಉಪ ಬಸವರಾಜ ನಾಂದೂರಕರ ಮತ್ತಿತರರಿದ್ದರು.





