ಬೆಳಗಾವಿ ಜಿಲ್ಲಾ ವಿಭಜನೆ ಜೊತೆಗೆ ಸಂಕೇಶ್ವರ ಪಟ್ಟಣವನ್ನು ತಾಲೂಕಾಗಿ ಘೋಷಿಸಬೇಕು: ರಮೇಶ ಕತ್ತಿ

ಸ್ಥಳೀಯ ಪಿಕರ‍್ಡ ಬ್ಯಾಂಕ್ ಆವರಣದಲ್ಲಿ ತಾಲೂಕಿನ ಜನರ ಕುಂದುಕೊರತೆಗಳನ್ನು ಮಾಜಿ ಸಂಸದ ರಮೇಶ ಕತ್ತಿ ಆಲಿಸಿದರು. ಮುಖಂಡರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿದ್ದರು.

ಹುಕ್ಕೇರಿ: ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಮೂಲಕ ಜಿಲ್ಲೆಯ ಜನರಿಗೆ ಆಡಳಿತಾತ್ಮಕವಾಗಿ ಅನುಕೂಲ ಮಾಡಿಕೊಡಬೇಕು. ಬೆಂಗಳೂರಿನ ನಂತರ ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದೆ.ಇದರಿಂದ ಜಿಲ್ಲೆಯ ಕೊನೆಯ ಗ್ರಾಮಗಳ ಜನರಿಗೆ ಸರಕಾರಿ ಕೆಲಸಗಳು ಸುಲಭವಾಗಿ ಆಗುತ್ತವೆ ಎಂದು ಮಾಜಿ ಸಂಸದ, ಡಿಸಿಸಿ ಬ್ಯಾಂಕ ನರ‍್ದೇಶಕರಾದ ರಮೇಶ ಕತ್ತಿ ಹೇಳಿದರು.

ಅವರು ಸೋಮವಾರ ಸಂಜೆ ಪಟ್ಟಣದ ಪಿಕರ‍್ಡ ಬ್ಯಾಂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಥಣ, ಚಿಕ್ಕೋಡಿ, ನಿಪ್ಪಾಣಿ ಮತ್ತು ರಾಮದರ‍್ಗ ತಾಲೂಕಿನ ಜನರು ಸರಕಾರಿ ಕೆಲಸ, ಕರ‍್ಯಗಳಿಗೆ ಬರಬೇಕಾದರೆ ಒಂದು ದಿನ ಪರ‍್ಣ ಹಿಡಿಯುವುದು ಸಮಯದ ಜೊತೆಗೆ ರ‍್ಚು ಹೆಚ್ಚು ಸಹ ಹೆಚ್ಚಾಗುತ್ತಿದೆ. ಅದಕ್ಕಾಗಿ ಜಿಲ್ಲೆಯನ್ನು ತಕ್ಷಣ ವಿಭಜಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಇದರ ಜೊತೆಗೆ ಈ ಹಿಂದೆ ಬ್ರಿಟಿಷ್ ರ‍್ಕಾರ ಇದ್ದಾಗ ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಕರ‍್ಯನರ‍್ವಹಿಸಲು ಅನುಕೂಲ ಆಗುವಂತೆ ಮೂರು ಕಂದಾಯ ಉಪ ವಿಭಾಗಾಧಿಕಾರಿಗಳಾಗಿ ತಾಲೂಕನ್ನು ಹಂಚಿ ನೇಮಕ ಮಾಡಿದ್ದರು. ಬೈಲಹೊಂಗಲ, ಬೆಳಗಾವಿ ಮತ್ತು ಚಿಕ್ಕೋಡಿ ಮೂರು ಕಂದಾಯ ವಿಭಾಗಗಳಿಂದ ಜನರಿಗೆ ಅನುಕೂಲವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳವಾಗಿದ್ದರಿಂದ ಜಿಲ್ಲಾಡಳಿತ ಜಿಲ್ಲೆಯ ಕೊನೆ ಹಂತದ ಜನರ ಸಮಸ್ಯೆ ಪರಿಹರಿಸಲು ಆಗುತ್ತಿಲ್ಲ.ಅದಕ್ಕಾಗಿ ಜಿಲ್ಲೆಯನ್ನು ವಿಭಾಗಿಸಬೇಕು.ಹುಕ್ಕೇರಿ ತಾಲೂಕು ಬೆಳಗಾವಿ ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಯಲ್ಲಿ ಇರುವುದರ ಜತೆಗೆ ಬೆಳಗಾವಿ ಸಮೀಪ ಆಗಿದ್ದು ಇಲ್ಲಿಯ ಜನರಿಗೆ ಬೆಳಗಾವಿ ಜಿಲ್ಲೆಯಲ್ಲಿ ಇರುವಂತೆ ಪರಿಗಣಿಸಬೇಕು ಎಂದರು.

