ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಶಾಸಕ ನಿಖಿಲ ಕತ್ತಿ ಅವರನ್ನು ಸನ್ಮಾನಿಸಿದರು. ಕಾಡಪ್ಪಾ ಮಗದುಮ್ಮ, ಅಶೋಕ ಪಾಟೀಲ, ಆನಂದ ಲಕ್ಕುಂಡಿ, ದಾದಾ ಇನಾಮದಾರ ಇತರರಿದ್ದರು.
ಹುಕ್ಕೇರಿ :ಗ್ರಾಮಗಳ ವಿಕಾಸ ಮತ್ತು ಅಭಿವೃದ್ಧಿಗೆ ಗ್ರಾಮಸ್ಥರ ತೆರಿಗೆ ಅವಶ್ಯಕ. ಕಾರಣ ಗ್ರಾಮಸ್ಥರು ಮನೆ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಪಾವತಿಸುವ ಮೂಲಕ ಸಹಕರಿಸಬೇಕೆಂದು ಶಾಸಕ ನಿಖಿಲ ಕತ್ತಿ ತಿಳಿಸಿದರು.
ಮಂಗಳವಾರದ0ದು ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮೆಗಾ ತೆರಿಗೆ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮ ಪಂಚಾಯತಿಗೆ ಮೂಲಭೂತ ಸೌಲಭ್ಯ ಒದಗಿಸಲು ಮತ್ತು ಗ್ರಾಮಾಭಿವೃದ್ಧಿಗೆ ಸ್ಥಳೀಯ ತೆರಿಗೆ ಬಳಸಿಕೊಳ್ಳಲು ಅವಕಾಶ ಇದ್ದು ಅದಕ್ಕಾಗಿ ತೆರಿಗೆ ವಸೂಲಾತಿಗೆ ಗ್ರಾಮಸ್ಥರ ಸಹಕಾರ ಅವಶ್ಯವೆಂದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದು ವಾರದಿಂದ ಹುಕ್ಕೇರಿ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಅವುಗಳನ್ನು ಪರಿಹರಿಸಲು ಸಂಬAಧಿತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೆಲವು ಗ್ರಾಮಗಳಲ್ಲಿ ಅವಶ್ಯಕತೆ ಇರುವ ಮೂಲಭೂತ ಸಮಸ್ಯೆಗಳನ್ನು ತ್ವರಿತವಾಗಿ ಈಡೇರಿಸಲು ಹೇಳಿದ್ದೇನೆ.
ಪ್ರಮುಖವಾಗಿ ಬಸ್ತವಾಡ ಗ್ರಾಮದಿಂದ ಹುಕ್ಕೇರಿ ಸಂಪರ್ಕ ರಸ್ತೆ ಸುಧಾರಣೆ, ನಿರಂತರ ಜ್ಯೋತಿಗಾಗಿ ಹೆಚ್ಚುವರಿ ಟಿ.ಸಿ ಅಳವಡಿಕೆಯ ಮನವಿ ಈಡೇರಿಸುವುದು. ಎಲಿಮುನ್ನೋಳಿ ಗ್ರಾಮದ ರಸ್ತೆ ಸುಧಾರಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಳ್ಳದ ಬಳಿ ಸೇತುವೆ ಎತ್ತರಗೊಳಿಸುವುದು, ಬೆಳವಿ ಗ್ರಾಮದಲ್ಲಿ ೬೪ ಲಕ್ಷ ರೂ ವೆಚ್ಚದಲ್ಲಿ ಆಯುಷ್ಯ ಆರೋಗ್ಯ ಆಸ್ಪತ್ರೆ ನಿರ್ಮಾಣ, ಎಸ್.ಸಿ ಸಮುದಾಯಕ್ಕೆ ಪ್ರತ್ಯೇಕ ಎರಡು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುಮೋದನೆ, ಕಡಹಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ರಸ್ತೆ ಹಾಗೂ ಚರಂಡಿ ನಿರ್ಮಾಣ, ದೇವಸ್ಥಾನಗಳಿಗೆ ಆವರಣ ಗೋಡೆ ಸೇರಿದಂತೆ ಹಲವಾರು ಕಾರ್ಯಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.
ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಸತ್ತೆಪ್ಪಾ ನಾಯಿಕ, ಕೆಂಪಣ್ಣಾ ವಾಸೇದಾರ, ಶಿವನಗೌಡ ಮದವಾಲ, ಮುಖಂಡರಾದ ಮಹಾನಿಂಗ ಸನದಿ, ತಮ್ಮಣ್ಣಾ ಕರಗುಪ್ಪಿ, ಈರಣ್ಣಾ ಹೂಗಾರ, ಆನಂದ ಲಕ್ಕುಂಡಿ, ಬಿ.ಕೆಮಗೆನ್ನವರ, ದಯಾನಂದ ವಂಟಮೂರಿ, ಅಶೋಕ ಪಾಟೀಲ, ನೇಮಣ್ಣಾ ಮಗದುಮ್ಮ, ಭುವನೇಶ ಪಾಟೀಲ, ಶ್ರೀಕಾಂತ ಖೇಮಲಾಪುರೆ, ಗುರುರಾಜ ಕುಲಕರ್ಣಿ, ಅಶೋಕ ಚೌಗಲಾ, ಮನೋಹರ ಚೌಗಲಾ, ಮಹಾವೀರ ಹಲಕರ್ಣಿ, ಎನ್.ಬಿ. ತೇರದಾಳ ಸೇರಿದಂತೆ ಆಯಾ ಗ್ರಾಮಗಳ ಮುಖಂಡರು ಮತ್ತು ಅಧಿಕಾರಿಗಳಿದ್ದರು.





