ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಶೀತಲ ಬ್ಯಾಳಿ ಭಾವಚಿತ್ರ.
ಹುಕ್ಕೇರಿ: ರಾಜ್ಯ ಸರಕಾರ ಅನುಷ್ಠಾನಕ್ಕೆ ಮುಂದಾಗಿರುವ ಜಾತಿಗಣತಿ ತೀವೃ ಖಂಡನೀಯ. ಇದನ್ನು ಜಾರಿಗೆ ತರಲು ಮುಂದಾದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹುಕ್ಕೇರಿ ತಾಲೂಕ ಘಟಕಾಧ್ಯಕ್ಷ ಶೀತಲ ಬ್ಯಾಳಿ ಹೇಳಿದರು.
ಗುರುವಾರದಂದು ಪಟ್ಟಣದ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮಾಜ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಇರುವುದು ಜಗತ್ತಿಗೆ ಗೊತ್ತಿರುವ ಸಂಗತಿ.ಆದರೆ ಜಾತಿ ಗಣತಿ ೩ ಮತ್ತು ೪ನೇ ಸ್ಥಾನಕ್ಕೆ ಸೀಮಿತ ಮಾಡುವ ಹುನ್ನಾರ ನಡೆಸಿದ್ದಾರೆ. ಕಾರಣ ತಕ್ಷಣ ಈ ಜಾತಿ ಗಣತಿ ರದ್ದುಗೊಳಿಸಿ ಮರು ಗಣತಿ ಮಾಡಬೇಕೆಂದು ಒತ್ತಾಯಿಸಿದರು. ಹಿರಿಯರಾದ ಸತ್ತೆಪ್ಪಾ ನಾಯಿಕ ಮತ್ತು ಸುನೀಲ ನೇರ್ಲಿ ಮಾತನಾಡಿ ಮತಬ್ಯಾಂಕ ಗಟ್ಟಿಗೊಳಿಸಲು ಮುಸ್ಲಿಮ್ ಸಮಾಜದ ಜನಸಂಖ್ಯೆ ಅತಿ ಹೆಚ್ಚಾಗಿ ಬರೆಸಿದ್ದಾರೆಂಬ ಸಂಗತಿ ಜಗಜ್ಜಾಹೀರ ಆಗಿದೆ.ಈ ಜಾತಿ ಗಣತಿ ಜಾರಿಗೆತರಲು ಮುಂದಾದರೆ ಲಿಂಗಾಯತ ಮತ್ತು ಒಕ್ಕಲಿಗ ಸಮಾಜಗಳು ಒಂದಾಗಿ ಕಾಂಗ್ರೆಸ್ ಸರಕಾರಕ್ಕೆ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾಸಭಾ ಪದಾಧಿಕಾರಿಗಳಾದ ಸುರೇಶ ಜಿನರಾಳೆ, ಬಸವಪ್ರಭು ವಂಟಮೂರಿ, ರೋಹನ ನೇಸರಿ, ಚನ್ನಪ್ಪ ಗಜಬರ, ಶ್ರೀಶೈಲ ಮಠಪತಿ, ಶೇಖರ ಪಾಟೀಲ, ಸಮಾಜದ ಹಿರಿಯರಾದ ಮಹಾನಿಂಗ ಸನದಿ, ರವಿ ಪಾಟೀಲ, ಶಿವನಗೌಡ ಪಾಟೀಲ ಮತ್ತಿತರರಿದ್ದರು.





