ಹತ್ತರಗಿ ಭಾಗದಲ್ಲಿ ಮಾ. 8 ರಂದು ವಿದ್ಯುತ್ ವ್ಯತ್ಯಯ: ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಪವರ್ ಕಟ್

ಹುಕ್ಕೇರಿ : ತಾಲೂಕಿನ ಹತ್ತರಗಿಯ 110/11 ಕೆ.ವ್ಹಿ ವಿದ್ಯುತ್ ಉಪಕೇಂದ್ರದ ತ್ರೆಮಾಸಿಕ ನಿರ್ವಹಣಾ ಕಾರ್ಯವನ್ನು ರವಿವಾರ ದಿ.08-03-2026 ರಂದು ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಾರಣ ಅಂದು ಬೆಳಿಗ್ಗೆ 9ಗಂಟೆಯಿ0ದ ಸಾಯಂಕಾಲ 6 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದೆಂದು ತಿಳಿಸಿದ್ದಾರೆ.

ಸದರಿ ಕೇಂದ್ರದ ಮೇಲೆ ಬರುವ ಕುರಣಿ, ಕುರಣಿವಾಡಿ, ಚಿಕಾಲಗುಡ್ಡ, ಹಂಚಿನಾಳ, ಉ.ಖಾನಾಪೂರ, ಜಿನರಾಳ, ಯಮಕನಮರ್ಡಿ, ಹತ್ತರಗಿ, ಆನಂದಪೂರ, ಇಂದಿರಾ ನಗರ, ಹಳೇ ಗುಡಗನಟ್ಟಿ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ ತಿಳಿಸಿದ್ದಾರೆ.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept