ಹುಕ್ಕೇರಿ ಗ್ರಾಮದೇವತೆ ಜಾತ್ರೆ: ಭಕ್ತರಿಗೆ ಶುದ್ಧ ನೀರು, ಶುಚಿತ್ವಕ್ಕೆ ಆದ್ಯತೆ ನೀಡಲು ಎಸಿ ಶ್ರವಣಕುಮಾರ ನಾಯಕ ಸೂಚನೆ

ತಾಲೂಕಾ ಪಂಚಾಯತ ಸಭಾಭನದಲ್ಲಿ ಶ್ರೀ ಲಕ್ಷಿö್ಮದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕಿಂಡ ಶಾಂತಿ ಸಭೆಯಲ್ಲಿ ಉಪವಿಭಾಗಧಿಕಾರಿ ಶ್ರವಣಕುಮಾರ ನಾಯಿಕ ಮಾತನಾಡಿದರು. ಮುಖಂಡರು, ಅಧಿಕಾರಿಗಳಿದ್ದರು.

ಹುಕ್ಕೇರಿ: ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಭಕ್ತಾಧಿಗಳು ಹುಕ್ಕೇರಿ ಪಟ್ಟಣಕ್ಕೆ ಆಗಮಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಲು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಪುರಸಭೆ ಶ್ರಮಿಸಬೇಕು ಎಂದು ಉಪ ವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿಗಳಾದ ಶ್ರವಣಕುಮಾರ ನಾಯಕ ತಿಳಿಸಿದರು

ಅವರು ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಪೋಲಿಸ್ ಇಲಾಖೆ ವತಿಯಿಂದ ಹಮ್ಮಿಕೊಂಡ ಶಾಂತಿ ಮತ್ತು ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಲಕ್ಷ್ಮೀದೇವಿ ಸಂಚರಿಸುವ ಮಾರ್ಗ, ಪ್ರತಿಸ್ಥಾಪಿಸುವ ಸ್ಥಳಗಳಲ್ಲಿ ಸಮಯಪಾಲನೆ ಅವಶ್ಯ.. ಪುರಸಭೆ ಅಧಿಕಾರಿಗಳು ಜಾತ್ರೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ರಸ್ತೆ, ನೀರು, ವಿದ್ಯುತ್, ಶೌಚಾಲಯಗಳು ಸೇರಿದಂತೆ ಜಾತ್ರೆಗೆ ಬೇಕಾಗುವ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕೆಂದರು. ಸ್ವಚ್ಚತೆಗೆ ಸಾರ್ವಜನಿಕರ ಸಹಕಾರವೂ ಅವಶ್ಯವೆಂದರು.

ಡಿವೈಎಸ್ಪಿ ರವಿ ನಾಯಿಕ ಮಾತನಾಡಿ. ಅಹಿತಕರ ಘಟನೆ ತಡೆಯುವುದಕ್ಕೆ ಸೂಕ್ತ ಪೋಲಿಸ್ ಸಿಬ್ಬಂದಿ ನಿಯೋಜಿಸುತ್ತೇವೆ. ಆದರೆ ಪಟ್ಟಣದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಜಾತ್ರೆ ಯಶಸ್ಸಿಗೆ ಕೈ ಜೋಡಿಸಬೇಕು. ಕೋಮು ಸೌಹಾರ್ದತೆಗೆ ಹೆಸರಾಗಿರುವ ಹುಕ್ಕೇರಿ ಪಟ್ಟಣದಲ್ಲಿ ಭಾವೈಕ್ಯತೆಯಿಂದ ಆಚರಿಸುವಂತೆ ಕೋರಿದರು. ಜಾತ್ರೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೋಲಿಸ್ ಇಲಾಖೆಗೆ ತಿಳಿಸಲು ಸೂಚಿಸಿದರು.

ಸಿಪಿಐ ಬಸ್ಸಾಪೂರೆ ಮಾತನಾಡಿ ಶ್ರೀ ಲಕ್ಷ್ಮೀದೇವಿ ಸಂಚರಿಸುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯುವಕರು ಎಲ್ಲ ಸಮುದಾಯದ ಮುಖಂಡರು ಜಾತ್ರಾ ಮಹೋತ್ಸವದಲ್ಲಿ ಪೋಲಿಸ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ವಿನಂತಿಸಿದರು. ಪುರಸಭೆ ಮುಖ್ಯಾಧಿಕಾರಿ ಮಾತನಾಡಿ ಡಿಡಿಟಿ, ಫಾಗಿಂಗ್ ಮತ್ತು ಮೋಬೈಲ್ ಶೌಚಾಲಯಗಳ ಅಳವಡಿಕೆ, ಶುಚಿತ್ವಕ್ಕಾಗಿ ಹೆಚ್ಚುವರಿ ಸಿಬ್ಬಂದಿಗಳ ನೇಮಕ ಮಾಡಕೊಳ್ಳಲಾಗಿದೆ ಎಂದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಮುಸ್ಲಿಂ ಸಮಾಜದ 11 ಜಮಾತ ಅಧ್ಯಕ್ಷ ಸಲೀಮ್ ನದಾಫ, ಜಾತ್ರಾ ಸಮಿತಿ ಅಧ್ಯಕ್ಷ ಭಾಪು ನಾಯಿಕ, ಕಾರ್ಯದರ್ಶಿ ಗುರು ಕುಲಕರ್ಣಿ, ಚಂದ್ರಶೇಖರ ಗಂಗಣ್ಣವರ, ರವಿ ಕರಾಳೆ, ಭೀಮಶಿ ಮುದಕ್ಕನವರ, ಚನ್ನಪ್ಪಾ ಗಜಬರ, ಆನಂದ ಗಂಧ, ತಮ್ಮಣಗೌಡಾ ಪಾಟೀಲ ಮಾತನಾಡಿ ಬಸ್ ನಿಲ್ದಾಣ ಬಳಿ ಅಂಗಡಿಕಾರರು ಪುಟಪಾತ್ ಅತಿಕ್ರಮಿಸಿಕೊಂಡಿದ್ದಾರೆ. ಅವುಗಳ ತೆರವು, ಜಾತ್ರೆಗೆ ಬೇಕಾಗುವ ಸೌಲಭ್ಯ, ಪಾರ್ಕಿಂಗ್, ಪಟ್ಟಣದ ಸ್ವಚ್ಛತೆಗೆ ಆದ್ಯತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಿದರು.

ಒಟ್ಟಾರೆ ಜಾತ್ರೆ ಸುವ್ಯವಸ್ಥಿತ ಮತ್ತು ಶಾಂತಿಯುತ ಆಚರಣೆಗೆ ಪಟ್ಟಣದ ಜನರ ಸಹ ಭಾಗಿತ್ವ ಅವಶ್ಯವೆಂದು ಸಭೆಯಲ್ಲಿ ತಿಳಿಸಿದರು.
ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಮಾಜಿ ಸಚಿವ ಶಶಿಕಾಂತ ನಾಯಿಕ, ತಹಶೀಲ್ದಾರ ಬಲರಾಮ ಕಟ್ಟಿಮನಿ, ಜಯಗೌಡ ಪಾಟೀಲ, ಜಾತ್ರಾ ಕಮಿಟಿ ಸದಸ್ಯರು ಹಾಗೂ ಅಧಿಕಾರಿಗಳಿದ್ದರು. ಬಿ.ಕೆ ಸಣ್ಣಕ್ಕಿ ಸ್ವಾಗತಿಸಿ, ನಿರೂಪಿಸಿದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept