ಭೂ ಮಾಪನಾ ಇಲಾಖೆಯ ಬಸವರಾಜ ಕಡಲಗಿ ಲೋಕಾಯುಕ್ತ ಬಲೆಗೆ

ಸ್ಥಳೀಯ ಭೂ ಮಾಪನಾ ಕಾರ್ಯಾಲಯದ ಸರ್ವೇಯರ್ ಬಸವರಾಜ ಕಡಲಗಿ ವಿರುದ್ಧ ಲಂಚ ಸ್ವೀಕಾರ ಪ್ರಕರಣ ಪರಿಶೀಲಿಸುತ್ತಿರುವ  ಬೆಳಗಾವಿ ಲೋಕಾಯುಕ್ತ ಇಲಾಖೆ ಅಧಿಕಾರಿಗಳು. ಡಿ.ವೈ.ಎಸ್.ಪಿ ಪುಷ್ಪಲತಾ ಎನ್, ಲೋಕಾಯುಕ್ತ ಇನಸ್ಪೆಕ್ಟರ್ ವೆಂಕಟೇಶ ಯಡಹಳ್ಳಿ, ರವಿ ಧರ್ಮಟ್ಟಿ ಇತರರು.

ಹುಕ್ಕೇರಿ: ತಾಲೂಕಿನ ಬಾಡ ಗ್ರಾಮದ ಪ್ರಕಾಶ ಮೈಲಾಕೆ ಎಂಬುವವರ  ನಕ್ಷೆ ತಯಾರಿಸುವುದಕ್ಕಾಗಿ ಲಂಚ ಪಡೆಯುತ್ತಿರುವಾಗ ಭೂಮಾಪನ  ಅಧಿಕಾರಿ ಬಸವರಾಜ ಕಡಲಗಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಶನಿವಾರ ಜರುಗಿದೆ.

       ತಾಲೂಕಿನ ಯಮಕಮರಡಿಯಲ್ಲಿ ಪ್ರಕಾಶ ಮೈಲಾಖೆ ಅವರನ್ನು ಕರೆಯಿಸಿಕೊಂಡು 3 ಸಾವಿರ ರೂ ಲಂಚ ಬೇಡಿಕೆ ಇಟ್ಟಿದ್ದನು. ಹಣ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಸವರಾಜ ಕಡಲಗಿ ವ್ಯಕ್ತಿಯನ್ನು ಟ್ರ್ಯಾಪ್ ಮಾಡಿದ್ದಾರೆ.

ಬಸವರಾಜ ಕಡಲಗಿ

ಭೂಮಿ ನಕ್ಷೆ ತಯಾರಿಸುವುದಕ್ಕಾಗಿ ಹಣ ಕೊಡದೇ ಇದ್ದರೆ ನಕ್ಷೆ ತಯಾರಿಸಲು ಆಗುವುದಿಲ್ಲ ಎಂದು ಸತಾಯಿಸಿ ಹಣದ ಬೇಡಿಕೆ ಇಟ್ಟಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿ.ವೈ.ಎಸ್ಪಿ ಪುಷ್ಪಲತಾ ಎನ್. ಅಧಿಕಾರಿಗಳಾದ ವೆಂಕಟೇಶ ಯಡಹಳ್ಳಿ, ರವಿ ಧರ್ಮಟ್ಟಿ, ಮತ್ತಿತರ ಅಧಿಕಾರಿಗಳು ಭೂಮಾಪನಾ ಅಧಿಕಾರಿ ಬಸವರಾಜ ಕಡಲಗಿ ಅವರನ್ನು ಟ್ರ್ಯಾಪ್ ಮಾಡಿದ್ದಾರೆ. ಲೋಕಾಯುಕ್ತ ಡಿ.ವೈ.ಎಸ್.ಪಿ ಪುಷ್ಪಲತಾ ಎನ್, ಇನಸ್ಪೆಕ್ಟರ್‌ಗಳಾದ ವೆಂಕಟೇಶ ಯಡಹಳ್ಳಿ, ರವಿಕುಮಾರ ಧರ್ಮಟ್ಟಿ, ಭೂ ದಾಖಲೆಗಳ ಇಲಾಖೆಯ ತನ್ವೀರ ಢಾಂಗೆ ಇತರರಿದ್ದರು. 

Join Our WhatsApp Channel
Join Now

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept