ರಮೇಶ ಕತ್ತಿ ,ಮಾಜಿ ಸಂಸದರು , ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಹುಕ್ಕೇರಿ: 18 ವರ್ಷಗಳಿಂದ ಐ.ಪಿ.ಎಲ್ ಟ್ರೋಫಿಗೆ ಪರಿತಪಿಸುತ್ತಿರುವ ಕನ್ನಡಿಗರ ಮನಸ್ಸು ಮತ್ತು ಬಯಕೆ ಈ ಬಾರಿ ನೆರವೇರುತ್ತದೆ ಎಂಬ ಆಶಾಭಾವ ನನ್ನದು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಮಂಗಳವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಆರ್.ಸಿ.ಬಿ ಗೆಲುವಿಗೆ ತಮ್ಮ ಕುಟುಂಬದಿಂದ ಹಾರೈಸಿ ತಯಾರಿಸಿದ ಬ್ಯಾನರ್ ವೀಕ್ಷಿಸಿ ಮಾತನಾಡಿದರು. ರಾಜ್ಯ ಮತ್ತು ದೇಶಾದ್ಯಂತ ಆರ್.ಸಿ.ಬಿ ಗೆಲುವಿಗೆ ವಿಶೇಷ ಪೂಜೆ, ಹರಕೆಗಳ ಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನು ನೋಡಿದಾಗ ನನಗೆ ಈ ಗೆಲುವು ಅತ್ಯವಶ್ಯ ಎನಿಸಿದೆ. ಭಗವಂತ ಜನರ ಬಯಕೆ ಈಡೇರಿಸುವನೆಂಬ ಭರವಸೆ ವ್ಯಕ್ತಪಡಿಸಿದರು.
ಅಹಮದಾಬಾದನಲ್ಲಿ ನಡೆಯುತ್ತಿರುವ ಐ.ಪಿ.ಎಲ್ ಟ್ರೋಫಿ ಪೈನಲ್ ಪಂದ್ಯ ವೀಕ್ಷಿಸಲು ರಾಜರಾಜೇಶ್ವರಿ ಟೃಸ್ಟನಿಂದ ಬೆಲ್ಲದ ಬಾಗೇವಾಡಿಯ ರಾಹುಲ ಕ್ರೀಡಾಂಗಣ, ಹುಕ್ಕೇರಿ ಹಳೇ ಬಸ್ ನಿಲ್ದಾಣ, ಹಳ್ಳದಕೇರಿಯ ಅಡವಿಸಿದ್ದೇಶ್ವರ ಮಠದ ಬಳಿ ಹಾಗೂ ಸಂಕೇಶ್ವರ ಪಟ್ಟಣದ ಗಾಂಧಿ ಚೌಕ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕ್ ಹತ್ತಿರ ಒಟ್ಟು ಐದು ಬೃಹತ್ ಪರದೆ ಅಳವಡಿಸಲಾಗಿದೆ ಎಂದರು. ಕಾರಣ ಕ್ರಿಕೇಟ್ ಅಭಿಮಾನಿಗಳು ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಕ್ರೀಡೆಗಳನ್ನು ಸ್ಫರ್ಧಾತ್ಮಕ ಮನೋಭಾವದೊಂದಿಗೆ ಶಾಂತಿಯುತವಾಗಿ ವೀಕ್ಷಿಸಬೇಕೆಂದು ವಿನಂತಿಸಿದರು

ಶಾಸಕ ನಿಖಿಲ ಕತ್ತಿ ಅವರು ಮಾತನಾಡಿ ಗೆದ್ದು ಬಾ ಆರ್. ಸಿ. ಬಿ ಎಂದು ಶುಭ ಹಾರೈಸಿದರು.





