ಗುರುಶಾಂತೇಶ್ವರ ಅಕ್ಷರ ದಾಸೋಹ ಕಾರ್ಯ ರಾಜ್ಯಕ್ಕೆ ಮಾದರಿ: ಡಿಡಿಪಿಐ ಸೀತಾರಾಮ

ಹುಕ್ಕೇರಿ ಗುರುಶಾಂತೇಶ್ವರ ಅಕ್ಷರ ದಾಸೋಹ ಕೇಂದ್ರದಲ್ಲಿ ಡಿಡಿಪಿಐ ಸೀತಾರಾಮ ಅವರನ್ನು ಸನ್ಮಾನಿಸಿದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಪ್ರಭಾವತಿ ಪಾಟೀಲ, ಎ.ಎಸ್. ಪದ್ಮನ್ನವರ ಇತರರಿದ್ದರು.

ಹುಕ್ಕೇರಿ: ಸ್ಥಳೀಯ ಗುರುಶಾಂತೇಶ್ವರ ಅಕ್ಷರ ದಾಸೋಹ ಕೇಂದ್ರದ ಕಾರ್ಯ ರಾಜ್ಯದಲ್ಲಿ ಮಾದರಿಯಾಗಿದೆ.ಇಸ್ಕಾನ್ ಮತ್ತು ಅದಮ್ಯ ಚೇತನದಂತಹ ಸಮಾಜಮುಖಿಯಾಗಿ ಗುರುತಿಸಿಕೊಂಡಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 65 ಸಾವಿರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜತೆಗೆ ರುಚಿಕರವಾದ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿರುವುದು ಪ್ರಶಂಸನೀಯವೆಂದು ಚಿಕ್ಕೋಡಿ ಜಿಲ್ಲಾ ಡಿಡಿಪಿಐ ಸೀತಾರಾಮ ಹೇಳಿದರು.

      ಅವರು ಶುಕ್ರವಾರ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಅಕ್ಷರ ದಾಸೋಹ ಕೇಂದ್ರದಲ್ಲಿ 2025-26 ಸಾಲಿನ ಅಕ್ಷರ ದಾಸೋಹ ಯೋಜನೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಹಸಿದ ಮಗುವಿಗೆ ಆಹಾರ ಒದಗಿಸಬೇಕೆಂದು ಕೇಂದ್ರ, ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆ ಯೋಜನೆಯಿಂದ ಶಾಲಾ ಹಾಜರಾತಿ ಹೆಚ್ಚಾಗಿದೆ.ಇದರ ಜೊತೆಗೆ ಮಕ್ಕಳ ಕಲಿಕಾಮಟ್ಟ ಹೆಚ್ಚಿಸಲು ಮೊದಲ ಬಾರಿ ಚಿಕ್ಕೋಡಿ ಶೈಕ್ಷಣೀಕ ಜಿಲ್ಲೆಯ ಸರಕಾರಿ ಅರೆ ಸರಕಾರಿ ಪ್ರತಿಯೊಬ್ಬ ನೌಕರರು ಎರಡು ಮಕ್ಕಳನ್ನು ಶೈಕ್ಷಣೀಕ ದತ್ತು ತೆಗೆದುಕೊಂಡು ಓದಿಸುವ ಯೋಜನೆ ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ ಎಂದರು.

           ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವದ ಸಾಮಾಜಿಕ ಯೋಜನೆಗಳಾಗಿವೆ. ಮಕ್ಕಳ ಶೈಕ್ಷಣೀಕ ಪ್ರಗತಿ ಜೊತೆಗೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಶಿವಾಚಾರ್ಯರು ಸನ್ಮಾನಿಸಿದರು. ತಾ.ಪಂ ಇ.ಒ ಟಿ.ಆರ್.ಮಲ್ಲಾಡದ, ಬಿ.ಇ.ಒ ಪ್ರಭಾವತಿ ಪಾಟೀಲ ಮಾತನಾಡಿದರು.

      ತಾಲೂಕಾ ಪಂಚಾಯತ ಕಾರ್ಯನಿರ್ವಾಹಕಾಧಿಕಾರಿ ಟಿ.ಆರ್. ಮಲ್ಲಾಡದ, ಬಿ.ಇ.ಒ ಪ್ರಭಾವತಿ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಅಧಿಕಾರಿ ಎ.ಎಸ್. ಪದ್ಮನ್ನವರ, ಅಕ್ಷರ ದಾಹೋಹ ಅಧಿಕಾರಿ ಸವಿತಾ ಹಲಕಿ, ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಸಿದಲಿಂಗಯ್ಯಾ ಹಿರೇಮಠ, ಸಂಪತ್ ಕುಮಾರ ಶಾಸ್ತ್ರೀಗಳು ಮತ್ತಿತರರಿದ್ದರು. 

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept