ತಾಲೂಕಿನ ದಡ್ಡಿ ಹಾಗೂ ಇತರೆ 81 ಗ್ರಾಮಗಳು (121 ಜನವಸತಿಗಳ) ಹಾಗೂ ಬೆಳಗಾವಿ ಜಿಲ್ಲೆಯ 1 ಗ್ರಾಮ (1 ಜನವಸತಿ) ಗಳ ಜಲ ಜೀವನ್ ಮಿಷನ್ ಯೋಜನೆಯಡಿ ಡಿ.ಬಿ.ಓ.ಟಿ ಆಧಾರದ ಮೇಲೆ ಸಂಯುಕ್ತ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ನೀಲನಕ್ಷೆ.
205 ಕೋಟಿ ರೂ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಕಾಮಗಾರಿ ವರ್ಷಾಂತ್ಯಕ್ಕೆ ಪೂರ್ಣ
ಹುಕ್ಕೇರಿ: ತಾಲೂಕಿನ ದಡ್ಡಿ ಹಾಗೂ ಇತರೆ 81 ಗ್ರಾಮಗಳು (121 ಜನವಸತಿಗಳ) ಹಾಗೂ ಬೆಳಗಾವಿ ಜಿಲ್ಲೆಯ 1 ಗ್ರಾಮ (1 ಜನವಸತಿ) ಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಡಿ.ಬಿ.ಓ.ಟಿ ಆಧಾರದ ಮೇಲೆ ಸಂಯುಕ್ತ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಿಯಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಸ್ತುವಾರಿಯಲ್ಲಿ ಈಗಾಗಲೇ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕುರಿತು ವಿಶೇಷ ವರದಿ.
ಹುಕ್ಕೇರಿ ತಾಲೂಕಿನ 42 ಗ್ರಾಮ ಪಂಚಾಯತಿ ಮತ್ತು ಬೆಳಗಾವಿ ತಾಲೂಕಿನ 1 ಗ್ರಾಮದ ಒಂದು ಜನವಸತಿ ಪ್ರದೇಶದಲ್ಲಿ ಸನ್ 2055ರಲ್ಲಿ ಇರಬಹುದಾದ ಅಂದಾಜು 2,66,905 ಜನರಿಗೆ (ಸನ್ 2011 ರ ಗಣತಿ ಪ್ರಕಾರ 2,29,105 ಜನಸಂಖ್ಯೆ ಇದೆ) ದಿನಕ್ಕೆ 55ಲೀಟರ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಜಲ ಜೀವನ ಯೋಜನೆ ಮುಖಾಂತರ ಈ ಯೋಜನೆ ಕಾರ್ಯ ನಿರ್ವಹಿಸಲಿದೆ. ಜಿ.ಎಸ್.ಟಿ ಹೊರತು ಪಡಿಸಿ 205.20 ಕೋಟಿ ರೂ ವೆಚ್ಚದ ಈ ಯೋಜನೆಗೆ 0.230 ಟಿ.ಎಂ.ಸಿ ನೀರು ಬೇಕಾಗುತ್ತದೆ.
ಪ್ರಸ್ತಾವಿತ ವಲಯ ಸಮತೋಲನ 06 ಟ್ಯಾಂಕ್ ನಿರ್ಮಾಣಗೊಳ್ಳುವ ಯೋಜನೆಯಲ್ಲಿ ಮಧ್ಯಂತರದಲ್ಲಿ 2 ಪಂಪಸ್ಟೇಶನ್ 05 ನೆಲಮಟ್ಟದ ಜಲ ಸಂಗ್ರಾಲಯ ಕೇಂದ್ರಗಳನ್ನು ನಿರ್ಮಿಸಲಿದ್ದಾರೆ. ಘಟಪ್ರಭಾ ನದಿಯ ನಿರ್ವಾಹನಟ್ಟಿಯಿಂದ ಈ ಯೋಜನೆಗೆ ಪೈಪಲೈನ್ ಮೂಲಕ ಸಂಪೂರ್ಣ ಶುದ್ಧಿಕರಿಸಿದ ಕುಡಿಯುವ ನೀರು ಪ್ರತಿಯೊಬ್ಬ ಮನುಷ್ಯನಿಗೆ ಪ್ರತಿ ದಿನ 55 ಲೀಟರ್ ಒದಗಿಸಲಾಗುತ್ತದೆ.
