ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯ ಪ್ರಶಂಸನೀಯ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ತಾಲೂಕಿನ ನೇರಲಿ ಗ್ರಾಮದ ಪಿಕೆಪಿಎಸ್‌ನವರು ಆಯೋಜಿಸಿದ್ದ  “ಏಕ ಪೇಡ್‌ ಮಾ ಕೆ ನಾಮ” ಅಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಶಾಸಕ ನಿಖಿಲ ಕತ್ತಿ ಸಸಿಗೆ ನೀರುಣಿಸಿದರು.ಈಶ್ವರ ಖೋತ, ರುದ್ರಗೌಡ ಪಾಟೀಲ, ಬಸವಪ್ರಸಾದ ಸಂಕಪಾಳ, ಎಸ್.ಕೆ.ಹುಕ್ಕೇರಿ ಇತರರಿದ್ದರು.

ಹುಕ್ಕೇರಿ :  ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಅದನ್ನು ಬೆಳೆಸಲು ಮತ್ತು ಪರಿಸರ ಉಳಿಸಲು ನೇರಲಿ ರೈತರ ಸಹಕಾರಿ ಸಂಘ ಮುಂದಾಗಿರುವುದು ಪ್ರಶಂಸನೀಯ ಕಾರ್ಯವೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

   ಶುಕ್ರವಾರದಂದು ತಾಲೂಕಿನ ನೇರಲಿ ಗ್ರಾಮದ ಪಿಕೆಪಿಎಸ್‌ನವರು “ಏಕ ಪೇಡ್‌ ಮಾ ಕೆ ನಾಮ” ಅಡಿ ಆಯೋಜಿಸಿದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ತಾಯಿಯನ್ನು ದೇವರಿಗೆ ಸಮಾನವಾಗಿ ಕಾಣುವ ನಾವು ಇದೀಗ ಅವರ ಹೆಸರಿನಲ್ಲಿ ಸಸಿ ನೆಡುವುದರಿಂದ ಅದರ ಕುರಿತು ಕಾಳಜಿ ವಹಿಸಿ ಬೆಳೆಸುತ್ತೇವೆ ಎಂದರು.ಇಂತಹ ಯೋಜನೆ ಪ್ರತಿಯೊಂದು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕು ಎಂದರು.

  ಶಾಸಕ ನಿಖಿಲ ಕತ್ತಿ ಸಸಿ ವಿತರಿಸಿ ಮಾತನಾಡುತ್ತಾ ನಮ್ಮ ತಂದೆ ದಿ.ಉಮೇಶ ಕತ್ತಿ ಅರಣ್ಯ ಸಚಿವರಾಗಿದ್ದಾಗ ರಾಜ್ಯದಲ್ಲಿ ಶೇ.35 ರಷ್ಟು ಅರಣ್ಯ ಉಳಿಸಿ ಬೆಳೆಸುವ ಸಂಕಲ್ಪ ಇಟ್ಟುಕೊಂಡಿದ್ದರು.ಅವರ ಕನಸನ್ನು ನನಸು ಮಾಡಲು ಪ್ರತಿಯೊಬ್ಬರು ಸಸಿ ನೆಟ್ಟು ಅವುಗಳನ್ನು ಬೆಳೆಸುವ ಕಾರ್ಯ ಮಾಡಬೇಕೆಂದರು.ಗ್ರಾಮೀಣ ಜನರ ಆರ್ಥಿಕ ಜೀವನಾಡಿಯಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಪರಿಸರದ ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದರು. ಇದೇ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರನ್ನು ಪಿಕೆಪಿಎಸ್‌ನಿಂದ ಸತ್ಕರಿಸಿದರು.

  ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ, ಉಪಾಧ್ಯಕ್ಷ ಬಸವಪ್ರಸಾದ ಸಂಕಪಾಳ, ನಿರ್ದೇಶಕರಾದ ಎಸ್.ಕೆ.ಹುಕ್ಕೇರಿ, ಮಧುಕರ ಖೋತ, ಈರಪ್ಪಾ ಲಬ್ಬಿ, ಆಕಾಶ ಗುರವ, ಶೋಭಾ ಕಲ್ಲೋಳಿಮಠ, ಗಾಯತ್ರಿ ಹೊಸಗೌಡ, ಸುನೀಲ ಹೊಸಮನಿ, ಅಪ್ಪಾಸಾಹೇಬ ಪಾಟೀಲ, ಅಣ್ಣಾಗೌಡಾ ಪಾಟೀಲ, ಮಾಜಿ ಅಧ್ಯಕ್ಷ ಈಶ್ವರ ಖೋತ, ಸಿ.ಡಿ.ಒ ಶಶಿಕಲಾ ಪಾಟೀಲ, ಡಿಸಿಸಿ ತಾಲೂಕಾ ನಿಯಂತ್ರಣಾಧಿಕಾರಿ ಮಹಾಂತೇಶ ಕೋಟಗಿ, ಸೈದಪ್ಪಾ ಗದಾಡಿ, ಬ್ಯಾಂಕ ನಿರೀಕ್ಷಕ ಕೆಂಪಯ್ಯಾ ಗವಿಮಠ, ಸಿಇಒ ರಾಮಪ್ಪಾ ಶಿಂಧೆ ಹಾಗೂ ಮುಖಂಡರಿದ್ದರು. ವಕೀಲ ಬಸವಪ್ರಸಾದ ಸಂಕಪಾಳ ಸ್ವಾಗತಿಸಿದರು. ರಾಮಪ್ಪಾ ಶಿಂಧೆ ನಿರೂಪಿಸಿ ವಂದಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept