ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಹಿರಾ ಶುಗರ್ಸ ನಿವೃತ್ತ ಎಂ.ಡಿ ಎಸ್.ಆರ್.ಕರ್ಕಿನಾಯಿಕ ಮತ್ತು ಶಿವಾನಂದ ನಾಯಿಕ ಅವರಿಂದ ಮಾಜಿ ಸಂಸದ ರಮೇಶ ಕತ್ತಿ ಸತ್ಕಾರ ಸ್ವೀಕರಿಸಿದರು. ಸತ್ತೆಪ್ಪಾ ನಾಯಿಕ, ಹೊನ್ನಪ್ಪಾ ನಾಯಿಕ, ಮಲ್ಲಪ್ಪಾ ನಾಯಿಕ, ಅಜಿತ ನಾಯಿಕ, ವಕೀಲ ಸಾತಪ್ಪಾ ನಾಯಿಕ, ಶಿವಕುಮಾರ ನಾಯಿಕ ಇತರರಿದ್ದರು.
ಹುಕ್ಕೇರಿ: ನಿವೃತ್ತಿ ಜೀವನ ಸಮಾಜಮುಖಿಯಾಗಿ ಶ್ರಮಿಸಬೇಕು.ನೌಕರಿ ಜೀವನ ಸೀಮಿತ ಕರ್ತವ್ಯಕ್ಕೆ ಆದ್ಯತೆ ಆದರೆ, ನಿವೃತ್ತಿಯ ನಂತರ ಬೇಕಾದಷ್ಟು ರಂಗಗಳಿಗೆ ಸೇವೆಗೈಯಲು ಅವಕಾಶ ಇದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಇತ್ತೀಚೆಗೆ (ಮಂಗಳವಾರ) ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಹಿರಾ ಶುಗರ್ಸ್ ನಿವೃತ್ತ ಎಂ.ಡಿ ಎಸ್.ಆರ್.ಕರ್ಕಿನಾಯಿಕ ಮತ್ತು ಶಿವಾನಂದ ನಾಯಿಕ ಅವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಗುಮಾಸ್ತ ಹುದ್ದೆಯಿಂದ ಕಾರ್ಯ ಪ್ರಾರಂಭಿಸಿ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ತಲುಪಿ ಕಾರ್ಯ ನಿರ್ವಹಿಸಿದ್ದು ಅವಿಸ್ಮರಣೀಯ.ಇದಕ್ಕೆ ಎಸ್.ಆರ್.ಕರ್ಕಿನಾಯಿಕ ಅವರಲ್ಲಿ ತಾಳ್ಮೆ, ಸಹನಶೀಲತೆ ಮತ್ತು ಕರ್ತವ್ಯ ದಕ್ಷತೆ ಕಾರಣವೆಂದರು. ಯಾವುದೇ ಉದ್ಯೋಗಿ ಸಿಕ್ಕ ಅವಕಾಶದಲ್ಲಿ ಪ್ರಾಮಾಣಿಕ ಮತ್ತು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಉನ್ನತ ಸ್ಥಾನಮಾನ ದೊರಕುತ್ತವೆ ಎಂಬುದಕ್ಕೆ ಇದು ನಿದರ್ಶನವೆಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಎಂ.ಡಿ ಎಸ್.ಆರ್.ಕರ್ಕಿನಾಯಿಕ ಮತ್ತು ಶಿವಾನಂದ ನಾಯಿಕ ಅವರು ಮಾಜಿ ಸಂಸದರನ್ನು ಸತ್ಕರಿಸಿದರು. ಮುಖಂಡರಾದ ಸತ್ತೆಪ್ಪಾ ನಾಯಿಕ, ಹೊನ್ನಪ್ಪಾ ನಾಯಿಕ, ಮಲ್ಲಪ್ಪಾ ನಾಯಿಕ, ಅಜಿತ ನಾಯಿಕ, ವಕೀಲ ಸಾತಪ್ಪಾ ನಾಯಿಕ, ಶಿವಕುಮಾರ ನಾಯಿಕ, ಭಾಪು ನಾಯಿಕ, ಸಾತವೀರ ನಾಯಿಕ, ಕೆಂಪಣ್ಣಾ ನಾಯಿಕ, ಸಂಜೀವ ಚಿಕ್ಕೋಡಿ, ಶಿವನಾಯಿಕ ನಾಯಿಕ, ಚನ್ನಮಲ್ಲಪ್ಪ ನಾಯಿಕ, ಮಹಾದೇವ ನಾಯಿಕ ಸೇರಿದಂತೆ ಅನೇಕರಿದ್ದರು.





