ಮಹಾವೀರ ಮಲ್ಟಿಪರ್ಪಜ್ ಸಹಕಾರಿ ಹುಬ್ಬಳ್ಳಿ, ಶಿವಮೊಗ್ಗಕ್ಕೂ ವಿಸ್ತರಿಸಿಕೊಂಡಿತು

ಸ್ಥಳೀಯ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿ ಸಂಘದ 25 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿದರು. ಅಶೋಕ ಪಾಟೀಲ, ಪ್ರಜ್ವಲ ನಿಲಜಗಿ, ರಾಜೇಂದ್ರ ಪಾಟೀಲ ಇತರರಿದ್ದರು.

: ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿ ಸಂಘದ ಸದಸ್ಯರ, ಗ್ರಾಹಕರ ಮತ್ತು ಠೇವಣಿದಾರರ ಪ್ರೀತಿ ವಿಶ್ವಾಸದ ಬಲದಿಂದ ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮಹಾನಗರಕ್ಕೂ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸುತ್ತಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದರು.

 ಸೋಮವಾರ ಸಂಜೆ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ ಸಂಘದ 25 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸನ್ 2025ರ ಮಾರ್ಚ ಅಂತ್ಯಕ್ಕೆ 3 ಕೋಟಿ 55 ಲಕ್ಷ ರೂ ನಿವ್ವಳ ಲಾಭ ಗಳಿಸಿದ ಸಹಕಾರಿ ಇದೀಗ ಮತ್ತಷ್ಟು ಶಾಖೆ ತೆರೆಯಲು ನಿರ್ಧರಿಸಿದೆ ಎಂದರು. ಶಿವಮೊಗ್ಗ ಜಿಲ್ಲೆ ಸಾಗರ, ಧಾರವಾಡ ಜಿಲ್ಲೆ ಹುಬ್ಬಳ್ಳಿ, ಚಿಕ್ಕೋಡಿ ತಾಲೂಕಿನ ಪಟ್ಟಣಕೋಡಿ, ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲೂ ಶಾಖೆ ತೆರೆಯಲು ಸಭೆಯ ಅನುಮೋದನೆ ಪಡೆದುಕೊಂಡರು.

     ಹುಕ್ಕೇರಿ ಪಟ್ಟಣದಲ್ಲಿ ಸೂಪರ ಮಾರ್ಕೆಟ್ ಕಟ್ಟಡ ಕಟ್ಟಲು ಸದಸ್ಯರ ಅನುಮತಿಸಬೇಕೆಂದು ವಿನಂತಿಸಿದರು. ೨೫ ವರ್ಷಗಳ ಹಿಂದೆ ಕಡಿಮೆ ಬಂಡವಾಳ ಮತ್ತು ಸದಸ್ಯರನ್ನು ಹೊಂದಿದ ಸಹಕಾರಿ ಇದೀಗ ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಗ್ರಾಹಕ ಮತ್ತು ಸಿಬ್ಬಂದಿಗಳ ಪ್ರಾಮಾಣಿಕತೆ ಕಾರಣವೆಂದರು.ಸಹಕಾರಿ ಬೆಳೆಯುವುದರ ಜತೆಗೆ ಇದರಡಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು ಅದು ಪ್ರಾಥಮಿಕ ಹಂತದಿಂದ ಡಿಗ್ರಿ ಕಾಲೇಜು ವರೆಗೆ ಬೆಳೆದಿದೆ ಎಂದು ಹೇಳಿದರು.

   ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಪಾಟೀಲ ಸಹಕಾರಿಯ ಹಿಂದಿನ ಮತ್ತು ನೂತನ ವರ್ಷದ ವಿಷಯಗಳನ್ನು ಮಂಡಿಸಿದರು.  ಸಹಕಾರಿ ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಬಾಹುಬಲಿ ಸೊಲ್ಲಾಪೂರೆ, ಅಶೋಕ ಪಾಟೀಲ, ಸಂಜಯ ನಿಲಜಗಿ, ಕಿರಣ ಸೊಲ್ಲಾಪೂರೆ, ಬಿ.ಬಿ.ಲಠ್ಠೆ, ಪ್ರಜ್ವಲ ನಿಲಜಗಿ, ಸುಕುಮಾರ ಖತಗಲ್ಲಿ, ಸುಕುಮಾರ ಪಾಟಿಲ, ಸಿದ್ದಪ್ಪಾ ಕಂಠಿಕಾರ, ಅನುಪಮಾ ಕಬಾಡಗೆ, ಅಶ್ವಿನಿ ಪಾಟೀಲ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಸಂತೋಷಸಿಂಗ ರಜಪೂತ, ಪ್ರಜ್ವಲ ನಿಲಜಗಿ ಸ್ವಾಗತಿಸಿದರು. ತವನಪ್ಪಾ ಹಿತ್ತಲಕೇರಿ ವಂದಿಸಿದರು

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept