ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಆಯ್.ಸಂಬಾಳ ಅವರ ಅಭಿನಂದನಾ ಸಮಾರಂಭದ ನಿಮಿತ್ಯ ನಡೆದ ಸುದ್ದಿಗೋಷ್ಠಿಯ ಚಿತ್ರಣ. ಶ್ರೀಶೈಲಯ್ಯಾ ಸಂಬಾಳ, ಸದಾಶಿವಯ್ಯ ಸಂಬಾಳ, ಡಿ.ಎಸ್.ನಾಯಿಕ, ಸುಭಾಸ ನಾಯಿಕ, ಸುರೇಶ ಜಿನರಾಳಿ ಇತರರಿದ್ದರು.
ಹುಕ್ಕೇರಿ: ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸದಾಶಿವ ಈರಯ್ಯಾ ಸಂಬಾಳ ಅವರ ಸಾಧನೆಗಳ ಅಭಿನಂದನಾ ಗೃಂಥ “ಗುರುಬಸವ ಚೇತನ” ಲೋಕಾರ್ಪಣೆ ಮತ್ತು ಅವರ ಜನ್ಮ ದಿನದ ವಜ್ರ ಮಹೋತ್ಸವ ಸಮಾರಂಭವನ್ನು ಇದೇ ತಿಂಗಳು ಶನಿವಾರ ದಿ:22 ರಂದು ಆಯೋಜಿಸಲಾಗಿದೆ ಎಂದು ವಿದ್ಯುತ್ ಸಹಕಾರಿ ಸಂಘದ ವ್ಯವಸ್ಥಾಪಕ ದುರದುಂಡಿ ನಾಯಿಕ ಹೇಳಿದರು.
ಶುಕ್ರವಾರದಂದು ಸ್ಥಳೀಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಹಸ್ರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದ ಇವರು ನಿವೃತ್ತರಾದ ಬಳಿಕವೂ ಇಂದಿಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ಹೇಳಿ ಕೊಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಗಣ್ಯರಾದ ಸಿ.ಪಿ.ಪಾಟೀಲ, ಸುಭಾಸ ನಾಯಿಕ, ಸುರೇಶ ಜಿನರಾಳಿ, ಪಿ.ಕೆ.ಯರಗಟ್ಟಿ, ಎಸ್.ಜೆ.ಕುಪ್ಪಾನಟ್ಟಿ, ಎನ್.ಬಿ. ಗುಡಸಿ ಮಾತನಾಡಿ ಸಂಬಾಳ ಗುರುಗಳ ಶಿಕ್ಷಕ ವೃತ್ತಿಯ ಜತೆಗೆ 28 ವರ್ಷ ಶಾಲೆಯ ಎನ್.ಸಿ.ಸಿ ಅಧಿಕಾರಿಯಾಗಿ ಸಾವಿರಾರು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮತ್ತು ಶಿಸ್ತು ಬೆಳೆಸಿದ ಸಾಧನೆಗೆ ಅವರ ಕುಟುಂಬ ವರ್ಗದವರು ಮತ್ತು ವಿದ್ಯಾರ್ಥಿಗಳು, ಶಿಕ್ಷಕರು ಸಂಘಟಿತರಾಗಿ ಈ ಸಮಾರಂಭ ಆಯೋಜಿಸಲಾಗುತ್ತಿದೆ. ಇವರ ಬಳಿ ಕಲಿತ ಹಲವಾರು ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿ ಇದ್ದಾರೆ. ದೇಶದ ಪ್ರಗತಿಗೆ ಶಿಕ್ಷಕರ ಕೊಡುಗೆ ಅಪಾರ ಎಂಬುದಕ್ಕೆ ಇವರ ಶಿಷ್ಯ ಬಳಗವೇ ಸಾಕ್ಷಿಯಾಗಿದೆ. ಇವರ ಸಾಧನೆಗೆ ರಾಜ್ಯ ಮತ್ತು ರಾಷ್ಟçಮಟ್ಟದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ದೊರಕಿವೆ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಆಯ್ ಸಂಬಾಳ ಅವರು ಮಾತನಾಡಿ ನಾನು ಮತ್ತು ನನ್ನ ಹಿರಿಯ ಸೋದರ ಶ್ರೀಶೈಲಯ್ಯಾ ಸಂಬಾಳ ಅವರ ಶಿಕ್ಷಕ ವೃತ್ತಿಯ ಜತೆಗೆ ಸಮಾಜ ಸೇವೆ ಗುರುತಿಸಿ ಈ ಸಮಾರಂಭ ಆಯೋಜಿಸಿದ್ದು ಸಂತಸ ತಂದಿದೆ. ಸಮಾರಂಭದಲ್ಲಿ ಶಿಕ್ಷಕರ ಸಂಘಟನೆ ರೂವಾರಿಗಳು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸುದೀರ್ಘ 45 ವರ್ಷಗಳಿಂದ ಶಿಕ್ಷಕರ ಪ್ರತಿನಿಧಿಯಾಗಿ ವಿಧಾನ ಪರಿಷತ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಾ ದಾಖಲೆ ಬರೆದ ಅವರಿಗೆ ವಿಶೇಷ ಗೌರವ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದಿ.೨೨ ರಂದು ಬೆಳಿಗ್ಗೆ 10-30 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು ಹಾಗೂ ಇವರ ಬಳಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ಆಗಮಿಸಲಿದ್ದಾರೆಂದು ಸಂಘಟಕರು ತಿಳಿಸಿದರು.
ಎನ್.ಬಿ.ಗುಡಸಿ, ಎಸ್.ಸಿ.ಮಾನಗಾಂವಿ, ಪಿ.ಕೆ.ಯರಗಟ್ಟಿ, ಪಿ.ಎಸ್.ಹತ್ತಿ, ಡಿ.ಎಸ್. ನಾಯಿಕ, ಸಿ.ಪಿ.ಪಾಟೀಲ, ಸುರೇಶ ಜಿನರಾಳೆ ಸುಭಾಸ ನಾಯಿಕ ಮತ್ತಿತರರಿದ್ದರು.





