ಹುಕ್ಕೇರಿ: ಹುಕ್ಕೇರಿಯ ವಕೀಲರು ಹೃದಯವಂತರು. ಇಲ್ಲಿ ನಾನು ನಾಲ್ಕು ವರ್ಷಗಳ ಕಾಲ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ ಅವಧಿ ಅವಿಸ್ಮರಣೀಯವೆಂದು ವರ್ಗಾವಣೆಗೊಂಡ ಹಿರಿಯ ದಿವಾಣಿ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ತಿಳಿಸಿದರು.
ಬುಧವಾರದಂದು ಸ್ಥಳೀಯ ನ್ಯಾಯಾಲಯದ ಹಿರಿಯ ಮತ್ತು ಸಿವ್ಹಿಲ್ ನ್ಯಾಯಾಧೀಶರ ವರ್ಗಾವಣೆ ಪ್ರಯುಕ್ತ ವಕೀಲರ ಸಂಘ ಹಮ್ಮಿಕೊಂಡ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಯ ನಿರ್ಣಯಗಳ ಸಂದರ್ಭದಲ್ಲಿ ಇಲ್ಲಿನ ವಕೀಲರು ತೋರಿದ ವಿಶ್ವಾಸ ಮತ್ತು ಪ್ರೀತಿ ಮರೆಯಲಾರದ್ದು ಎಂದರು. ನ್ಯಾಯಾಲಯದ ಕಾರ್ಯಕಲಾಪಗಳು ಸರಿಯಾಗಿ ನಡೆಯಬೇಕಾದಲ್ಲಿ ಅಲ್ಲಿನ ನ್ಯಾಯವಾದಿಗಳ ಸಂಘದ ಸಹಕಾರ ಅತ್ಯವಶ್ಯಕ. ಆ ಸಹಕಾರ ನನಗೆ ದೊರಕಿದೆ ಎಂದು ಹೇಳಿದರು.
ಕಿರಿಯ ಸಿವಿಲ್ ನ್ಯಾಯಾಧೀಶ ಗುರುಪ್ರಸಾದ್ ಸಿ ಮಾತನಾಡಿ ಇಲ್ಲಿನ ವಕೀಲರ ಪ್ರೀತಿ ವಿಶ್ವಾಸ ನೋಡಿದ ನನಗೆ ಮುಂಬರುವ ದಿನಗಳಲ್ಲಿ ಪದೋನ್ನತಿ ಹೊಂದಿದಾಗ ಮರಳಿ ಇಲ್ಲಿಗೆ ಬಂದು ಕಾರ್ಯ ನಿರ್ವಹಿಸಬೇಕೆಂಬ ಆಶಯ ವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನ್ಯಾಯಾಧೀಶರ ಕಾರ್ಯ ಕಠಿಣವಾದುದು. ಈ ಇರ್ವರೂ ನ್ಯಾಯಾಧೀಶರ ಎದುರು ನ್ಯಾಯ ಮಂಡಿಸುವಾಗ ಯಾವುದೇ ಮಾನಸಿಕ ಒತ್ತಡ ಇರುತ್ತಿರಲಿಲ್ಲ ಎಂದರು. ಹಿರಿಯ ವಕೀಲರಾದ ಪಿ.ಆರ್.ಚೌಗಲಾ, ರಾಮಚಂದ್ರ ಜೋಶಿ, ಎಸ್.ಜಿ.ನದಾಫ ಮಾತನಾಡಿದರು.ವಕೀಲರ ಸಂಘದವರು ಇರ್ವರೂ ನ್ಯಾಯಾಧೀಶರನ್ನು ಸತ್ಕರಿಸಿದರು. ಸಂಘದ ಉಪಾಧ್ಯಕ್ಷ ಬಸವರಾಜ ಜಿನರಾಳಿ, ಎಜಿಪಿ ಅನೀಲ ಕರೋಶಿ, ವಕೀಲರಾದ ಬಿ.ಬಿ.ಪಾಸಪ್ಪಗೋಳ, ಬಿ.ಕೆ.ಮಗೆನ್ನವರ, ಬಸವರಾಜ ಹುಂಡೇಕರ, ಆರ್.ಬಿ.ಪಾಟೀಲ್, ಎಸ್.ಆರ್.ಶೆಟ್ಟಿ, ಎಸ್.ಸಿ.ಮಠಪತಿ, ಎಸ್.ಎಸ್.ನಾಗನೂರಿ, ಆರ್.ಬಿ.ಚೌಗಲಾ, ಪ್ರಕಾಶ ಪಾಟೀಲ, ಎಂ.ಎಂ.ಪಾಟೀಲ, ಭೀಮಸೇನ ಬಾಗಿ, ಸಂಘದ ಮಾಜಿ ಅಧ್ಯಕ್ಷ ಅನೀಸ್ ವಂಟಮೂರಿ ಮತ್ತಿತರರಿದ್ದರು. ಸಂಘದ ಕಾರ್ಯದರ್ಶಿ ಎಸ್.ಜಿ.ನದಾಫ ಸ್ವಾಗತಿಸಿ, ನಿರೂಪಿಸಿದರು. ಮಹಿಳಾ ಪ್ರತಿನಿಧಿ ಆಶಾ ಸಿಂಗಾಡಿ ವಂದಿಸಿದರು.





