ತಾಲೂಕಿನ ಹಿಡಲ್ ಡ್ಯಾಮಿನ ಸಂಗಮ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಭಾವಚಿತ್ರ.
ತಾಲೂಕಿನ ಹಿಡಲ್ ಡ್ಯಾಮಿನ ಸಂಗಮ ಸಹಕಾರಿ ಸಕ್ಕರೆ ಕಾರಖಾನೆ ಪ್ರಸಕ್ತ ಹಂಗಾಮಿನಲ್ಲಿ 206399.356 ಮೆ.ಟನ್ ಕಬ್ಬು ನುರಿಸಿ ಪ್ರತಿಶತ 11.82 ಇಳುವರಿಯಲ್ಲಿ 2 ಲಕ್ಷ 44 ಸಾವಿರ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ ಎಂದು ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.ಅವರು ಶನಿವಾರ ಕಾರಖಾನೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜನೇವರಿ ತಿಂಗಳ ದಿ.1ರಿಂದ 15ರವರೆಗೆ ಪೂರೈಸಿದ ಕಬ್ಬಿನ ಬಿಲ್ಲ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಕಬ್ಬು ಪೂರೈಸಿದ ಉಳಿದ ರೈತರ ಮತ್ತು ಸಾಗಾಣಿಕೆದಾರರ ಬಿಲ್ಲುಗಳನ್ನು ಆದಷ್ಟು ಬೇಗನೆ ಪಾವತಿಸುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಕಾರಖಾನೆಯ ಸಿಬ್ಬಂದಿ ಮತ್ತು ಕಾರ್ಮಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ರೂ 2ಲಕ್ಷ ವೈದ್ಯಕೀಯ ವಿಮೆ, ಕಾರ್ಮಿಕರು ಸಹಜ ಮರಣ ಹೊಂದಿದಲ್ಲಿ 10 ಲಕ್ಷ ರೂ ಜೀವವಿಮೆ, ಹಾಗೂ ಅಪಘಾತದಲ್ಲಿ ಮರಣಿಸಿದರೆ 10 ಲಕ್ಷ ಅಪಘಾತ ವಿಮೆ ಮತ್ತು ಜೀವ ವಿಮೆ ಸೇರಿ 20 ಲಕ್ಷ ರೂ ವಿಮಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿದ್ದರು.





