ಮಾಜಿ ಸಂಸದ ರಮೇಶ ಕತ್ತಿ ಅವರು ಸ್ಥಳೀಯ ಸರಕಾರಿ ಆಸ್ಪತ್ರೆ ಮುಂಭಾಗದ ಚರಂಡಿ ದುರ್ವಾಸನೆ ತಡೆಗಟ್ಟಲು ಪುರಸಭೆ ಅಭಿಯಂತರ ರಾಜಶೇಖರ ಪಟ್ಟಣಶೆಟ್ಟಿ ಅವರಿಗೆ ತಿಳಿಸಿದರು. ಎ.ಕೆ.ಪಾಟೀಲ, ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಸುನೀಲ ನೇರಲಿ, ಶೀತಲ ಬ್ಯಾಳಿ, ಎಸ್.ಆರ್.ಕರ್ಕಿನಾಯಿಕ ಇತರರಿದ್ದರು.
ಹುಕ್ಕೇರಿ:ಸ್ಥಳೀಯ ಸರಕಾರಿ ಆಸ್ಪತ್ರೆಗೆ ಆಧುನೀಕತೆ ಒಳಗೊಂಡ ಪ್ರಯೋಗಾಲಯ ನಿರ್ಮಿಸಲು 50 ಲಕ್ಷ ರೂ ಆರೋಗ್ಯ ಇಲಾಖೆಯಿಂದ ಮಂಜೂರಿಯಾಗಿದ್ದು, ರೋಗಿಗಳಿಗೆ ಅನುಕೂಲ ಆಗುವಂತೆ ಕೆಳ ಅಂತಸ್ತಿನಲ್ಲಿ ರಕ್ತ, ಮೂತ್ರ ಸಂಗ್ರಹಿಸಿಕೊಳ್ಳುವುದು. ಮೇಲಂತಸ್ಥಿನಲ್ಲಿ ಸುಸಜ್ಜಿತ ಪ್ರಯೋಗಾಲಯ ನಿರ್ಮಿಸಲು ನಕ್ಷೆ ರಚಿಸಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಅವರು ಶುಕ್ರವಾರದಂದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪ್ರಯೋಗಾಲಯದ ಸ್ಥಳ ವೀಕ್ಷಿಸಿ ಮಾತನಾಡಿದರು.ನಿತ್ಯ 400 ರಿಂದ 500ರೋಗಿಗಳು ತಪಾಸಣೆಗೆ ಆಗಮಿಸುತ್ತಾರೆ. 20 ರಿಂದ 25 ಒಳರೋಗಿಗಳು ಇರುತ್ತಾರೆ.ಇದರ ಜತೆಗೆ ಬಾಣಂತಿಯರು, ಹೆರಿಗೆಯಾದ ಮಹಿಳೆಯರು ಸಾಕಷ್ಟು ಜನ ಈ ಆಸ್ಪತ್ರೆಗೆ ಬರುತ್ತಾರೆ.ಇದರಿಂದ ಈಗೀರುವ ಸೌಲಭ್ಯಗಳ ಜತೆಗೆ ಹೆಚ್ಚುವರಿಯಾಗಿ ಡಯಾಲಿಸಿಸ್ ಕೇಂದ್ರ ಉನ್ನತೀಕರಣ, ಸಿಬ್ಬಂದಿಗಳ ಹಳೆಯದಾದ ವಸತಿ ಗೃಹಗಳ ಬದಲಾಗಿ ನೂತನ ವಸತಿ ಗೃಹ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ತಜ್ಞ ವೈದ್ಯರ ಜತೆಗೆ ಹೆಚ್ಚುವರಿಯಾಗಿ ಇನ್ನಷ್ಟೂ ಸಿಬ್ಬಂದಿ ನಿಯೋಜಿಸಲು ಆರೋಗ್ಯ ಸಚಿವರಿಗೆ ಶಾಸಕರ ಮೂಲಕ ಮನವಿಸಿಕೊಳ್ಳುತ್ತೇನೆ ಎಂದರು.

