ಸಂಕೇಶ್ವರದಲ್ಲಿ ನಾಳೆ (ಮಾ. 7) ವಿದ್ಯುತ್ ವ್ಯತ್ಯಯ: ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ ಪವರ್ ಕಟ್

ಹುಕ್ಕೇರಿ : ತಾಲೂಕಿನ ಸಂಕೇಶ್ವರದ 110/33/11 ಕೆ.ವ್ಹಿ ವಿದ್ಯುತ್ ಉಪಕೇಂದ್ರದ ಮಾರ್ಗ ತ್ರೆಮಾಸಿಕ ನಿರ್ವಹಣಾ ಕಾರ್ಯವನ್ನು ಶನಿವಾರ ದಿ.07-03-2026 ರಂದು ಕೈಗೊಳ್ಳಲು ನಿರ್ಧರಿಸಿದ್ದಾರೆ. ಆ ದಿನ ಮಧ್ಯಾಹ್ನ 1 ಗಂಟೆಯಿ0ದ ಸಾಯಂಕಾಲ 06 ಗಂಟೆವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಸದರಿ ಕೇಂದ್ರದ ಮೇಲೆ ಬರುವ ಸಂಕೇಶ್ವರ ಪಟ್ಟಣ, ನಿಡಸೋಸಿ, ಕೇಸ್ತಿ, ಕಮತನೂರ, ಅಮ್ಮಣಗಿ, ಆಲೂರ ಕೆ.ಎಂ, ಅಕ್ಕಿವಾಟ, ಅಂಕಲೆ, ಗೋಟೂರ, ಗವನಾಳ, ಹೆಬ್ಬಾಳ, ಕೋಚರಿ, ಅರ್ಜುನವಾಡ, ಮಸರಗುಪ್ಪಿ, ಕಣಗಲಾ, ಹೊನ್ನಿಹಳ್ಳಿ, ಕೋಣನಕೇರಿ, ಶೇಕಿನ ಹೊಸೂರ, ಮತ್ತಿವಾಡ, ಭೈರಾಪೂರ, ಬುಗಟಿ ಆಲೂರ, ರಾಶಿಂಗ, ನಾಗನೂರ ಕೆ.ಎಸ್, ಶಿಪ್ಪೂರ, ಹಿಟ್ನಿ, ಮತ್ತು ಹಡಲಗಾ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ ಕೋರಿದ್ದಾರೆ.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept