ಸ್ಥಳೀಯ ತಾ.ಪಂ ಕಾರ್ಯಾಲಯದ ಬಳಿ ಸುದ್ದಿಗಾರರೊಂದಿಗೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ರಿಷಬ್ ಪಾಟೀಲ, ಅರುಣ ಹುದ್ದಾರ, ಲತೀಬ್ ಪೀರಜಾದೆ, ಬಸವೇಶ ಪಟ್ಟಣಶೆಟ್ಟಿ ಇತರರಿದ್ದರು.
ಹುಕ್ಕೇರಿ : ಸಹಕಾರ ಮತ್ತು ಪಕ್ಷ ಆಧಾರಿತ ಚುನಾವಣೆ ಬೇರೆ ಬೇರೆ ಆಗಿರುತ್ತವೆ. ಪಕ್ಷ ಆಧಾರಿತ ಚುನಾವಣೆಯಲ್ಲಿ ನಮ್ಮ ಪಕ್ಷದವರ ಜತೆಗೆ ಕೂಡಿಕೊಂಡು ನಾವು ಚುನಾವಣೆ ಮಾಡಬೇಕಾಗುತ್ತದೆ. ಹೊಂದಾಣಿಕೆ ಪ್ರಶ್ನೆ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ಸ್ಥಳೀಯ ತಾ.ಪಂ ಸಭಾಭವನದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಗೆ ಆಗಮಿಸಿದಾಗ ಸುದ್ದಿಗಾರರ ಸ್ಥಳೀಯಾಡಳಿತದ ಚುನಾವಣೆಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಅವರ ಜೊತೆಗೆ ಸೇರಿಕೊಂಡು ಚುನಾವಣೆ ಮಾಡುವಿರಾ ಪ್ರಶ್ನೆಗೆ ಉತ್ತರಿಸಿದರು. ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ ಕತ್ತಿ ಮತ್ತು ಎ.ಬಿ.ಪಾಟೀಲ ಅವರ ವಿರುದ್ಧ ಸತೀಶ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ ಜೊಲ್ಲೆ ಒಂದಾಗಿ ಚುನಾವಣೆ ನಡೆಸಿದ್ದರು. ಇದೀಗ ಬರುವ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರು ಸಹಕಾರ ನೀಡಿದರೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟ ಇರುತ್ತದೆ ಎಂದು ಎ.ಬಿ.ಪಾಟೀಲರು ಹೇಳಿಕೆ ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಹಕಾರ ಕ್ಷೇತ್ರದಲ್ಲಿ ಪಕ್ಷದ ಪ್ರಶ್ನೆ ಬರುವುದಿಲ್ಲವೆಂದರು.
ನಿರುದ್ಯೋಗ ಪ್ರಶ್ನೆ ಮೊದಲಿನಿಂದ ಇದ್ದು ಇದಕ್ಕೆ ಈ ಪಕ್ಷ, ಆ ಪಕ್ಷಗಳ ಹೊಣೆಗಾರಿಕೆ ಎಂದು ಹೇಳುವುದು ಸಮಂಜಸವಲ್ಲವೆAದರು. ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಮತ್ತು ಮಾಜಿ ಸಚಿವ ಶಶಿಕಾಂತ ನಾಯಿಕ ಅವರು ಬೇಸಿಗೆಯಲ್ಲಿ ಹಿರಣ್ಯಕೇಶಿ ನದಿಗೆ ಮಹಾರಾಷ್ಟç ರಾಜ್ಯದ ಕಿತ್ತವಾಟ ಜಲಾಶಯದಿಂದ ನೀರು ಬಿಡಿಸಲು ಸಚಿವರಿಗೆ ನಿವೇದಿಸಿಕೊಂಡರು ಇದಕ್ಕುತ್ತರಿಸಿದ ಸಚಿವರು ನದಿಗೆ ನೀರು ಬಿಡಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ನಂತರ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ ಸಂಬAಧಿಸಿದ ಅಧಿಕಾರಿಗಳಿಗೆ ಪರಿಹರಿಸಲು ಆದೇಶಿಸಿದರು.
ತಾ.ಪಂ ಇ.ಒ ಟಿ.ಆರ್.ಮಲ್ಲಾಡದ, ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಹೀರಾ ಶುರ‍್ಸ್ ಉಪಾಧ್ಯಕ್ಷ ಅಶೊಕ ಪಟ್ಟಣಶೆಟ್ಟಿ, ಮುಖಂಡರಾದ ಇಲಿಯಾಸಬೇಗ ಇನಾಮದಾರ, ರಿಷಬ್ ಪಾಟೀಲ, ಲತೀಬ್ ಪೀರಜಾದೆ, ರಾಜು ರೇವಣ್ಣವರ, ಅರುಣ ಹುದ್ದಾರ, ಮಲ್ಲಿಕಾರ್ಜುನ ರಾಶಿಂಗೆ, ಅಪ್ಪಾಸಾಹೇಬ ಸಾರಾಪೂರ, ಸಂಜೀವ ನಾಯಿಕ, ಇಮ್ರಾನ್ ಮೋಮಿನ, ಭೀಮಗೌಡ ಅಮ್ಮಣಗಿ, ಕೆಂಪಣ್ಣ್ಣಾ ಶಿರಹಟ್ಟಿ. ಸುಜಾತಾ ಬೆಟಗಾರ ಮತ್ತಿತರರಿದ್ದರು.