ನಂತರ ನಿತ್ಯ ತಮ್ಮ ಕುಟುಂಬದ ರಾಜರಾಜೇಶ್ವರಿ ಟೃಸ್ಟಿನಿಂದ ರೋಗಿಗಳಿಗೆ ಉಚಿತವಾಗಿ ಒದಗಿಸುವ ಊಟೋಪಚಾರ ಗುಣಮಟ್ಟದ್ದು ಆಗಿದೆಯೇ ಎಂದು ರೋಗಿಗಳನ್ನು ಪ್ರಶ್ನಿಸಿದರು. ಆಸ್ಪತ್ರೆ ಕಟ್ಟಡ ಕೆಲವೆಡೆ ಹಾಳಾಗಿದ್ದು ಆ ಕುರಿತು ವರದಿ ಸಲ್ಲಿಸಲು ಮುಖ್ಯ ವೈದ್ಯಾಧಿಕಾರಿ ಮತ್ತು ತಾಲೂಕಾ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆ ಮುಂದಿನ ಚರಂಡಿ ನೀರು ಸಂಗ್ರಹವಾಗಿ ದುರ್ವಾಸನೆ ಜತೆಗೆ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ.ಕಾರಣ ಪುರಸಭೆಯವರಿಗೆ ಅದರ ಶುಚಿತ್ವ ಕುರಿತು ಕ್ರಮ ಕೈಗೊಳ್ಳುವಂತೆ ತಿಳಿಸಲು ವೈದ್ಯರು ಮನವಿಸಿಕೊಂಡರು. ತಕ್ಷಣ ವೈದ್ಯರ ಮನವಿಗೆ ಸ್ಪಂದಿಸಿದ ರಮೇಶ ಕತ್ತಿ ಅವರು ಪುರಸಭೆ ಅಭಿಯಂತರ ರಾಜಶೇಖರ ಪಟ್ಟಣಶೆಟ್ಟಿ ಅವರನ್ನು ಕರೆಸಿ ವಾರದೊಳಗಾಗಿ ಚರಂಡಿ ಸ್ವಚ್ಚತೆ ಮಾಡಬೇಕು.ಜತೆಗೆ ಆಸ್ಪತ್ರೆ ಆವರಣ ಗೋಡೆಗೆ ಅಂಟಿಕೊಂಡಂತೆ ಇರುವ ಬೀದಿ ವ್ಯಾಪಾರಸ್ಥರನ್ನು ತೆರವುಗೊಳಿಸುವಂತೆ ಆದೇಶಿಸಿದರು.
ಇದಕ್ಕೂ ಮುನ್ನ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಯರನಾಳ, ಬಡಕುಂದ್ರಿ, ಗೌಡವಾಡ ಪ್ರದೇಶಗಳಿಗೆ ಮಾಜಿ ಸಂಸದ ರಮೇಶ ಕತ್ತಿ ಭೇಟಿ ನೀಡಿದರು.
ವೈದ್ಯಾಧಿಕಾರಿಗಳಾದ ಉದಯ ಕುಡಚಿ, ಎಂ.ಎಂ.ನರಸನ್ನವರ, ಆರೋಗ್ಯ ಇಲಾಖೆ ಅಭಿಯಂತರ ಕಿಶೋರ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಸುನೀಲ ನೇರಲಿ, ಶೀತಲ ಬ್ಯಾಳಿ, ಎಸ್.ಆರ್.ಕರ್ಕಿನಾಯಿಕ, ರಾಜು ಮುನ್ನೋಳಿ, ಸೋಮಶೇಖರ ಪರಕನಟ್ಟಿ, ಚನ್ನಪ್ಪಾ ಗಜಬರ, ಪುಟ್ಟು ಖಾಡೆ, ರವಿ ಪರಕನಟ್ಟಿ, ಮಧುಕರ ಕರನಿಂಗ, ಸುಹಾಸ ನೂಲಿ, ಕಲಗೌಡ ಮಲಗೌಡನವರ, ಅನ್ನಪ್ಪಾ ಹಿಟ್ಟಣಗಿ, ದಯಾನಂದ ಅಮ್ಮಣಗಿ, ಭರತೇಶ ನಾಯಿಕ, ಶಿವನಗೌಡ ಪಾಟೀಲ ಮತ್ತಿತರರಿದ್ದರು.
ದಿನದ ಪ್ರಮುಖ ಸುದ್ದಿಗಳು ಮತ್ತು ಉಪಯುಕ್ತ ಮಾಹಿತಿ ನೇರವಾಗಿ ನಿಮ್ಮ ಮೊಬೈಲ್‌ಗೆ! Sunkad Media ವಾಟ್ಸಾಪ್ ಚಾನೆಲ್‌ಗೆ ಇದೀಗ ಸೇರಿಕೊಳ್ಳಿ — ಇಲ್ಲಿ ಕ್ಲಿಕ್ ಮಾಡಿ





