ತವರಿನ ಸತ್ಕಾರ ಎಲ್ಲಕ್ಕೂ ಮೀರಿಸಿದ್ದು : ಎಸ.ಆರ. ಕರ್ಕಿನಾಯಿಕ

ತಾಲೂಕಿನ ಬೆಳವಿ ಗ್ರಾಮದಲ್ಲಿ ವಿಶ್ರಾಂತ ಎಂ.ಡಿ ಎಸ್.ಕರ್ಕಿನಾಯಿಕ & ಶಿವಾನಂದ ನಾಯಿಕ ಅವರನ್ನು ಸತ್ಕರಿಸಿದರು. ರಮೇಶ ಕುಲಕರ್ಣಿ, ಅಜಿತ ನಾಯಿಕ, ಹೊನ್ನಪ್ಪಾ ನಾಯಿಕ, ಚನ್ನಮಲ್ಲ ನಾಯಿಕ, ಭಾಪು ನಾಯಿಕ ಇತರರಿದ್ದರು.

ಹುಕ್ಕೇರಿ: ಸೋದರ ಸಂಬಂಧಿಗಳ ಪ್ರೀತಿ ವಿಶ್ವಾಸದ ಸತ್ಕಾರ ಜಗತ್ತಿನಲ್ಲಿಯೇ ಮಿಗಿಲಾದುದು. ಅಂತಹ ಸನ್ಮಾನ ನೀಡಿದ ನನ್ನ ಎಲ್ಲ ಸೋದರ ಸಂಬಂಧಿಗಳಿಗೆ, ಬಂಧು ಬಾಂಧವರಿಗೆ ಚಿರಋಣಿ ಎಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ನಿವೃತ್ತ ಎಂ.ಡಿ ಎಸ್.ಆರ್.ಕರ್ಕಿನಾಯಿಕ ಹೇಳಿದರು.

   ಸೋಮವಾರದಂದು ತಾಲೂಕಿನ ಬೆಳವಿ ಸ್ವಗ್ರಾಮದಲ್ಲಿ ವಕೀಲ ಸಾತಪ್ಪಾ ನಾಯಿಕ ಕುಟುಂಬಸ್ಥರು ಮತ್ತು ಸಂಬಂಧಿಕರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. “ಮನೆ ಗೆದ್ದು ಮಾರುಗೆದೆ” ಎಂಬ ಉಕ್ತಿಯಂತೆ ನನ್ನ ನೌಕರಿ ಜೀವನದಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಉಳಿಸಿಕೊಂಡು ಕರ್ತವ್ಯ ನಿಭಾಯಿಸಿದ್ದರಿಂದ ಈ ಗೌರವ ಸಿಕ್ಕಿದೆ ಎಂಬ ತೃಪ್ತಿ ನನಗಿದೆ ಎಂದರು. ಇನ್ನೋರ್ವ ನಿವೃತ್ತ ನೌಕರ ಶಿವಾನಂದ ನಾಯಿಕ ಮಾತನಾಡಿ ಉದ್ಯೋಗದ ಕ್ಷಣಗಳನ್ನು ಸ್ಮರಿಸಿಕೊಂಡರು.

   ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರಮೇಶ ಕುಲಕರ್ಣಿ ಮಾತನಾಡಿ ನಮ್ಮೂರಿನ ಹುಡುಗ ಹಿರಾ ಶುರ‍್ಸ್ ಕಾರಖಾನೆ ಎಂ.ಡಿ ಆಗಿದ್ದ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಜೀವನದಲ್ಲಿ ಹೆಸರು ಮಾಡಬೇಕಾದರೆ ಜೀವನದುದ್ದಕ್ಕೂ ಸಹನೆ, ಪ್ರೀತಿ ವಿಶ್ವಾಸ ಉಳಿಸಿ ಬೆಳೆಸಿಕೊಂಡು ಬದುಕಬೇಕು. ಅಂತಹ ಗರಿಮೆ ಇವರದ್ದಾಗಿದೆ. ನಮ್ಮ ಊರಿನ ಹೆಸರನ್ನು ಉನ್ನತ ಮಟ್ಟದಲ್ಲಿ ಬೆಳಗಿಸಿದ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು.

