ಸಚಿವರ ಮುಂದೆ ತಾಲೂಕಾಡಳಿತದ ವಿರುದ್ಧ ಜನರ ಆಕ್ರೋಶ

ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಮಂಜುಳಾ ನಾಯಕ, ಟಿ.ಆರ್.ಮಲ್ಲಾಡದ, ಇಮ್ರಾನ ಮೋಮಿನ ಇತರರಿದ್ದರು.

ಹುಕ್ಕೇರಿ: ಪುರಸಭೆಯವರು ಅವೈಜ್ಞಾನಿಕವಾಗಿ ಹಬ್ಬೆದ್ದು ನಾರುವ ಚರಂಡಿ ಮೇಲೆ ಒಂದು ಕೋಟಿ ರೂ ವೆಚ್ಚದ ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಿದ್ದಾರೆಂದು ಹುಕ್ಕೇರಿ ಮುಖಂಡರು ಸಚಿವ ಸತೀಶ ಜಾರಕಿಹೊಳಿ ಅವರ ಮುಂದೆ ದೂರಿದರು.

   ಶುಕ್ರವಾರದಂದು ಸ್ಥಳೀಯ ತಾ.ಪಂ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ನಡೆದ ಜನರ ಕುಂದುಕೊರತೆ ಸಮಾಲೋಚನಾ ಸಭೆಯಲ್ಲಿ ಮುಖಂಡರಾದ ಚಂದು ಗಂಗನ್ನವರ ಮತ್ತು ತಮ್ಮಣ್ಣಗೌಡ ಪಾಟೀಲ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು.

   ಲೆಂಡೂರಿ ನಾಲಾ ಎಂದೇ ಪ್ರಸಿದ್ದಿ ಪಡೆದ ಪುರಸಭೆ ಪಕ್ಕದ ಕೊಳಚೆಯಿಂದ ಗಬ್ಬೆದ್ದು ನಾರುವ ಚರಂಡಿ ಮೇಲೆ ತರಕಾರಿ ಮಾರುಕಟ್ಟೆ ಪ್ರಾರಂಭಿಸಿದರೆ ಅಲ್ಲಿಯ ಸೋಂಕಿತ ತರಕಾರಿ ಖರೀದಿಸಿ ಆಹಾರ ತಯಾರಿಸಿದರೆ ರೋಗ ಬರುವುದು ನಿಶ್ಚಿತವೆಂದರು.

    ತಕ್ಷಣ ಸಚಿವರು ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಪ್ರಶ್ನಿಸಿ ಇದು ನಿಮಗೆ ಗೊತ್ತಾಗುವುದಿಲ್ಲವೇ ಅಂತಹ ಸ್ಥಳದಲ್ಲಿ ನಿರ್ಮಾಣವೇಕೆ ಎಂದು ಕೇಳಿದರು.ಮುಖ್ಯಾಧಿಕಾರಿ ಮಾತನಾಡಿ ಈಗಾಗಲೇ ಟೆಂಡರ್ ಆಗಿ ಮಾರುಕಟ್ಟೆ ನಿರ್ಮಾಣ ಪ್ರಾರಂಭಿಸಿದ್ದು ಇದೀಗ ಪ್ರಶ್ನಿಸುತ್ತಿದ್ದಾರೆಂದರು.ಆ ಸ್ಥಳವನ್ನು ನಾನು ಸ್ವತಃ ಪರಿಶೀಲಿಸುತ್ತೇನೆ ಎಂದು ಹೇಳಿದರು.  

         ತಾಲೂಕಿನ ಅವರಗೋಳ ಗ್ರಾಮದ ಭಜಂತ್ರಿ ಸಮಾಜದವರು ನಮಗೆ ಸ್ಮಶಾನ ಭೂಮಿ ಮಂಜೂರಾಗಿದೆ. ತಹಸೀಲ್ದಾರ ಮಂಜುಳಾ ನಾಯಕ ಅವರು ಜಮೀನು ಸರ್ವೆ ಮಾಡಿಸಿ ನಮಗೆ ಸ್ಮಶಾನ ಭೂಮಿ ನೀಡುತ್ತಿಲ್ಲವೆಂದರು.ದಲಿತ ಮುಖಂಡ ಮಲ್ಲಿಕಾರ್ಜುನ ರಾಶಿಂಗೆ ಮಾತನಾಡಿ ಈ ಕುರಿತು ತಹಸೀಲ್ದಾರರಿಗೆ ಹಲವಾರು ಬಾರಿ ವಿನಂತಿಸಿಕೊAಡಿದ್ದೇವೆ.ತಹಸೀಲ್ದಾರ ಮಂಜುಳಾ ನಾಯಕ ನಮ್ಮ ಮೇಲೆ ದೂರು ದಾಖಲಿಸಿ ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೆದರಿಸುತ್ತಾರೆಂದು ಆರೋಪಿಸಿದರು. 

    ತಾಲೂಕಿನ ಹಿರಣ್ಯಕೇಶಿ, ಮತ್ತು ಘಟಪ್ರಭಾ ನದಿಗಳಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದೆ. ಮೊಸಳೆ ಜಾನುವಾರು ಬೇಟೆಯಾಡುತ್ತೇವೆ. ಮೇವು ತಿನ್ನುವುದಕ್ಕೆ ಹೋದ ಜಾನುವಾರು ಮನೆಗೆ ಬರುತ್ತಿಲ್ಲ.  ಗ್ರಾಮಸ್ಥರು ನಿತ್ಯವೂ ಭಯದ ವಾತರಣದಲ್ಲಿ ಬದುಕಬೇಕಾಗಿದೆ.  ತುರ್ತಾಗಿ ಮೊಸಳೆ ಹಿಡಿದು ಸ್ಥಳಾಂತರಿಸಬೇಕೆAದು ನದಿ ಪಾತ್ರದ ಗ್ರಾಮಸ್ಥರು ಸಚಿವರಲ್ಲಿ ವಿನಂತಿಸಿದರು. 

       ಪಟ್ಟಣದ ಗಾಂಧಿನಗರ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸ್ಥಳಾವಕಾಶದ ಅಭಾವವಿದ್ದು, ಶಾಲೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸಲು ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಎಸ್‌ಡಿಎಮ್‌ಸಿ ಸದಸ್ಯರು ಕೋರಿದರು.  ನೀರಾವರಿ ಇಲಾಖೆ ಅಧಿಕಾರಿಗಳು ಕೆನಾಲ್ ನಿರ್ಮಾಣದಲ್ಲಿ ನೆಪದಲ್ಲಿ ರೈತರ ಜಮೀನುಗಳನ್ನು ಮನಬಂದAತೆ ಬಳಕೆ ಮಾಡಿಕೊಳ್ಳುತಿದ್ದಾರೆ. ಸರ್ಕಾರದ ನಿಯಮಾನುಸಾರ ನಿರ್ಮಾಣ ಮಾಡಬೇಕೆಂದು ರೈತರು ದೂರಿದರು. ನಂತರ ಮಾತನಾಡಿದ ಸಚಿವರು ಜನಪರ ಆಡಳಿತ ನಡೆಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು. 40 ವರ್ಷಗಳಿಂದ ಇಂತಹ ಆಡಳಿತ ನೋಡುತ್ತಾ ಬಂದಿರುವೆ. ಸರಕಾರ ಯಾವುದೇ ಇರಲಿ ಅಧಿಕಾರಿಗಳು ತಮ್ಮ ಬೇಜವಾಬ್ದಾರಿ ತೋರಿಸುತ್ತಾರೆ. ಇನ್ನಾದರೂ ಅಧಿಕಾರಿಗಳು ಇಂತಹ ಪ್ರವೃತ್ತಿ ಬಿಟ್ಟು ಜನಪರ ಆಡಳಿತ ನಡೆಸುವಂತೆ ಆದೇಶಿಸಿದರು.

 ನಂತರ ಸಚಿವ ಸತೀಶ ಜಾರಕಿಹೊಳಿ ಅವರು ಹಳೇ ತಹಶೀಲ್ದಾರ ಕಚೇರಿಯಲ್ಲಿರುವ ಭೂ ದಾಖಲೆಗಳ ಕಚೇರಿ. ತಾಲೂಕಾ ಪಂಚಾಯತಿ ಮತ್ತು ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

      ತಹಶೀಲ್ದಾರ ಮಂಜುಳಾ ನಾಯಿಕ, ತಾ,ಪಂ, ಕಾರ್ಯನಿರ್ವಾಣಾಧಿಕಾರಿ ಟಿ.ಆರ್, ಮಲ್ಲಾಡದ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ ಜಿಲ್ಲಾ ಕೆಡಿಪಿ ಸದಸ್ಯ ಬಸವರಾಜ ಕೋಳಿ, ಗ್ಯಾರಂಟಿ ಅನಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಶಾನೂರ ತಹಶೀಲ್ದಾರ ಮತ್ತಿತರರಿದ್ದರು.

ಸಚಿವ ಸತೀಶ ಜಾರಕಿಹೊಳಿ ಅವರ ಮುಂದೆ ತಾಲೂಕಾಡಳಿತದ ವಿರುದ್ಧ ಜನರಿಂದ ಮತ್ತು ಮುಖಂಡರಿಂದ ದೂರುಗಳ ಸುರಿಮಳೆ.

ಹಲವು ದಶಕಗಳಿಂದ ಅಧಿಕಾರಿಗಳ ದುರಾಡಳಿತ ನೋಡುತ್ತಾ ಬಂದಿರುವೆ. ಸರಕಾರ ಯಾವುದಾದರೇನು ಅಧಿಕಾರಿಗಳ ವರ್ತನೆ ಸರಿ ಮಾಡಲು ಸಾಧ್ಯವಿಲ್ಲ : ಸತೀಶ ಜಾರಕಿಹೊಳಿ ಸಚಿವರು

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept