ಸೈನಿಕ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಆರವ ಓಂಕಾರ ಹೆದ್ದೂರಶೆಟ್ಟಿ
ಹುಕ್ಕೇರಿ: ಪಟ್ಟಣದ ಆರವ ಓಂಕಾರ ಹೆದ್ದೂರಶೆಟ್ಟಿ ಸೈನಿಕ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದು ದೇಶಕ್ಕೆ 206ನೇ ರ್ಯಾಂಕ್ ಪಡೆದಿದ್ದಾನೆ. ಈತನ ಸಾಧನೆ ನಮ್ಮ ಸ್ಪರ್ಧಾ ಎಸ್.ಕೆ ಕೋಚಿಂಗ್ ಕೇಂದ್ರಕ್ಕೆ ಕೀರ್ತಿ ತಂದಿದೆ ಎಂದು ಸಿ ಆರ್ ಶೆಟ್ಟಿ ಪೌಂಡೇಶನ್ದ ಅಧ್ಯಕ್ಷ ಪಿಂಟು (ಚನ್ನಬಸವ) ಶೆಟ್ಟಿ ಹೇಳಿದರು.
ಮಂಗಳವಾರದಂದು ಎಸ್.ಕೆ.ಪಬ್ಲಿಕ್ ಶಾಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿ.ಆರ್. ಶೆಟ್ಟಿ ಫೌಂಡೇಶನ್ದ ಸ್ಪರ್ಧಾ ಎಸ್.ಕೆ ಕೋಚಿಂಗ್ ಸೆಂಟರ್ ಪ್ರಾರಂಭಿಸಿದ ಮೊದಲ ವರ್ಷವೇ ಈ ಸಾಧನೆ ಬಂದಿರುವುದು ಸಂತಸ ತಂದಿದೆ ಎಂದರು. ನಮ್ಮ ಕೇಂದ್ರದಿಂದ ತರಬೇತಿ ಪಡೆದ 12 ವಿದ್ಯಾರ್ಥಿಗಳು 2025-26 ನೇ ಸಾಲಿಗೆ ಸೈನಿಕ ಶಾಲೆಗೆ ಅರ್ಹತೆ ಪಡೆದಿದ್ದಾರೆ. 5 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದು. 3 ವಿದ್ಯಾರ್ಥಿಗಳು ರಾಷ್ಟ್ರೀಯ ಮಿಲಿಟರಿ (ಆರ್.ಎಂ.ಎಸ್) ಶಾಲೆಗೆ ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಶೆಟ್ಟಿ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು, ಎಸ್ ಕೆ ಕೋಚಿಂಗ್ ಸೆಂಟರ್ ಮುಖ್ಯಸ್ಥ ರಾಘವೇಂದ್ರ ಕುಲಕರ್ಣಿ ಮತ್ತು ಸಿಬ್ಬಂದಿ ಇದ್ದರು.