ತಾಲೂಕಿನ ಹಿಡಕಲ್ ಜಲಾಶಯದ ಬಳಿ, ರಕ್ಷಿ, ನೇರಲಿ, ಅಮ್ಮಣಗಿ, ಶಿಪ್ಪೂರ, ದಡ್ಡಿ, ಯಮಕನಮರ್ಡಿ, ಕಣಗಲಾ, ಹುನ್ನೂರ ಆರ್.ಸಿ, ಹುಕ್ಕೇರಿ ಗ್ರಾಮೀಣ, ಕೋಣನಕೇರಿ, ಬಾಡವಾಡಿ ಮತ್ತು ಶಿಪ್ಪೂರ ಈ 13 ಗ್ರಾಮದ ಕೇಂದ್ರಗಳಲ್ಲಿ ನೀರು ವಿತರಣಾ ಕೇಂದ್ರದ ವಿನ್ಯಾಶಗೊಳಿಸಲಾಗಿದೆ.
ಈಗಾಗಲೇ ಪ್ರಾರಂಭವಾಗಿರುವ ಈ ಯೋಜನೆ ಜಲ ಜೀವನ ಮಿಷನ್ ಮೂಲಕ ಕಾರ್ಯ ನಿರ್ವಹಿಸಲಿರುವ ಕಾಮಗಾರಿ ಸನ್ 2025 ರ ಅಕ್ಟೋಬರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕರಾರು ಇದ್ದರೂ ತಾಂತ್ರಿಕ ತೊಂದರೆಯಾದಲ್ಲಿ 2026ರ ಜೂನ ತಿಂಗಳೊಳಗಾಗಿ ಜನರಿಗೆ ನೀರು ಒದಗಿಸುವ ಮೂಲಕ ಸಾಕಾರಗೊಳ್ಳಲಿದೆ.

ನಮ್ಮ ಅಣ್ಣ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ಹುಕ್ಕೇರಿ ಮತ್ತು ಸಂಕೇಶ್ವರ ಎರಡು ಪಟ್ಟಣಗಳಿಗೆ ನಿತ್ಯ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಸಾಕಾರಗೊಳಿಸಿದ ಬಳಿಕ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಕನಸು ಮತ್ತು ಮಾಡಿಕೊಂಡ ಸಂಕಲ್ಪವೇ ಈ ಯೋಜನೆಯಾಗಿದ್ದು ಸುಪುತ್ರ ಶಾಸಕ ನಿಖಿಲ ಕತ್ತಿ ಯೋಜನೆ ಸಾಕಾರಕ್ಕೆ ವೇಗ ನೀಡಿದ್ದು ಜನಮನ ಮೆಚ್ಚುಗೆಗೆ ಪಾತ್ರವಾಗಿದೆ: ರಮೇಶ ಕತ್ತಿ ಮಾಜಿ ಸಂಸದರು.
ನಮ್ಮ ತಂದೆ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರ ಅವಧಿಯಲ್ಲಿ ಪ್ರಾರಂಭಗೊಂಡ ಕ್ರಿಯಾಯೋಜನೆ ಸನ್ 2024ರ ಜೂನ್‌ನಲ್ಲಿ ರಾಜ್ಯ ಸರಕಾರ ಖಾಸಗಿ ಸಂಸ್ಥೆಯವರೊಂದಿಗೆ ಒಪ್ಪಂದ ಮಾಡಿಕೊಂಡಿತು. ಸನ್ 2025 ರ ಅಕ್ಟೋಬರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕರಾರು ಇದ್ದರೂ ತಾಂತ್ರಿಕ ತೊಂದರೆಯಾದಲ್ಲಿ 2026ರ ಮಳೆಗಾಲದ ಮುನ್ನ ಈ ಯೋಜನಯಡಿ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ದೊರಕಲಿದೆ. ನಿಖಿಲ ಉಮೇಶ ಕತ್ತಿ ಶಾಸಕರು ಹುಕ್ಕೇರಿ ಮತಕ್ಷೇತ್ರ.


ಬೇಸಿಗೆ ಸಮಯದಲ್ಲಿ ಕಣಗಲಾ ಮತ್ತು ಇತರ 11 ಬಹು ಗ್ರಾಮ (ಮಲ್ಟಿ ವಿಲೇಜ್) ಕುಡಿಯುವ ನೀರು ಸರಬರಾಜಿಗೆ ಸಮಸ್ಯೆಯಾದಾಗ ಈ ಯೋಜನೆಯಿಂದ ಇದಕ್ಕೂ ನೀರು ಸರಬರಾಜು ಮಾಡಲಾಗುತ್ತದೆ. ವಿನಾಯಕ ಪೂಜಾರ ಎ.ಇ.ಇ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ





