ರಾಷ್ಟ್ರಮಟ್ಟದ ಸ್ಪರ್ಧಾ ಪರೀಕ್ಷೆಗಳಲ್ಲಿ ಆಯ್ಕೆಯಾದ ಸ್ಥಳೀಯ ಎಸ್.ಕೆ. ಪಬ್ಲಿಕ್ ಸಿಬಿಎಸ್‌ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.ಪಿಂಟು ಶೆಟ್ಟಿ, ರಾಘವೇಂದ್ರ ಕುಲಕರ್ಣಿ, ಓಂಕಾರ ಹೆದ್ದೂರಶೆಟ್ಟಿ, ಸಂತೋಷ ದೇಶಪಾಂಡೆ ಇತರರಿದ್ದರು.
ಹುಕ್ಕೇರಿ: ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಮೋಘ ದೇಶಪಾಂಡೆ ಖಾಸಗಿ ವಾಹಿನಿಯ ಸರಿಗಮಪ ಸ್ಪರ್ಧಾ ಕಾರ್ಯಕ್ರಮದಲ್ಲಿ ಆಯ್ಕೆಯಾಗಿ ಫಿನಾಲೆವರೆಗೆ ಪಾಲ್ಗೊಂಡಿದ್ದು ಸಂತಸ, ಸಂಭ್ರಮದ ಸಂಗತಿ ಎಂದು ಎಸ್.ಕೆ ಪಬ್ಲಿಕ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿಂಟು(ಶಿವರುದ್ರಪ್ಪಾ) ಶೆಟ್ಟಿ ಹೇಳಿದರು.
ಅವರು ಗುರುವಾರದಂದು ಪಟ್ಟಣದ ಎಸ್.ಕೆ. ಪಬ್ಲಿಕ್ ಸ್ಕೂಲಿನ ಸಿಬಿಎಸ್‌ಸಿನ ವಿದ್ಯಾರ್ಥಿಗಳು ಸೈನಿಕ ಶಾಲೆಗೆ, ಮೂರಾರ್ಜಿ ವಸತಿ ಶಾಲೆಗೆ, ರಾಷ್ಟ್ರೀಯ ಸೈನಿಕ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ವಿಭಿನ್ನ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಲಲ್ಲಿ ಅಡಗಿರುವ ಸುಪ್ತ ಪ್ರತಿಭೆ ಇಂತಹ ಸ್ಪರ್ಧೆಗಳಿಂದ ಜಗತ್ತಿಗೆ ಗೊತ್ತಾಗುತ್ತದೆ ಎಂದರು.
ಪ್ರಾಚಾರ್ಯ ರಾಘವೇಂದ್ರ ಕುಲಕರ್ಣಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟçಮಟ್ಟದ ಪೈಪೋಟಿ ಸಮರ್ಥವಾಗಿ ಎದುರಿಸಲು ಸನ್ನದಾರಾಗುವಂತೆ ಶಾಲೆಯಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಆಯೋಜಿಸಲಾಗಿದ್ದು ಇದರ ಪ್ರಯೋಜನ ಪಡೆದ ಎಂಟು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಪಾಲಕರ ಪರವಾಗಿ ಸಂತೋಷ ದೇಶಪಾಂಡೆ, ಪ್ರವೀಣ ಹೆದ್ದೂರಶೆಟ್ಟಿ, ಗಾಯಕ ಅಮೋಘವರ್ಷ ದೇಶಪಾಂಡೆ ಮಾತನಾಡಿದರು. ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸೈನಿಕ ಶಾಲೆ ಪೂರ್ವಭಾವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೩ನೇ ಸ್ಥಾನ ಪಡೆದ ಅರವ್ ಹೆದ್ದೂರಶೆಟ್ಟಿ, ಖಾಸಗಿ ವಾಹಿನಿ ಅಂತಿಮ ಹಂತಕ್ಕೆ ತಲುಪಿದ ಅಮೋಘವರ್ಷ ದೇಶಪಾಂಡೆ, ಮೂರಾರ್ಜಿ ವಸತಿ ಶಾಲೆಗೆ ಆಯ್ಕೆಯಾದ ಸಂಜನಾ ವಾಜಂತ್ರಿ, ಶ್ಲೋಕ ಪಟ್ಟಣಶೆಟ್ಟಿ, ಸಮರ್ಥ ವಾಜಂತ್ರಿ, ತೇಜಸ್ ಬೆಟಗೇರಿ, ಅಕ್ಷತಾ ಮರಬಸನ್ನವರ, ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕ ಓಂಕಾರ ಹೆದ್ದೂರ ಶೆಟ್ಟಿ, ಉಪಪಾಚಾರ್ಯ ಅನಿತಾ ದಳವಿ, ಶಿಕ್ಷಕರಾದ ಸಂಪದಾ, ಕೋಚ್ ಶಾಹಿಲ್, ಪಾರ್ವತಿ ಇದ್ದರು. ಗಾಯತ್ರಿ ಸ್ವಾಗತಿಸಿದರು, ಕೀರ್ತಿ ನಿರೂಪಿಸಿ, ವಂದಿಸಿದರು.





