ಅಕ್ರಮ ಸಾಗುವಳಿದಾರರಲ್ಲಿ ನಿಜ ಫಲಾನುಭವಿಗಳನ್ನು ಗುರುತಿಸಿ: ಶಾಸಕ ನಿಖಿಲ ಕತ್ತಿ

MLA Nikhil Katti addressing Bagar Hukum illegal cultivation in Hukkeri

ತಹಶೀಲ್ದಾರ ಕಾರ್ಯಾಲಯದಲ್ಲಿ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಶಾಸಕರು ಮತ್ತು ಸದಸ್ಯರನ್ನು ತಾಲೂಕಾಡಳಿತದಿಂದ ಸನ್ಮಾನಿಸಿದರು. ಮಂಜುಳಾ ನಾಯಕ, ಕೆಂಪಣ್ಣಾ ಶಿರಹಟ್ಟಿ, ಸಿಕಂದರ ಸನದಿ, ಭಾರತಿ ಬೆಣ್ಣಿ, ಸದಾನಂದ ಗುಡಿಕಡೆ, ದ್ರಾಕ್ಷಾಯಿಣಿ ಏಸಿ ಇತರರಿದ್ದರು.

ಹುಕ್ಕೇರಿ : ಬಗರ ಹುಕುಮ್ ಸಾಗುವಳಿಯ ನಿಜವಾದ ಬಡ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಸಮೀಕ್ಷೆ ನಡೆಸಬೇಕು.ಈ ಹಿಂದೆ ಸನ್ 2005ರಗಿಂತ ಮೊದಲು ಅರ್ಜಿ ಸಲ್ಲಿಸಿದವರು ಸಾಗುವಳಿ ಮಾಡುತ್ತಿರುವುದನ್ನು ಸ್ಥಾನಿಕ ಚೌಕಾಶಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಮಂಡಿಸಬೇಕೆಂದು ಸಮಿತಿ ಅಧ್ಯಕ್ಷರು, ಶಾಸಕ ನಿಖಿಲ ಕತ್ತಿ ಹೇಳಿದರು.


ಸೋಮವಾರದಂದು ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಬಗರ್ ಹುಕುಂ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಹಲವಾರು ವರ್ಷಗಳಿಂದ ಸರಕಾರಿ ಗೈರಾಣ, ಗವಠಾಣ ಮತ್ತು ಅರಣ್ಯ ಇಲಾಖೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಬಡವರು, ಹಿಂದುಳಿದವರಿಗೆ ಯಾವುದೇ ಹಕ್ಕು ಪತ್ರ ನೀಡಿಲ್ಲ.ಆಗಾಗ್ಗೆ ಈ ಕುರಿತು ತಂಟೆ ತಕರಾರು ಜರುಗುತ್ತಿವೆ.ಇದೀಗ ಸರಕಾರ ಅಕ್ರಮ ಸಕ್ರಮ ಯೋಜನೆಯಡಿ ಇಂತಹ ಫಲಾನುಭವಿಗಳಿಗೆ ಹಕು ಪತ್ರ ನೀಡಲು ನಿರ್ಧರಿಸಿದೆ. ಕಾರಣ ಜಮೀನು ಸಿಗುತ್ತದೆ ಎಂದು ನಕಲಿ ಫಲಾನುಭವಿಗಳು ಹುಟ್ಟಿಕೊಳ್ಳುತ್ತಿದ್ದಾರೆ.ಆದ್ದರಿಂದ ಬಗರ್ ಹುಕುಂ ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಾನಿಕ ಚೌಕಾಶಿಯನ್ನು ತಹಶೀಲ್ದಾರರು ತಮ್ಮ ಸಿಬ್ಬಂದಿಗಳೊAದಿಗೆ ಮಾಡಿ ವರದಿ ತಯಾರಿಸಬೇಕು ಎಂದು ಸೂಚಿಸಿದರು.

ಸಮಿತಿ ಸದಸ್ಯ ಕೆಂಪಣ್ಣಾ ಶಿರಹಟ್ಟಿ ಮತ್ತಿತರರು ಮಾತನಾಡಿ ಸ್ವಂತ ಜಮೀನು ಇದ್ದರೂ ಬಗರ್ ಹುಕುಂ ಸಾಗುವಳಿ ಜಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬಹಳಷ್ಟು ಬಡ ಮತ್ತು ಹಿಂದುಳಿದ ನಿಜ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದಾರೆ.ಆದರೆ ಅವುಗಳನ್ನು ಈ ಹಿಂದೆ ತಿರಸ್ಕರಿಸಿದ್ದಾರೆ.ಕಾರಣ ಆ ಅರ್ಜಿಗಳನ್ನು ಮತ್ತು ನೂತನ ತಂತ್ರಜ್ಞಾನದ ಮೂಲಕ ಸನ್ 2005ಕ್ಕಿಂತ ಮೊದಲಿನಿಂದ ಸಾಗುವಳಿ ಮಾಡುತ್ತಿರುವುದನ್ನು ಪರಿಶೀಲಸಲು ಸಾಧ್ಯವಿದೆ.ಆ ವಿಷಯವನ್ನು ಶಾಸಕರು, ತಹಸೀಲ್ದಾರರು ಗಮನಿಸುವಂತೆ ವಿನಂತಿಸಿದರು.
ಇದೇ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿ ಸಭೆಯ ನೂತನ ಸದಸ್ಯರನ್ನು, ಶಾಸಕರನ್ನು ತಾಲೂಕಾಡಳಿತದಿಂದ ಸನ್ಮಾನಿಸಿದರು.


ತಾ.ಪಂ ಇ.ಓ ಟಿ.ಆರ್.ಮಲ್ಲಾಡದ, ಬಗರ್ ಹುಕುಂ ಸಮಿತಿ ಸದಸ್ಯರಾದ ಕೆಂಪಣ್ಣಾ ಶಿರಹಟ್ಟಿ, ಸಿಕಂದರ ಸನದಿ, ಭಾರತಿ ಬೆಣ್ಣಿ, ಸದಾನಂದ ಗುಡಿಕಡೆ, ದ್ರಾಕ್ಷಾಯಿಣಿ ಏಸಿ, ಗ್ರೇಡ್ 2 ತಹಶೀಲ್ದಾರ ಪ್ರಕಾಶ ಕಲ್ಲೋಳಿ, ಶಿರಸ್ತೆದಾರ ಎನ್.ಆರ್.ಪಾಟೀಲ, ಭೂಮಾಪನ ಇಲಾಖೆಯ ತನ್ವಿನ್ ಢಾಂಗೆ ಮತ್ತಿತರರಿದ್ದರು. ತಹಸೀಲ್ದಾರ ಮಂಜುಳಾ ನಾಯಕ ಸ್ವಾಗತಿಸಿ, ವಂದಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept