ತಾಲೂಕಿನ ಸುಲ್ತಾನಪೂರ ಗ್ರಾಮದಲ್ಲಿ ನಡೆದ ಜಿ.ಟಿ. ಮೇಕೆ ಸಾಕಾಣಿಕೆ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿದರು. ಸ್ವಾಮೀಜಿಗಳು, ಮಾಜಿ ಸಚಿವ ಎ.ಬಿ.ಪಾಟೀಲ, ಸುರೇಶ ತಳವಾರ, ರಮೇಶ ತಳವಾರ ಇತರರಿದ್ದರು.
ಹುಕ್ಕೇರಿ:ಬುದ್ದ, ಬಸವ, ಡಾ. ಅಂಬೇಡ್ಕರರ ತತ್ವಗಳನ್ನು ಅನುಸರಿಸಿಕೊಂಡು ಉದ್ದಿಮೆ ಸ್ಥಾಪಿಸಿ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಿದ ಜಿ.ಟಿ ಉದ್ಯೋಗ ಸಮೂಹ ಸಂಸ್ಥೆ ಸಂಸ್ಥಾಪಕ ಸುರೇಶ ತಳವಾರ ಅವರ ಕಾರ್ಯ ಶ್ಲಾಘನೀಯವೆಂದು ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದರು.
ತಾಲ್ಲೂಕಿನ ಸುಲ್ತಾನಪೂರ ಗ್ರಾಮದಲ್ಲಿ ಶನಿವಾರದಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ರಾಷ್ಟ್ರೀಯ ಜಾನುವಾರು ಮಿಷನ್ (ಎನ್.ಎಲ್.ಎಂ.) ಯೋಜನೆಯಡಿ ಜಿ.ಟಿ. ಉದ್ಯೋಗ ಸಮೂಹ ಸಂಸ್ಥೆಯ ವತಿಯಿಂದ ನೂತನವಾಗಿ ಸ್ಥಾಪಿಸಿದ ಜಿ.ಟಿ. ಮೇಕೆ ಸಾಕಾಣಿಕೆ ಘಟಕದ ಸಮಾರಂಭದಲ್ಲಿ ಮಾತನಾಡಿದರು.
ಯುವ ಜನಾಂಗ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಬಳಸಿಕೊಂಡು ಉದ್ದಿಮೆದಾರರಾಗಬೇಕು. ಅ ನಿಟ್ಟಿನಲ್ಲಿ ಜಿಟಿ ಉದ್ಯೋಗ ಸಮೂಹ ಸಂಸ್ಥೆ ಯುವಕರಿಗೆ ಮಾದರಿಯಾಗಿದೆ ಎಂದರು.

ಶಾಸಕ ನಿಖಿಲ ಕತ್ತಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಉದ್ಯೋಗದಲ್ಲಿ ಆಧುನಿಕತೆ ಅಳವಡಿಸಿಕೊಂಡು ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದು ಅಂತಹ ಕಾರ್ಯಗಳನ್ನು ಮುಖಂಡ ಸುರೇಶ ತಳವಾರ ಮಾಡಿ ಯಶಸ್ವಿಯಾಗಿದ್ದಾರೆ. ಅವರನ್ನು ಮಾದರಿಯಾಗಿಟ್ಟುಕೊಂಡು ಯುವ ಜನಾಂಗ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಬೇಕು. ಆ ಕಾರ್ಯಕ್ಕೆ ಇವರ ಸಲಹೆ ಸೂಚನೆ ಪಡೆದುಕೊಳ್ಳುವಂತೆ ತಿಳಿಸಿದರು.

ಮಾಜಿ ಸಚಿವ ಎ.ಬಿ ಪಾಟೀಲ, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯರನಾಳ ಬ್ರಹ್ಮಾನಂದ ಸ್ವಾಮೀಜಿ, ಹುಣಸಿಕೊಳ್ಳಮಠದ ಸಿದ್ದಬಸವ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀಗಳು ಮತ್ತು ಸುಲ್ತಾನಪುರದ ಶಿವಾನಂದ ಸ್ವಾಮೀಜಿ ಮತ್ತಿತರರು ಮಾತನಾಡಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಸತ್ಯಪ್ಪಾ ನಾಯಕ, ಶಿವನಗೌಡ ಮದವಾಲ, ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಆರ್.ರುದ್ರಯ್ಯಾ, ಸುಭಾಷ ನಾಟೇಕರ, ಮಲ್ಲೇಶ ಚೌಗಲಾ, ಬಸವರಾಜ ಪಾಟೀಲ, ಭೀಮಣ್ಣಾ ರಾಮಗೋನಟ್ಟಿ, ಶ್ರೀಶೈಲ ಮಠಪತಿ, ಸಿದ್ದಪ್ಪ ತಳವಾರ, ಬಸವರಾಜ ತಳವಾರ, ಡಿ. ಶ್ರೀಕಾಂತ ಮತ್ತಿತರರಿದ್ದರು. ಸಂಸ್ಥೆಯ ಅಧ್ಯಕ್ಷ ಸುರೇಶ ತಳವಾರ ಸ್ವಾಗತಿಸಿದರು. ರಾಜು ತಳವಾರ ನಿರೂಪಿಸಿ ವಂದಿಸಿದರು.





