ಎಸ್.ಕೆ ಪಬ್ಲಿಕ್ ಸ್ಕೂಲ ವಾರ್ಷಿಕೋತ್ಸವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಅವಶ್ಯ: ರಮೇಶ ಕತ್ತಿ

ಸ್ಥಳೀಯ ಎಸ್.ಕೆ ಪಬ್ಲಿಕ್ ಸ್ಕೂಲಿನ ವಾರ್ಷಿಕೋತ್ಸವ ಸಮಾರಂಭವನ್ನು ರಮೇಶ ಕತ್ತಿ ಉದ್ಘಾಟಿಸಿದರು. ಪಿಂಟು ಶೆಟ್ಟಿ, ಅನೀಲ ಶೆಟ್ಟಿ, ಶಿವಾನಂದ ನೂಲಿ, ರಾಜಶೇಖರ ಮುಚ್ಚಂಡಿ, ಮಹಾವೀರ ನಿಲಜಗಿ ಇತರರಿದ್ದರು.

ಹುಕ್ಕೇರಿ:  ಶಿಕ್ಷಣದ ಜತೆಗೆ ಸಂಸ್ಕಾರ ಅವಶ್ಯ. ಕಾರಣ ಮಕ್ಕಳಿಗೆ ಶಿಕ್ಷಕರು ಮತ್ತು ಪಾಲಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ತಿಳುವಳಿಕೆ ಬರುವ ಮುನ್ನ ಮಕ್ಕಳ ಕೈಗೆ ಮೋಬೈಲ ಕೊಡಬಾರದು ಎಂದು ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.

    ಮಂಗಳವಾರದಂದು ಸ್ಥಳೀಯ ಎಸ್.ಕೆ ಪಬ್ಲಿಕ ಸ್ಕೂಲಿನ 2025-26ನೇ ಸಾಲಿನ ಜೈ-ಹೋ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಕೈಯಲ್ಲಿ ಮೋಬೈಲ್ ಕೊಡುವ ಪರಿಪಾಟ ಹೆಚ್ಚಾಗಿದೆ.ಇದರಿಂದ ಮುಂಬರುವ ದಿನಗಳಲ್ಲಿ ಇದು ಪಾಲಕರಿಗೆ ಮಾರಕವಾಗುತ್ತದೆ ಎಂದು ಎಚ್ಚರಿಸಿದರು. ಸಂಸ್ಕಾರವಂತ ಮಕ್ಕಳು ಮಾತ್ರ ಪಾಲಕರ ಮುಪ್ಪಾವಸ್ಥೆಯಲ್ಲಿ ಸಲಹುತ್ತಾರೆ ಎಂದರು.

      21ನೇ ಶತಮಾನ ಭಾರತ ದೇಶದ್ದಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯಕ್ಕೆ ಯುವ ಜನಾಂಗದ ಸ್ಪಂದನೆ ಅವಶ್ಯ. 70 ರ ದಶಕದಲ್ಲಿ ಮಾಡು ಇಲ್ಲವೇ ಮಡಿ ಎಂಬ ಮಾತಿತ್ತು, 80-90 ರ ದಶಕದಲ್ಲಿ ಮಡಿಯುವ ಮುನ್ನ ಒಳ್ಳೆಯ ಕೆಲಸ ಮಾಡಿ ಮರಣಿಸು ಎನ್ನುತ್ತಿದ್ದರು. ಇದೀಗ ಮರಣಿಸುವ ಮುನ್ನ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲೇ ಬೇಕು ಎಂದು ಹೇಳುವಂತೆ ಬದುಕಿ ಎಂದು ತಿಳಿಸಿದರು.

   ಇದೇ ಸಂದರ್ಭದಲ್ಲಿ ಸ್ಕೂಲಿನ ಪ್ರತಿಭಾವಂತರು, ವಾರ್ಷಿಕ ಕ್ರೀಡಾಕೂಟ ವಿಜೇತರನ್ನು ಹಾಗೂ ರಮೇಶ ಕತ್ತಿ ಮತ್ತು ಪ್ರಗತಿಪರ ರೈತ ಕೆಂಪಣ್ಣಾ ದೇಸಾಯಿ ಅವರನ್ನು ಸನ್ಮಾನಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

   ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಎಸ್.ಕೆ ಪಬ್ಲಿಕ್ ಸಿ.ಬಿ.ಎಸ್.ಸಿ ಸಂಸ್ಥೆಯ ಅಧ್ಯಕ್ಷ ಪಿಂಟು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆದಿತ್ಯ ಶೆಟ್ಟಿ, ನಿರ್ದೇಶಕರಾದ ಎಸ್.ಆರ್.ಶೆಟ್ಟಿ, ಓಂಕಾರ ಹೆದ್ದೂರಶೆಟ್ಟಿ, ಸುಹಾಸ ನೂಲಿ, ಸಚೀನ ಹೆದ್ದೂರಶೆಟ್ಟಿ, ಸುರೇಶ ತಾರಳಿ, ಸಂಜಯ ಅಡಕೆ, ಮಹಾಲಿಂಗಪ್ಪಾ ಗಂಧ, ಸೋಮಶೇಖರ ಪರಕನಟ್ಟಿ, ವಿರೇಶ ಗಜಬರ, ಚನ್ನಬಸಪ್ಪಾ ಗಜಬರ, ದಯಾನಂದ ಹಿರೇಮಠ, ಸಿ.ಎಸ್.ಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅನೀಲ ಶೆಟ್ಟಿ, ಉಪಾಧ್ಯಕ್ಷ ಶಿವಾನಂದ ನೂಲಿ, ನಿರ್ದೇಶಕರಾದ ರಾಜಶೇಖರ ಮುಚ್ಚಂಡಿ, ಚನ್ನಬಸವ ಗಂಧ, ಎಸ್.ಬಿ.ಬುರ್ಜಿ, ವಾಗ್ಧೇವಿ ತಾರಳಿ, ಡಾ.ಮಂಗಲಾ ಹಂದಿಗು0ದ ಇತರರಿದ್ದರು. ಪ್ರಿನ್ಸಿಪಾಲ ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept