ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹುಕ್ಕೇರಿ ಶಾಖೆಯ 11ನೇ ವಾರ್ಷಿಕೋತ್ಸವ

ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹುಕ್ಕೇರಿ ಶಾಖೆಯು ೧೧ನೇ ವಾರ್ಷಿಕೋತ್ಸವ ಪೂಜೆ ನೆರವೇರಿಸಿದ ಪದಾಧಿಕಾರಿಗಳು. ಪಿಂಟು ಶೆಟ್ಟಿ, ರಾಮಣ್ಣಾ ಬೋರಗಲ್ಲಿ, ಸೋಮಶೇಖರ ಕೋಟಗಿ, ಮಹಾಂತೇಶ ವಸ್ತ್ರದ ಇತರರಿದ್ದರು.

ಹುಕ್ಕೇರಿ: ಪಟ್ಟಣದ ಗ್ರಾಹಕರ ಮೆಚ್ಚುಗೆ ಮತ್ತು ವಿಶ್ವಾಸಕ್ಕೆ ಹೆಸರಾದ ನಿಪ್ಪಾಣಿ ಮೂಲದ ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹುಕ್ಕೇರಿ ಶಾಖೆಯು 11ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಶಾಖಾ ಚೇರಮನ್ ಪಿಂಟು (ಶಿವರುದ್ರಪ್ಪಾ) ಶೆಟ್ಟಿ ಹೇಳಿದರು.

            ರವಿವಾರದಂದು ಹುಕ್ಕೇರಿ ಶಾಖೆಯ ಕಾರ್ಯಾಲಯದಲ್ಲಿ 11ನೇ ವಾರ್ಷಿಕೋತ್ಸವದ ಪೂಜೆ ನೆರವೇರಿಸಿ ಮಾತನಾಡಿದರು. ಸಂಘದ ಸಂಸ್ಥಾಪಕ ಚೇರಮನ್ ಡಾ.ಚಂದ್ರಕಾಂತ ಕುರಬೇಟ ಅವರ ಮಾರ್ಗದರ್ಶನದಲ್ಲಿ ಶಾಖೆಯು ಪ್ರಸಕ್ತ ವರ್ಷಾಂತ್ಯಕ್ಕೆ 20 ಕೋಟಿ 93 ಲಕ್ಷ ರೂ ಠೇವಣಿ ಸಂಗ್ರಹಿಸಿ 17ಕೋಟಿ 67ಲಕ್ಷ ರೂ ಸಾಲ ನೀಡಲಾಗಿದೆ ಎಂದರು. 115ಕೋಟಿ 52ಲಕ್ಷ ರೂ ವಾರ್ಷಿಕ ವಹಿವಾಟು ನಡೆಸಿದ ಸಂಘ 1 ಕೋಟಿ 24 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

         ಶಾಖಾ ವ್ಯವಸ್ಥಾಪಕ ಮಹಾದೇವ ಕರನೂರೆ ಮಾತನಾಡಿ ಸಂಘ 35 ಶಾಖೆ ಹೊಂದಿದ್ದು, ಕೋರ್ ಬ್ಯಾಂಕಿಂಗ್, ನೆಪ್ಟ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.ಇದರ ಜತೆಗೆ ಸಂಘದ ಸದಸ್ಯರು ನಿಧನರಾದಾಗ ಅವರ ಅಂತ್ಯಕ್ರಿಯೆಗೆ 10 ಸಾವಿರ ರೂ ನೀಡುತ್ತೇವೆಂದರು.

ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹುಕ್ಕೇರಿ ಶಾಖೆಯು ನಿರ್ದೇಶಕರು ಮತ್ತು ಸಿಬ್ಬಂದಿ.

   ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಓಂಕಾರ ಹೆದ್ದೂರಶೆಟ್ಟಿ ಅವರ ಮಗ ಸೈನಿಕ ಸ್ಕೂಲಿನ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ರ‍್ಯಾಂಕ್ ಬಂದ ಪ್ರಯುಕ್ತ ಆರವ್‌ನನ್ನು ಸನ್ಮಾನಿಸಿದರು.

ಸೈನಿಕ ಸ್ಕೂಲಿನ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಬಂದ ಪ್ರಯುಕ್ತ ಆರವ್ನನ್ನು ಸನ್ಮಾನಿಸಿದರು

   ನಿರ್ದೇಶಕರಾದ ಮಹಾಂತೇಶ ವಸ್ತ್ರದ, ರಾಮಣ್ಣಾ ಬೋರಗಲ್ಲೆ, ಸೋಮಶೇಖರ ಕೋಟಗಿ, ಸಿಬ್ಬಂದಿಗಳಾದ ವಿಜಯ ಉಪಾಸೆ, ಮಹೇಶ ಜೀವನಿ, ಪಿಂಟು ಹಲಗೆ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept