ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಪಕ್ಷಾತೀತವಾಗಿ ಸಾಲ ವಿತರಿಸಿ: ರಮೇಶ ಕತ್ತಿ

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮದಿಹಳ್ಳಿ ಪಿಕೆಪಿಎಸ್ ಆಡಳಿತ ಮಂಡಳಿಯವರು ರಮೇಶ ಕತ್ತಿ ಅವರನ್ನು ಸನ್ಮಾನಿಸಿದರು. ಗುರುಸಿದ್ದ ಬಾಗಿ, ವಿಠ್ಠಲ ವಾಳಕಿ, ನಿಂಗಪ್ಪಾ ಬಾಗಿ, ಚಿದಾನಂದ ಬಾಗಿ, ಮಲ್ಲಪ್ಪಾ ಮಾನಗಾಂವಿ ಮತ್ತಿತರರಿದ್ದರು.

ಹುಕ್ಕೇರಿ : ರೈತರ ಆರ್ಥಿಕ ದೇಗುಲವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರಾಜಕೀಯ ಬೆರಸಬೇಡಿ. ಗ್ರಾಮದ ಎಲ್ಲ ರೈತರಿಗೆ ಸಂಘದಿ0ದ ದೊರಕುವ ಸಾಲ ಸೌಲಭ್ಯಗಳನ್ನು ಪಕ್ಷಾತೀತವಾಗಿ ನೀಡಬೇಕೆಂದು ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.

ಶನಿವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯ ಸ್ವಗೃಹದಲ್ಲಿ ಮದಿಹಳ್ಳಿ ಗ್ರಾಮದ ಪಿಕೆಪಿಎಸ್ ನೂತನ ಆಡಳಿತ ಮಂಡಳಿಯವರಿAದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ನೀರಾವರಿ ಸೌಲಭ್ಯ ಹೊಂದಿದ ಈ ಗ್ರಾಮಕ್ಕೆ ಪ್ರತ್ಯೇಕ ಸಂಘ ರಚಿಸಲು ತಿಳಿಸಿದ್ದ ನಾನು ಅದರ ಪ್ರಗತಿಗಾಗಿ ಯಾವಾಗಲೂ ಸಹಕರಿಸುತ್ತೇನೆ ಎಂದರು. ಶೂನ್ಯ ಬಡ್ಡಿದರದ ಸಾಲಕ್ಕಾಗಿ ಮಾತ್ರ ರೈತರನ್ನು ಪರಿಗಣಿಸಬೇಡಿ, ಹೈನುಗಾರಿಕೆ, ಟ್ರ್ಯಾಕ್ಟರ್, ಪೈಪಲೈನ್ ಸೇರಿದಂತೆ ಮಧ್ಯಮಾವಧಿ ಸಾಲ ಪಡೆಯಲು ತಿಳಿಸುವಂತೆ ಹೇಳಿದರು. ಸಹಕಾರಿ ಸಂಘಗಳಿ0ದ ದೊರಕುವ ಸಾಲ ಸೌಲಭ್ಯವನ್ನು ಸದುದ್ದೇಶಕ್ಕೆ ಬಳಸಿಕೊಂಡು ರೈತ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಪಿಕೆಪಿಎಸ್ ಅಧ್ಯಕ್ಷ ಗುರುಸಿದ್ದ ಬಾಗಿ, ಉಪಾಧ್ಯಕ್ಷೆ ವಂದನಾ ಬಾಗಿ, ನಿರ್ದೇಶಕರಾದ ವಿಠ್ಠಲ ವಾಳಕಿ, ಕಾಡಪ್ಪಾ ಕುರಬೇಟ, ಗೋಪಾಲ ಬಾಗಿ, ತಾನಾಜಿ ಹೊಸೂರಿ, ರಾಮಚಂದ್ರ ಬನನ್ನವರ, ಫಾತಿಮಾ ಬಳಿಗಾರ, ಸಿದ್ರಾಮೇಶ್ವರ ಜಿರಲಿ, ನಾಮದೇವ ಪಾಂಡ್ರೆ, ಮಲ್ಲಿಕಾರ್ಜುನ ಕುರಬೇಟ, ಮುಖ್ಯ ಕಾರ್ಯ ನಿರ್ವಾಹಕ ಮಲ್ಲಪ್ಪಾ ಮಾನಗಾಂವಿ ಹಾಗೂ ಗ್ರಾಮದ ಪ್ರಮುಖರಾದ ನಿಂಗಪ್ಪ ಬಾಗಿ, ಚಿದಾನಂದ ಭಾಗಿ, ಸದ್ದಾಂ ಬಳಿಗಾರ, ಸಿದ್ಲಿಂಗ ಸಾಂಬಾರಿ, ಶಿವಾನಂದ ಕಾಂಬಳೆ. ಪ್ರವೀಣ ಬಾಗಿ ಮತ್ತು ಮಾರುತಿ ಬೆನ್ನಾಡಿ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept