ಹುಕ್ಕೇರಿ ಜಿಮಖಾನ ಆಂಗ್ಲ ಮಾಧ್ಯಮ ಶಾಲೆ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ: ರವಿ ಕರಾಳೆ

ಹುಕ್ಕೇರಿ: ಪಟ್ಟಣದ ಪ್ರಪ್ರಥಮ ಆಂಗ್ಲ ಮಾಧ್ಯಮ ಶಾಲೆ ಎನಿಸಿಕೊಂಡ ಹುಕ್ಕೇರಿ ಜಿಮಖಾನ ಆಂಗ್ಲ ಮಾಧ್ಯಮ ಹೈಸ್ಕೂಲ ಸುವರ್ಣ ಮಹೋತ್ಸವದತ್ತ ಧಾವಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರವಿ ಕರಾಳೆ ಹೇಳಿದರು.

ಅವರು ಶುಕ್ರವಾರದಂದು ಶಾಲೆಯ ವಾರ್ಷಿಕೋತ್ಸವ ಮತ್ತು ವಾರ್ಷಿಕ ಕ್ರೀಡಾಕೂಟಗಳ ಬಹುಮಾನ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು 47ನೇ ವಾರ್ಷಿಕೋತ್ಸವ ಸಮಾರಂಭ ಆಚರಿಸಿಕೊಳ್ಳುತ್ತಿರುವ ಈ ಸಂಸ್ಥೆಯನ್ನು ಸನ್ 1979ಪಟ್ಟಣದ ಹಿರಿಯರು ಪ್ರಾರಂಭಿಸಿದರು ಎಂದರು. ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದೆ.ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಸಮಾಜದ ಮುಂಚೂಣಿ ನಾಯಕರು, ಜನಪ್ರತಿನಿಧಿಗಳು, ಉದ್ಯೋಗಸ್ಥರು ಹಾಗೂ ಉನ್ನತ ಸ್ಥಾನಮಾನ ಹೊಂದಿರುವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.

ಪ್ರಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಗುರು ಪಾಟೀಲ ಅವರು ಸಮಾರಂಭವನ್ನು ಉದ್ಘಾಟಿಸಿದರು. ಇತ್ತೀಚಿಗೆ ಎಲ್.ಎಲ್.ಬಿ ವ್ಯಾಸಾಂಗ ಪೂರ್ಣಗೊಳಿಸಿದ ಅಭಿಷೇಕ ಕರಾಳೆ ಮಾತನಾಡಿ ನಾನು ಸೇರಿದಂತೆ ಅನೇಕರು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಈ ಶಾಲೆ ನಮಗೆ ಒಳ್ಳೆಯ ಸಂಸ್ಕಾರ ವಿದ್ಯೆ ನೀಡಿದೆ. ನಮಗೆ ಕಲಿಸಿದ ಶಿಕ್ಷಕರನ್ನು ಹಾಗೂ ಕಲಿತ ಶಾಲೆಯನ್ನು ಜೀವನದಲ್ಲಿ ಎಂದಿಗೂ ಸ್ಮರಿಸಿಕೊಳ್ಳುತ್ತೇನೆ ಎಂದರು.

ಪಾಲಕರು, ವಿದ್ಯಾಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊ0ಡರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ದೀಪದಾನ ಕಾರ್ಯಕ್ರಮ ನಡೆಯಿತು. ಹಾಗೂ ಅತಿಥಿಗಳನ್ನು ಸನ್ಮಾನಿಸಿದರು. ಪ್ರತಿಭಾವಂತರು ಮತ್ತು ವಾರ್ಷಿಕ ಕ್ರೀಡಾಕೂಟ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಿವೃತ್ತ ಪ್ರಧಾನ ಗುರುಮಾತೆ ಪರಿಮಳಾ ಕುಲಕರ್ಣಿ, ಸಂಸ್ಥೆಯ ನಿರ್ದೇಶಕರಾದ ಜೆ.ಎ.ಹವಾಲ್ದಾರ, ಎಸ್.ಆರ್.ನಾವಲಗಿ ಹಾಗೂ ಅಭಿಷೇಕ ಕರಾಳೆ, ಲತಾ ಬಡಿಗೇರ, ಮಲ್ಲಿಕಾರ್ಜುನ ನಾಯಿಕ ವೇದಿಕೆಯಲ್ಲಿದ್ದರು. ಮುಖ್ಯ ಶಿಕ್ಷಕಿ ಜಮೀರಾ ಗೋರಿಖಾನ ಸ್ವಾಗತಿಸಿ, ಶಾಲಾ ವಾರ್ಷಿಕ ಪ್ರಗತಿ ವಿವರಿಸಿದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept