ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಸಿಪಿಐ ಮಹಾಂತೇಶ ಬಸ್ಸಾಪೂರ ಅವರಿಗೆ ಮನವಿ ಸಲ್ಲಿಸಿದ ವಿ.ಎಚ್.ಪಿ ತಾಲೂಕಾಧ್ಯಕ್ಷ ಶಿವರಾಜ ನಾಯಿಕ. ಕಾವೇರಿ ಪೂಜೇರಿ, ಆಕಾಶ ಖಾನಾಯಿ, ಜಯಾನಂದ ಸಾವಂತ ಇತರರಿದ್ದರು.
ಹುಕ್ಕೇರಿ:ತಾಲೂಕಿನಾದ್ಯಂತ ಬಕ್ರೀದ್ ಹಬ್ಬದ ಹಿನ್ನೆಲೆ ಅಕ್ರಮ ಗೋ ಸಾಗಾಟನೆ ಆಗುವ ಸಾಧ್ಯತೆ ಇದ್ದು ಅದನ್ನು ತಡೆಗಟ್ಟಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕಾ ಘಟಕದ ಅಧ್ಯಕ್ಷ ಶಿವರಾಜ ನಾಯಿಕ ಅವರು ಹೇಳಿದರು.
ಶನಿವಾರದಂದು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಸಿಪಿಐ ಮಹಾಂತೇಶ ಬಸ್ಸಾಪೂರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಗೋವನ್ನು ನಾವು ಮಾತೆಯ ಸ್ವರೂಪದಲ್ಲಿ ಕಾಣುತ್ತೇವೆ.ಆದರೆ ಕೆಲವರು ಅದರ ಮಾಂಸ ಸೇವನೆ ಮಾಡುತ್ತಾರೆ.ಇದರಿಂದ ಗೋ ಮಾತೆ ಎಂದು ಪೂಜಿಸುವ ಬಹು ಸಂಖ್ಯಾತ ಜನರಿಗೆ ನೋವಾಗುತ್ತಿದೆ.ಕಾರಣ ಗೋವುಗಳನ್ನು ಮಾಂಸಕ್ಕಾಗಿ ಮಾರಾಟ ಮತ್ತು ಅಕ್ರಮವಾಗಿ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ದುರ್ಗಾವಾಹಿನಿ ಅಧ್ಯಕ್ಷೆ ಕಾವೇರಿ ಪೂಜೇರಿ, ಬಜರಂಗ ದಳ ತಾಲೂಕಾ ಸಹ ಸಂಯೋಜಕ ಆಕಾಶ ಖಾನಾಯಿ, ಲಕ್ಷö್ಮಣ ಯಡ್ರಾಂವಿ, ಜಯಾನಂದ ಸಾವಂತ ಸೇರಿದಂತೆ ಅನೇಕರಿದ್ದರು.





