ಪ್ರತಿಷ್ಠಿತ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾವೀರ ನಿಲಜಗಿ ಅವರ ಭಾವಚಿತ್ರ.
ಹುಕ್ಕೇರಿ : ದಕ್ಷಿಣ ಭಾರತ ಜೈನ ಸಭೆ ಅವರಿಂದ ಸ್ಥಳೀಯ ಪ್ರತಿಷ್ಠಿತ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿಯು ದಕ್ಷಿಣ ಭಾರತ ಜೈನ ಸಭೆಯಿಂದ ಶ್ರೀ ಅರಿಹಂತ ಕ್ರೆಡಿಟ್ ಸೌಹಾರ್ದ ಸಹ ಆದರ್ಶ ಸಂಸ್ಥೆ ಪುರಸ್ಕಾರಕ್ಕೆ ಭಾಜನವಾಗಿದೆ.
ಗುರುವಾರದಂದು ಸಹಕಾರಿಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರಿ ಅಧ್ಯಕ್ಷ ಮಹಾವೀರ ನಿಲಜಗಿ ಅವರು ರಾಯಬಾಗ ತಾಲೂಕಿನ ಹಾರುಗೇರಿಯ ಆಧಿನಾಥ ಸಮುದಾಯ ಭವನದಲ್ಲಿ ಇದೇ ತಿಂಗಳು ಸೋಮವಾರ ದಿ. 21ರಂದು ದಕ್ಷಿಣ ಭಾರತ ಜೈನ ಸಭೆಯ 103ನೇ ತ್ರೈವಾರ್ಷಿಕ ಅಧಿವೇಶನದಲ್ಲಿ ರಾಜಕೀಯ ಗಣ್ಯ ಮಾನ್ಯರಿಂದ ವಿವಿಧ ಸಂಘ ಸಂಸ್ಥೆಗಳಿಗೆ ದಕ್ಷಿಣ ಭಾರತ ಜೈನ ಪುರಸ್ಕಾರ ಸನ್ 2025ರ ಪ್ರಶಸ್ತಿ ಪ್ರಧಾನಿಸಲಿದ್ದಾರೆಂದರು. ಈ ಪ್ರಶಸ್ತಿಯು ನಮ್ಮ ಸಂಸ್ಥೆಗೆ ದೊರಕಿದ್ದು ಅತೀವ ಸಂತಸ ತಂದಿದೆ ಎಂದರು.
ಸಹಕಾರಿ ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಬಾಹುಬಲಿ ಸೊಲ್ಲಾಪೂರೆ, ಅಶೋಕ ಪಾಟೀಲ, ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ, ಸುಕುಮಾರ ಖತಗಲ್ಲಿ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಸಂತೋಷಸಿಂಗ ರಜಪೂತ ಮತ್ತಿತರರಿದ್ದರು.





