ಶ್ರೀ ಶಿವಬಸವ ಮಹಾಸ್ವಾಮೀಜಿ, ವಿರಕ್ತ ಮಠ ಹುಕ್ಕೇರಿ
ಹುಕ್ಕೇರಿ : ಪಟ್ಟಣದ ಬಜಾರ ಪೇಟೆಯ ಶ್ರೀ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ಬಸವ ಜಯಂತಿ ಉತ್ಸವ 2025 ರ ನಿಮಿತ್ಯ ಮೇ ತಿಂಗಳ ಗುರುವಾರ ದಿ:01 ರಿಂದ ಶನಿವಾರ ದಿ: 03 ರವರೆಗೆ ಪ್ರತಿನಿತ್ಯ ಸಂಜೆ 6 ಗಂಟೆಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಶಿವಬಸವ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಮಂಗಳವಾರದಂದು ಶ್ರೀ ಮಠದಿಂದ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ ಪ್ರಕಾರ ಪ್ರತಿ ವರ್ಷ ಬಸವ ಜಯಂತಿ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದಿಂದ ಆಯೋಜಿಸಲಾಗುತ್ತಿದೆ. ಅದರ ಈ ವರ್ಷ ಸಹ ಹಮ್ಮಿಕೊಂಡಿದ್ದೇವೆ ಎಂದಿರುವರು. ಕಾರಣ ಭಕ್ತಾಧಿಗಳು ಶಿವಲಿಂಗೇಶ್ವರ ವಿರಕ್ತಮಠದ ಆವರಣದಲ್ಲಿ ನಡೆಯುವ ಪ್ರವಚನ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಶಿವಲಿಂಗೇಶ್ವರ ಕೃಪಾಶೀರ್ವಾದ ಪಡೆಯಲು ಕೋರಿದ್ದಾರೆ.