ತಾಲೂಕಿನ ಬೆಳವಿ ಗ್ರಾಮದಲ್ಲಿ ವಿಶ್ರಾಂತ ಎಂ.ಡಿ ಎಸ್.ಕರ್ಕಿನಾಯಿಕ & ಶಿವಾನಂದ ನಾಯಿಕ ಅವರನ್ನು ಸತ್ಕರಿಸಿದರು. ಲಕ್ಷ್ಮೀಬಾಯಿ ನಾಯಿಕ, ಶಿವಲೀಲಾ ನಾಯಿಕ, ಕಾಂಚನ ನಾಯಿಕ, ಗೀತಾ ನಾಯಿಕ ಇತರರಿದ್ದರು.

  ಹಿರಿಯರಾದ ಅಜಿತ ನಾಯಿಕ, ಹೊನ್ನಪ್ಪಾ ನಾಯಿಕ, ಸದಾಶಿವ ಶೇಂದ್ರಿ, ಪಿಕೆಪಿಎಸ್ ಅಧ್ಯಕ್ಷ ಮತ್ತು ವಕೀಲರಾದ ಲಿಂಗರಾಜ ನಾಯಿಕ, ಅರಣ್ಯ ಇಲಾಖೆ ಉದ್ಯೋಗಿ ಶಿವಕುಮಾರ ನಾಯಿಕ, ಮಹಾದೇವ ನಾಯಿಕ, ಎಲ್.ಆಯ್.ಸಿ ಶಿವನಾಯಿಕ ನಾಯಿಕ ಮಾತನಾಡಿ ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.

 ಹೊನ್ನಪ್ಪಾ ನಾಯಿಕ, ಮಲ್ಲಪ್ಪಾ ನಾಯಿಕ, ರಾಜು ನಾಯಿಕ, ಭಾಪು ನಾಯಿಕ, ಸಾತವೀರ ನಾಯಿಕ, ಯೋಗೇಶ ನಾಯಿಕ, ಕೆಂಪಣ್ಣಾ ನಾಯಿಕ, ಸಂಜೀವ ಚಿಕ್ಕೋಡಿ, ಪುಲಕೇಶಿ ನಾಯಿಕ, ಚನ್ನಮಲ್ಲ್ಪ ನಾಯಿಕ, ಈರಪ್ಪಾ ನಾಯಿಕ, ಪ್ರಕಾಶ ಮಗದುಮ್ಮ, ಸದಾಶಿವ ಪದ್ದಿ, ಸಂಜು ನಾಯಿಕ, ಶಿವಗೌಡ ನಾಯಿಕ, ರಾಮಣ್ಣಾ ನಾಯಿಕ, ಲಕ್ಷ್ಮೀಬಾಯಿ ನಾಯಿಕ, ಶಿವಲೀಲಾ ನಾಯಿಕ, ಗೀತಾ ನಾಯಿಕ, ಕಾಂಚನ ನಾಯಿಕ, ಶಕುಂತಲಾ ನಾಗನೂರಿ, ಸುವರ್ಣಾ ಜರಳಿ, ಸುರೇಖಾ ನಾಯಿಕ, ಶಾಂತವ್ವಾ ನಿಡಸೋಶಿ ಮತ್ತಿತರರಿದ್ದರು.

 ಹಿರಾ ಶುಗರ‍್ಸ್ ನಿವೃತ್ತ ಎಂ.ಡಿ ಎಸ್.ಆರ್.ಕರ್ಕಿನಾಯಿಕ ದಂಪತಿಗಳ ವಿವಾಹ ವಾರ್ಷಿಕೋತ್ಸವ ಸಹ ಇದೇ ಸಂದರ್ಭದಲ್ಲಿ ಆಚರಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept