ತಾಲೂಕಿನ ಹಿಟ್ನಿ ಕೆರೆ ವೀಕ್ಷಣೆ ನಂತರ ಶಾಸಕ ನಿಖಿಲ ಕತ್ತಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜೇಂದ್ರ ಪಾಟೀಲ, ರೋಹನ ನೇಸರಿ, ಅಶೋಕ ಹಿರೇಕೋಡಿ, ನಂದು ಮುಡಸಿ, ಪ್ರಶಾಂತ ಪಾಟೀಲ ಇತರರಿದ್ದರು
ಹುಕ್ಕೇರಿ : ತಾಲೂಕಿನ ಸಂಕೇಶ್ವರ ಭಾಗದ ಹರಗಾಪೂರ, ಮತ್ತಿವಾಡ, ನಾಗನೂರ, ಹಿಟ್ನಿ ಮತ್ತು ಭೈರಾಪೂರ ಕೆರೆಗಳಿಗೆ 70.4 ಎಂ.ಸಿ.ಎಫ್.ಟಿ ನೀರು ಸಂಗ್ರಹಿಸುವ ಸಾಮರ್ಥ್ಯ ಇದ್ದು, ಮಳೆಗಾಲದಲ್ಲಿ ಹಿರಣ್ಯಕೇಶಿ ನದಿಯಿಂದ ಇವುಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ.ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದ
ಗುರುವಾರದಂದು ತಾಲೂಕಿನ ಸಂಕೇಶ್ವರ ಭಾಗದ ಐದು ಕೆರೆಗಳಿಗೆ ಭೇಟಿ ನೀಡಿದ ಬಳಿಕ ಶಾಸಕರು ಪತ್ರಕರ್ತರೊಂದಿಗೆ ಮಾತನಾಡಿದರು.ಹಿರಣ್ಯಕೇಶಿ ನದಿಯಿಂದ ಕೆಲವೇ ಕಿ.ಮೀ ಅಂತರದಲ್ಲಿ ಇರುವ ಈ ಗ್ರಾಮಗಳಿಗೆ ನೀರಾವರಿ ಸೌಕರ್ಯ ಇಲ್ಲದಾಗಿ ಕೇವಲ ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದರು.ಈ ಕೆರೆಗಳ ನಿರ್ಮಾಣದಿಂದ ಈ ಭಾಗ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆ ಮತ್ತು ತರಕಾರಿ ಬೆಳೆಯುತ್ತಿದ್ದಾರೆಂದರು.
ಕೆರೆ ತುಂಬಿಸುವ ಪೈಪಲೈನ್ಗಳನ್ನು ಕೆಲ ರೈತರು ಹಾಳು ಮಾಡಿ ಕೇವಲ ತಮ್ಮ ಕೆರೆಗಳಿಗೆ ಮಾತ್ರ ನೀರು ಇರುವಂತೆ ಮಾಡುತ್ತಿದ್ದಾರೆ.ಇದೊಂದು ನಾಚಿಕೆಗೇಡಿನ ಸಂಗತಿ. ನಾವು ಬದುಕಬೇಕು, ಮತ್ತೊಬ್ಬರನ್ನು ಬೆಳೆಸಬೇಕು ಎಂಬ ಮನೋಭಾವ ರೈತರಲ್ಲಿ ಬರಬೇಕೆಂದರು.ಇನ್ನೂ ಮುಂದೆ ಇಂತಹ ಕೃತ್ಯ ಎಸಗಿದ ರೈತರ ಮೇಲೆ ನಿರ್ಧಾಕ್ಷ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಗಮ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಮತ್ತು ಅಶೋಕ ಹಿರೇಕೋಡಿ ಮಾತನಾಡಿ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ನಮ್ಮ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಿದ ಕೆರೆಗಳು ಮತ್ತು ಅವುಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದು ಇದೀಗ ಫಲ ನೀಡುತ್ತಿದೆ. ರೈತನಾಯಕನ ಕಾರ್ಯ ಅಳಿದ ಮೇಲೂ ಜನಮನದಲ್ಲಿ ಅಜರಾಮರವಾಗಿ ಉಳಿಯುವಂತಾಗಿದೆ ಎಂದರು.

ಗಜಾನನ ಕೊಳ್ಳಿ, ರೋಹನ ನೇಸರಿ, ನಂದು ಮುಡಶಿ, ಪ್ರಶಾಂತ ಪಾಟೀಲ, ವಿಜಯ ಶೇರೇಕರ, ಪ್ರಕಾಶ ಹಾಲಟ್ಟಿ, ಎನ್.ಬಿ.ಪಾಟೀಲ, ಅಣ್ಣಪ್ಪಾ ಪಾಟೀಲ, ಚಂದರ ಪಾಟೀಲ, ಕಿರಣ ಪಾಟೀಲ, ನಾನಾ ಪಾಟೀಲ, ಮಹಾದೇವ ಗೋಟೂರೆ, ದೇವಾನಂದ ಚವ್ಹಾಣ, ಹನುಮಂತ ನಾಯಿಕ, ಬಸವರಾಜ ಗಂಗನ್ನವರ, ಚಿಕ್ಕ ನೀರಾವರಿ ಇಲಾಖೆ ಎ.ಇ.ಇ ಸಂಜಯ ಮಾಳಗಿ ಮತ್ತಿತರರಿದ್ದರು.