ಇದರ ಜತೆಗೆ ಬೆಳಗಾವಿ ಮತ್ತು ಹುಕ್ಕೇರಿ ತಾಲೂಕುಗಳನ್ನು ಸಹ ವಿಭಜಿಸಬೇಕು. ಬೆಳಗಾವಿ ಉತ್ತರ ಮತ್ತು ದಕ್ಷಿಣ ಎಂದು ಎರಡು ತಾಲೂಕು ಹಾಗೂ ಹುಕ್ಕೇರಿ ಮತ್ತು ಸಂಕೇಶ್ವರ ಎರಡು ತಾಲೂಕು ರಚನೆ ಆಗಬೇಕು ಎಂದರು. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ತಾಲೂಕ ಕೇಂದ್ರವಾಗಲು ಭೌಗೋಳಿಕ ಮತ್ತು ಆದಾಯ ಇರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಈಗಾಗಲೇ ಉಪನೋಂದಣಿ ಕರ‍್ಯಾಲಯ, ನ್ಯಾಯಾಲಯ ಕಟ್ಟಡಗಳು, ರಾಷ್ಟ್ರೀಯ ಹೆದ್ದಾರಿ, ಕೈಗಾರಿಕಾ ಕಾರಿಡಾರ ಸೇರಿದಂತೆ ಸಂಕೇಶ್ವರ ಪಟ್ಟಣ ತಾಲೂಕ ಕೇಂದ್ರ ಮಾಡಲು ಅನುಕೂಲವಾಗಿದೆ. ಸಂಕೇಶ್ವರ ಪಟ್ಟಣದಲ್ಲಿ ಅಮ್ಮಣಗಿ, ಕಣಗಲಾ, ಹೆಬ್ಬಾಳ, ದಡ್ಡಿ ಹತ್ತರಗಿ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳನ್ನು ಸೇರಿಕೊಂಡಂತೆ ಸಂಕೇಶ್ವರ ಮತ್ತು ಯಮಕನರ‍್ಡಿ ಪಟ್ಟಣಗಳನ್ನು ಸೇರಿಸಿ ಸಂಕೇಶ್ವರ ತಾಲೂಕವನ್ನಾಗಿಸಬೇಕು.

ಈಗಿರುವ ಹುಕ್ಕೇರಿಯಲ್ಲಿ ಎಲಿಮುನ್ನೋಳಿ, ಬೆಲ್ಲದ ಬಾಗೇವಾಡಿ, ಘೋಡಗೇರಿ ಮತ್ತು ಪಾಶ್ಚಾಪೂರ ಜಿಲ್ಲಾ ಪಂಚಾಯತ ಕ್ಷೇತ್ರಗಳನ್ನು ಒಳಗೊಂಡಂತೆ ಹುಕ್ಕೇರಿ ಪಟ್ಟಣ ಮತ್ತು ಹಿಡಕಲ್ ಜಲಾಶಯ ಪ್ರದೇಶಗಳನ್ನು ಸೇರಿಸಿ ಹುಕ್ಕೇರಿ ತಾಲೂಕನ್ನು ಪ್ರತ್ಯೇಕಿಸಬೇಕೆಂದರು. ಇದರಿಂದ ಹುಕ್ಕೇರಿ ತಾಲೂಕು ಎರಡು ಭಾಗಗಳಾಗಿ ವಿಂಗಡಣೆ ಆಗುವ ಮೂಲಕ ಆಡಳಿತಾತ್ಮಕವಾಗಿ ಅನುಕೂಲವಾಗುತ್ತದೆ ಅದಕ್ಕಾಗಿ ರಾಜ್ಯ ರ‍್ಕಾರ ಬೆಳಗಾವಿ ಜಿಲ್ಲೆಯ ಜತೆಗೆ ತಾಲೂಕುಗಳ ವಿಭಜನೆಯನ್ನು ಮಾಡಬೇಕೆಂದು ಮನವಿಸಿಕೊಳ್ಳುತ್ತೇನೆ ಎಂದರು.

ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನರ‍್ದೇಶಕ ಸತ್ತೆಪ್ಪಾ ನಾಯಿಕ, ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ, ಮುಖಂಡರಾದ ಪಿಕರ‍್ಡ ಬ್ಯಾಂಕ್ ನರ‍್ದೇಶಕ ಗುರುರಾಜ ಕುಲರ‍್ಣಿ, ಪುರಸಭೆ ಮಾಜಿ ನರ‍್ದೇಶಕ ರಾಜು ಮುನ್ನೋಳಿ, ಶಿವಾಜಿ ಬಾರಿಗಿಡದ, ಕೆಂಪಣ್ಣಾ ದೇಸಾಯಿ, ಎ.ಕೆ.ಪಾಟೀಲ, ಅಶೋಕ ಹಿರೇಕೋಡಿ, ರಾಜು ಬಿರಾದಾರಪಾಟೀಲ, ಸಂಜು ದೇಸಾಯಿ, ಶ್ರೀಶೈಲ ಮಠಪತಿ, ಎಚ್.ಎಲ್.ಪೂಜೇರಿ, ದಯಾನಂದ ವಂಟಮೂರಿ, ಗೌಸ ಆಜಂ ನಾಯಿಕವಾಡಿ, ಬಸವರಾಜ ಗಂಗನ್ನವರ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept