ಕೆರೆ ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಶಾಸಕ ನಿಖಿಲ್ ಕತ್ತಿ ಶ್ರಮ – ಪೃಥ್ವಿ ಕತ್ತಿ

ತಾಲೂಕಿನ ಯಾದಗೂಡ ಗ್ರಾಮದ ಪ್ರಧಾನಿ ಹುಚ್ಚನ್ನವರ ಮತ್ತು ಬಹದ್ದೂರಿ ತೋಟದಲ್ಲಿ ಅಳವಡಿಸಿದ ಟಿ.ಸಿ (ವಿದ್ಯುತ್ ಪರಿವರ್ತಕಗಳು)ಗಳನ್ನು ಸತ್ತೆಪ್ಪಾ ನಾಯಿಕ ಉದ್ಘಾಟಿಸಿದರು. ಮಹಾವೀರ ನಿಲಜಗಿ, ಪೃಥ್ವಿ ಕತ್ತಿ, ಕೆಂಪಣ್ಣಾ ದೇಸಾಯಿ, ರಾಮಣ್ಣಾ ಜನಮಟ್ಟಿ ಇತರರಿದ್ದರು.

ಹುಕ್ಕೇರಿ: ಕೃಷಿಗೆ ಅವಶ್ಯಕವಾದ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಶಾಸಕ ನಿಖಿಲ ಕತ್ತಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದಾರೆ. ಅದರಿಂದ ಅಂತರ್ಜಲ ಹೆಚ್ಚಳವಾಗುತ್ತಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವ್ವಿ ಕತ್ತಿ ಹೇಳಿದರು.

ಅವರು ತಾಲೂಕಿನ ಯಾದಗೂಡ ಗ್ರಾಮದ ಪ್ರಧಾನಿ ಹುಚ್ಚನ್ನವರ ಮತ್ತು ಬಹದ್ದೂರಿ ತೋಟದಲ್ಲಿ ಅಳವಡಿಸಿದ ನೂತನ 2 ಆಯ್.ಪಿ.ಸೆಟ್‌ಗಳ ಟಿ.ಸಿ (ವಿದ್ಯುತ್ ಪರಿವರ್ತಕಗಳು)ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಯ್.ಪಿ.ಸೆಟ್‌ಗಳಗೆ ಅವಶ್ಯವಾದ ವಿದ್ಯುತ್ ಸರಬರಾಜು ಮಾಡಲು ಟಿಸಿಗಳನ್ನು ವಿದ್ಯುತ್ ಸಹಕಾರಿಗಳಿಂದ ಅಳವಡಿಸಲಾಗಿದೆ. ಅವುಗಳ ಶಕ್ತಿಗೆ ಅನುಗುಣವಾಗಿ ಬಳಕೆ ಮಾಡಬೇಕು. ಹೆಚ್ಚಿನ ವಿದ್ಯುತ್ ಬೇಕಾದಲ್ಲಿ ಸಂಘಕ್ಕೆ ತಿಳಿಸಿದಲ್ಲಿ ಹೆಚ್ಚುವರಿ ಟಿಸಿ ಅಳವಡಿಸುತ್ತೇವೆ ಎಂದರು.

ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ಹನಿ ನೀರಾವರಿ ಪದ್ಧತಿ ಅಳವಡಿಸಬೇಕು. ಇದರ ಜತೆಗೆ ಇತಿಮಿತಿಗೊಳಪಟ್ಟು ನೀರು ಮತ್ತು ವಿದ್ಯುತ್ ಬಳಸುವಂತೆ ರೈತರಿಗೆ ಸೂಚಿಸಿದರು. ಸಂಘದ ನಿರ್ದೇಶಕ ಸತ್ತೆಪ್ಪಾ ನಾಯಿಕ ಟಿಸಿಗಳನ್ನು ಉದ್ಘಾಟಿಸಿದರು.

ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ಸತ್ತೆಪ್ಪಾ ನಾಯಿಕ, ಕೆಂಪಣ್ಣಾ ದೇಸಾಯಿ, ರೆಸಿಡೆಂಟ್ ಇಂಜನೀಯರ ನೇಮಿನಾಥ ಖೆಮಲಾಪೂರೆ, ಮುಖಂಡರಾದ ಲಾಜಮ ನಾಯಿಕವಾಡಿ, ರಾಮಣ್ಣಾ ಜನಮಟ್ಟಿ, ಅಲಗೌಡ ಪಾಟೀಲ, ಮಲ್ಲಿಕಾರ್ಜುನ ಬೆನ್ನೋಳಿ ಮತ್ತು ರೈತರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept