ಹುಕ್ಕೇರಿಯಲ್ಲಿ ಭಾಜಪ ಕಾರ್ಯಕರ್ತರ ಸಮಾವೇಶ : ಮಾಜಿ ಸಂಸದ ರಮೇಶ ಕತ್ತಿ

ramesh katti

ಹುಕ್ಕೇರಿ: ಇತ್ತೀಚಿನ ದಿನಗಳಲ್ಲಿ ತಾಲೂಕಿನ ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯ ಆತ್ಮಾವಲೋಕನ ಮತ್ತು ಮುಂದೆ ನಾವು ಕೈಕೊಳ್ಳಬೇಕಾದ ರಾಜಕೀಯ ನಡೆ ಕುರಿತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆಯನ್ನು ನಾಳೆ ಶುಕ್ರವಾರ ದಿ.18ರಂದು ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

         ಗುರುವಾರದಂದು ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ನಾವು ಅವಿರೋಧವಾಗಿ ಆಯ್ಕೆ ಮಾಡಿದ್ದ ಕೆಲವರು ನಮ್ಮನ್ನು ತೊರೆದು ಹೋಗಿದ್ದರ ಕುರಿತು ಚರ್ಚಿಸಲಾಗುತ್ತದೆ. ಕಾರ್ಯಕರ್ತರು, ಮುಖಂಡರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಬಳಿಕ ಅವರ ಅಭಿಮತದಂತೆ ಮುಂದಿನ ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದ ಭವಿಷ್ಯ ನಿರ್ಧರಿಸುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಪದೇ ಪದೇ ಕೆಲವೇ ಮುಖಂಡರನ್ನು ನಿರ್ದೇಶಕರನ್ನಾಗಿ ಮಾಡುತ್ತಿದ್ದ ತಮ್ಮ ನಡೆಯಿಂದ ಇಂತಹ ಬೆಳವಣಿಗೆಯಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಇತಿಹಾಸದ ಪುಟಗಳನ್ನು ವೀಕ್ಷಿಸಿದಾಗ ನಮ್ಮವರು ಎನಿಸಿಕೊಂಡವರು, ವಿಶ್ವಾಸ ಇಟ್ಟವರು ಮೋಸ ಮಾಡಿದಾಗ ಯಾವುದೇ ರಾಜರು ಸಂಸ್ಥಾನಗಳು, ಸಂಘ ಸಂಸ್ಥೆಗಳು ಹಾಳಾಗಿವೆ. ಅದೇ ತೆರನಾಗಿ ಹುಕ್ಕೇರಿ ತಾಲೂಕಿನ ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಆಗಿದೆ ಎಂದು ನನಗನಿಸುತ್ತಿದೆ ಎಂದರು. ನಿರ್ದೇಶಕರು ನಮ್ಮನ್ನು ಬಿಟ್ಟು ಹೋಗಿರಬಹುದು ಆದರೆ ಮತದಾರರು ನಮ್ಮ ಜೊತೆಗೆ ಇದ್ದಾರೆ ಎಂದರು.

  ಅದರಿಂದ ಇನ್ನೂ ಮುಂದೆ ನಮ್ಮ ಮತದಾರರ ಮತ್ತು ನಮ್ಮನ್ನು ರಾಜಕೀಯವಾಗಿ ಬೆಳೆಸಿದವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ.ಇದರ ಜತೆಗೆ ಇದೀಗ ಬರುತ್ತಿರುವ ಸಹಕಾರಿ ಕ್ಷೇತ್ರದ ಚುನಾವಣೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಿ ಅಭ್ಯರ್ಥಿಗಳನ್ನು ನಿರ್ಣಯಿಸುವುದಾಗಿ ಸ್ಪಷ್ಟಪಡಿಸಿದರು.

           ಶಾಸಕ ನಿಖಿಲ ಕತ್ತಿ ಅವರು ಆಯ್ಕೆಯಾಗಿ ಎರಡು ವರ್ಷ ಸಂದ ಪ್ರಯುಕ್ತ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಆಗಬೇಕಾದ ಜನಪರ ಕಾರ್ಯಗಳ ಕುರಿತು ಚರ್ಚಿಸುತ್ತೇವೆ. ನಾಳಿನ ಸಭೆಯಲ್ಲಿ ಶಾಸಕ ನಿಖಿಲ ಕತ್ತಿ ಮತ್ತು ತಾಲೂಕಿನ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

  ಮುಖಂಡರಾದ ಸತ್ತೆಪ್ಪಾ ನಾಯಿಕ, ಸುನೀಲ ನೇರ್ಲಿ, ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ಗುರು ಕುಲಕರ್ಣಿ, ಪ್ರಕಾಶ ಮುತಾಲಿಕ, ಪ್ರಜ್ವಲ್ ನಿಲಜಗಿ, ಚನ್ನಪ್ಪ ಗಜಬರ, ತಮ್ಮಣ್ಣಾ ಕರಗುಪ್ಪಿ, ರಾಜೇಶ ಬಿರಾದಾರಪಾಟೀಲ, ಎಚ್.ಎಲ್.ಪೂಜೇರಿ, ಎಸ್.ಆರ್.ಕರ್ಕಿನಾಯಿಕ, ಬಸಗೌಡ ಪಾಟೀಲ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept