ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯ: ಗ್ರಾ.ಪಂ. ಅಧ್ಯಕ್ಷ ಮೀರಾಸಾಹೇಬ ಮುಲ್ತಾನಿ ಕಾರ್ಯಕ್ಕೆ ಅಭಿನವ ಮಂಜುನಾಥ ಸ್ವಾಮೀಜಿ ಮೆಚ್ಚುಗೆ

ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಲಕ್ಷ್ಮೀದೇವಿ ಜಾತ್ರಾ ಉತ್ಸವ ಸಮಿತಿ ಮುಖಂಡರಾದ ನಿಖಿಲ ಸರದೇಸಾಯಿ ಅವರನ್ನು ಗ್ರಾಮ ಪಂಚಾಯತಿಯಿಂದ ಸನ್ಮಾನಿಸಿದರು. ಅಭಿನವ ಮಂಜುನಾಥ ಶ್ರೀಗಳು, ಮೀರಾಸಾಬ ಮುಲ್ತಾನಿ, ಶಾರವ್ವಾ ಮರಡಿ , ಕೆಂಪಣ್ಣಾ ದೇಸಾಯಿ ಮತ್ತಿತರರಿದ್ದರು.

ಹುಕ್ಕೇರಿ: ಅಧಿಕಾರಕ್ಕಿಂತ ಜನಸೇವೆ ಮುಖ್ಯವಾಗಿದೆ, ತಮ್ಮ ಅವಧಿಯಲ್ಲಿ ಮಾಡಿರುವ ಜನಪರ ಕೆಲಸಗಳು ಮಾತ್ರ ಶಾಶ್ವತವಾಗಿರುತ್ತದೆ ಗ್ರಾ,ಪಂ. ಅಧ್ಯಕ್ಷ ಮೀರಾಸಾಹೇಬ ಮುಲ್ತಾನಿ ಅವರು ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಗ್ರಾಮವನ್ನು ಅಭಿವೃದ್ದಿ ಪಡಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಸ್ವಾಮಿಜಿ ಹೇಳಿದರು.

ಅವರು ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಎನ್.ಆರ್.ಎಲ್.ಎಮ್ ಯೋಜನೆಯಡಿ ನಿರ್ಮಿಸಿದ ಗ್ರಾಮ ಪಂಚಾಯತ ಮೇಲಂತಸ್ಥಿನ ಸಭಾಭವನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಮೀರಾಸಾಬ ಮುಲ್ತಾನಿ ಮಾತನಾಡಿ ಗ್ರಾಮದ ಅಭಿವೃದ್ದಿಗೆ ನನ್ನದೊಂದಿಗೆ ಸಹಕಾರ ನೀಡುತ್ತಿರುವ ಗ್ರಾಮ ಪಂಚಾಯತಿ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದರು. ಸಮಾರಂಭದಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರಾ ಉತ್ಸವ ಸಮಿತಿ ಮುಖಂಡರಾದ ನಿಖಿಲ ಸರದೇಸಾಯಿ ಅವರನ್ನು ಗ್ರಾಮ ಪಂಚಾಯತಿಯವರು ಸನ್ಮಾನಿಸಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಕೆಂಪಣ್ಣಾ ವಾಸೇದಾರ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶಾರವ್ವಾ ಮರಡಿ, ಸದಸ್ಯರಾದ ಪರವೀನಬಿ ಪಠಾಣ, ಸುರೇಖಾ ಮಾಳಾಜ, ಗೌರೀಶ ಹಂದಿಗೂಡಮಠ, ಕಲ್ಲಗೌಡ ಪಾಟೀಲ, ಪ್ರಶಾಂತ ಭೀಮಣ್ಣವರ, ಇಂದುಮತಿ ಹವಾಲ್ದಾರ, ಮಹಾದೇವಿ ಮಾಂಡೇಕರ, ಫರಜಾನಾ ಖಲೀಫ, ಸುಮಿತ್ರಾ ಕಟ್ಟಿ, ಮಹಾಂತೇಶ ನಾಗನೂರಿ, ಸಂದೀಪ ರಾಚನ್ನವರ, ದಸ್ತಗೀರ ತಹಶೀಲ್ದಾರ, ಬಸವರಾಜ ಮರಡಿ, ಗೀತಾ ಬಡಿಗೇರ, ಅನೀತಾ ಇಮಗೌಡನವರ, ದುಂಡಪ್ಪಾ ಮರೆಣ್ಣವರ, ಅಜೀತ ಮಲಗೌಡನವರ, ಶಾನೂರ ತಳವಾರ, ವಿಠಲ ತೋರಣಹಳ್ಳಿ, ಮಹಾದೇವಿ ಮಠಪತಿ, ಗಂಗವ್ವ ತಳವಾರ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept