ಸ್ಥಳೀಯ ಪಿಕಾರ್ಡ ಬ್ಯಾಂಕಿನಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಅವರನ್ನು ಹುಕ್ಕೇರಿ ಘಟಕದಿಂದ ಸನ್ಮಾನಿಸಿದರು. ಶಾಸಕ ನಿಖಿಲ ಕತ್ತಿ, ಮಹಾವೀರ ನಿಲಜಗಿ, ಸತ್ತೆಪ್ಪಾ ನಾಯಿಕ, ಸತೀಶ ಅಪ್ಪಾಜಿಗೋಳ ಇತರರಿದ್ದರು.
ಹುಕ್ಕೇರಿ: ರಾಜ್ಯ ಸರಕಾರ ರೈತ ವಿರೋಧಿ ನೀತಿ ಖಂಡಿಸಿ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡ ಪ್ರತಿಭಟನೆ ಮತ್ತು ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕಿನಿಂದ 3 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆಂಸು ಶಾಸಕ ನಿಖಿಲ ಕತ್ತಿ ಹೇಳಿದರು.
ಅವರು ಶುಕ್ರವಾರದಂದು ಸ್ಥಳೀಯ ಪಿಕಾರ್ಡ ಬ್ಯಾಂಕ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮುಸುಕಿನ ಜೋಳ ಬೆಂಬಲ ಬೆಲೆ, ಕಬ್ಬಿಗೆ ಸರಕಾರದಿಂದ ಪ್ರೋತ್ಸಾಹ ಧನ ಹೆಚ್ಚಳ ಸೇರಿದಂತೆ ಹತ್ತು ಹಲವು ವಿಷಯಗಳಲ್ಲಿ ರಾಜ್ಯ ಸರಕಾರ ರೈತ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿದೆ.ಕಾರಣ ಬಿಜೆಪಿ ಪಕ್ಷ ಇದನ್ನು ಖಂಡಿಸಿ ಬೃಹತ್ ಪ್ರಮಾಣದಲ್ಲಿ ರೈತರು, ಜನರನ್ನು ಸೇರಿಸಿಕೊಂಡು ಪ್ರತಿಭಟಿಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಅವರು ಮಾತನಾಡಿ ರಾಜ್ಯದ ಜನರಲ್ಲಿ ಈಗಿನ ರಾಜ್ಯ ಸರಕಾರ ಯಾವಾಗ ತೊಲಗುತ್ತದೆ ಎಂಬ ಭಾವ ಮೂಡಿದೆ. ಮಂತ್ರಿ ಮತ್ತು ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಜನಪರ ಕಾರ್ಯಗಳನ್ನು ಮರೆತಿದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.ಅದಕ್ಕಾಗಿ ಜನಪರ ಕಾರ್ಯ ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸಲು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪಕ್ಷದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ, ರೈತ ಮೋರ್ಚಾ ಅಧ್ಯಕ್ಷ ರಾಜು ಹರಗನ್ನವರ ಮಾತನಾಡಿ ರಾಜ್ಯ ಸರಕಾರದ ವೈಫಲ್ಯಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಅವರನ್ನು ಪಕ್ಷದ ಹುಕ್ಕೇರಿ ಘಟಕದಿಂದ ಸನ್ಮಾನಿಸಿದರು.

ಬೆಮುಲ್ ನಿರ್ದೇಶಕ ರಾಯಪ್ಪಾ ಡೂಗ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಕಲಗೌಡ ಪಾಟೀಲ, ಸತ್ತೆಪ್ಪಾ ನಾಯಿಕ, ಶಿವಾನಂದ ಮುಡಸಿ, ಕೆಂಪಣ್ಣಾ ವಾಸೇದಾರ, ಮಹಾದೇವ ಕ್ಷೀರಸಾಗರ, ಮುಖಂಡರಾದ ಮಹಾನಿಂಗ ಸನದಿ, ಸುನೀಲ ಪರ್ವತರಾವ, ಗುರು ಕುಲಕರ್ಣಿ, ಸುನೀಲ ನೇರ್ಲಿ, ಶೀತಲ ಬ್ಯಾಳಿ, ಎ.ಕೆ.ಪಾಟೀಲ, ಪ್ರಶಾಂತ ಪಾಟೀಲ, ಆದರ್ಶ ಅಂಕಲಗಿ, ಲಿಂಗರಾಜ ನಾಯಕ, ರೋಹನ ನೇಸರಿ, ರವಿ ಪರಕನಟ್ಟಿ, ರಾಜು ಮುನ್ನೋಳಿ, ಸುರೇಶ ತೇರಣಿ, ದಯಾನಂದ ಅಮ್ಮಣಗಿ, ಶರ್ಮಿಳಾ ಬಡಮಲ್ಲನವರ, ಸವಿತಾ ಏಣಗಿಮಠ, ಸಂಗೀತಾ ಮಾನಗಾಂವಿ, ಮಂಜುಳಾ ವಾಲಿ, ತ್ರಿವೇಣಿ ಕಾಂಬಳೆ, ಪುಷ್ಪಾ ಹೊಸಮನಿ, ಜ್ಯೋತಿ ವಿಭೂತಿಮಠ ಮತ್ತಿತರರಿದ್ದರು. ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ ಸ್ವಾಗತಿಸಿದರು, ಗೋಪಾಲ ಚನಗೌಡರ ನಿರೂಪಿಸಿ, ವಂದಿಸಿದರು.





