ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರೂಪಾ ಅಯ್ಯರ ಉದ್ಥಾಟಿಸಿದರು. ಶ್ರೀಗಳು, ಗಣ್ಯರಿದ್ದರು.
ಹುಕ್ಕೇರಿ: ಗಡಿಭಾಗದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಸಮಾಜದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ, ಶೈಕ್ಷಣೀಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸಿದ ಜಿನೈಕ್ಯ ವಸಂತ ನಿಲಜಗಿ ಅವರ ಕಾರ್ಯಗಳು ಸ್ಮರಣೀಯವಾಗಿವೆ ಎಂದು ರಾಜ್ಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಬಿಜೆಪಿ ರಾಜ್ಯ ಸಂಚಾಲಕಿ, ಆಧ್ಯಾತ್ಮ ಚಿಂತಕಿ, ಚಿತ್ರ ನಿರ್ದೇಶಕಿ, ಡಾ ರೂಪಾ ಅಯ್ಯರ್ ಹೇಳಿದರು.
ಸೋಮವಾರದಂದು ಅವರು ಸ್ಥಳೀಯ ಶ್ರೀ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಸಂಸ್ಥಾಪಕ ದಿ, ವಸಂತ ನಿಲಜಗಿ ಅವರು 7 ನೇ ಪುಣ್ಯಸ್ಮರಣೆ ಹಾಗೂ ಸಹಕಾರಿ ಬೆಳ್ಳಿಹಬ್ಬ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ, ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬರುವಾಗ ತಂದಿರುವುದಿಲ್ಲ ಹೋಗುವಾಗ ತೆಗೆದುಕೊಂಡು ಹೋಗುವುದಿಲ್ಲ ಎಂಬ ಮಾತನ್ನು ಅರಿತುಕೊಂಡು ಸಮಾಜ ಸೇವೆಯೊಂದೇ ನಮಗೆ ಹೆಸರು ತರುತ್ತದೆ ಎಂಬುದಕ್ಕೆ ಜಿ.ವಸಂತ ನಿಲಜಗಿ ಅವರ ಬದುಕು ನಿದರ್ಶನವೆಂದರು.ಈಗ ಅವರಿಲ್ಲ ಆದರೆ ಅವರು ಮಾಡಿದ ಕಾರ್ಯಗಳು ಸದಾ ನೆನಪಿಸಿಕೊಳ್ಳುತ್ತೇವೆ.ಇದರಿಂದ ಅವರ ಹೆಸರು ಅಜರಾಮರವಾಗಿದೆ ಎಂದು ತಿಳಿಸಿದರು.
ಸಮಕೇಶ್ವರದ ಡಾ, ರಮೇಶ ದೊಡಭಂಗಿ ಮಾತನಾಡಿ ಪ್ರತಿದಿನ ಸೇವಿಸುವ ತರಕಾರಿ ಸೇರಿದಂತೆ ಎಲ್ಲಾ ಪಧಾರ್ಥಗಳಿಗೂ ರಾಸಾಯನಿಕ ಔಷಧಿ ಸಿಂಪರಣೆ ಮಾಡಿ ಬೆಳೆ ಬೆಳಯುತ್ತಾರೆ. ನಾವು ಸೇವಿಸುವ ಆಹಾರ ವಿಷಯುಕ್ತವಾಗಿದ್ದು. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರಣ ಉತ್ತಮ ಆಹಾರ, ನಿತ್ಯ ಯೋಗ, ಧ್ಯಾನದಿಂದ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯವೆಂದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ತಂದೆಯ ಆದರ್ಶ ಜೀವನವನ್ನು ಮಾದರಿಯಾಗಿಟ್ಟುಕೊಂಡು ಮಹಾವೀರ ನಿಲಜಗಿ ಸಮಾಜ ಮುಖಿಯಾಗಿ ಕಾರ್ಯನಿರ್ವಸುತ್ತಿರುವುದು ಪ್ರಶಂಸನೀಯವೆಂದರು.ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಮತ್ತು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿದರು. ಡಾ. ಮಯೂರ ಕುಲಕರ್ಣಿ, ಡಾ. ಶೀಲಾ ದೊಡಭಂಗಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜಯ ನಿಲಜಗಿ, ರೀಡ್ಸ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಸಹಕಾರಿ ನಿರ್ದೇಶಕರಾದ ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪೂರೆ, ಅಶೋಕ ಪಾಟೀಲ, ರಾಜಶ್ರೀ ಖತಗಲ್ಲಿ, ಅನುಪಮಾ ಕಬಾಡಗಿ, ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಪಾಟೀಲ, ವ್ಯವಸ್ಥಾಪಕ ಸಂತೋಷ ರಜಪೂತ, ಪ್ರವೀಣ ಪಾಟೀಲ, ಮತ್ತಿತರರಿದ್ದರು. ಅಂಜನಾ ಗುಗ್ಗಳಿ ಸ್ವಾಗತಿಸಿದರು. ಎಸ್.ಬಿ. ಗುಬ್ಬಿ ವಂದಿಸಿದರು.





