ಯುವ ಜನಾಂಗ ಸ್ವಾವಲಂಬಿ ಬದುಕಿಗೆ ಪ್ರಯತ್ನಿಸಲಿ: ಪವನ ಕತ್ತಿ

ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ಸಂತ್ರಾಮ ಕಲ್ಲಪ್ಪಾ ಐಹೊಳೆ 2023-24ನೇ ಸಾಲಿನಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಸಾರಥಿ ಯೋಜನೆ ಅಡಿಯಲ್ಲಿ ಮಂಜೂರಾದ ವಾಹನವನ್ನು ಪವನ ಕತ್ತಿ ವಿತರಿಸಿದರು. ಸಿದ್ದು ಮಾನಗಾಂವಿ, ವಿರೂಪಾಕ್ಷಿ ನಿಪ್ಪಾಣಿ, ಎಚ್.ಎಲ್.ಪೂಜೇರಿ, ಯಲ್ಲಪ್ಪಾ ಪಟಗುಂದಿ ಇತರರಿದ್ದರು.

ಹುಕ್ಕೇರಿ: ಸರಕಾರಿ ನೌಕರಿ ಎಂದು ಪರಿತಪಿಸುವುದಕ್ಕಿಂತ ಸ್ವಂತ ಉದ್ಯೋಗ ಕೈಕೊಂಡು ಸ್ವಾವಲಂಬಿಯಾಗಿ ಬದುಕಬೇಕು.ಆ ನಿಟ್ಟಿನಲ್ಲಿ ಸರಕಾರದ ಪ್ರಯೋಜನ ಪಡೆದುಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾಗಿರುವ ಸಂತ್ರಾಮ ಅವರಿಗೆ ಅಭಿನಂದಿಸುತ್ತೇನೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.       

          ಶನಿವಾರದಂದು ತಾಲೂಕಿನ ಕೋಣನಕೇರಿ ಗ್ರಾಮದ ಸಂತ್ರಾಮ ಕಲ್ಲಪ್ಪಾ ಐಹೊಳೆ 2023-24 ನೇ ಸಾಲಿನಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಸಾರಥಿ ಯೋಜನೆ ಅಡಿಯಲ್ಲಿ ಮಂಜೂರಾದ ವಾಹನವನ್ನು ವಿತರಿಸಿ ಮಾತನಾಡಿದರು. ಕೇಂದ್ರ ಸರಕಾರದ ಮುದ್ರಾ ಯೋಜನೆ ಮತ್ತು ರಾಜ್ಯ ಸರಕಾರದ ವಿವಿಧ ಅಭಿವೃದ್ಧಿ ನಿಗಮಗಳಿಂದ ಸಾಲ ಸೌಲಭ್ಯ ಒದಗಿಸುತ್ತಿದ್ದಾರೆ. ಸಬ್ಸಿಡಿ ಜೊತೆಗೆ ಕಡಿಮೆ ಬಡ್ಡಿ ಬರದಲ್ಲಿ ದೊರಕುವ ಸಾಲ ಪಡೆದು ಹಲವಾರು ಉದ್ಯೋಗ ಕೈಕೊಳ್ಳುವ ಅವಕಾಶ ಇದೆ. ಆದರೆ ಯುವ ಜನಾಂಗ ಸರಕಾರಿ ನಖರಿ ಎಂದು ಅಲೆಯುತ್ತಿರುವು ಶೋಚನೀಯ ಎಂದರು.

        ಮಹಿಳೆಯರು ಇಂತಹ ಯೋಜನೆಗಳ ಪ್ರಯೋಜನ ಪಡೆದು ಗೃಹ ಉತ್ಪನ್ನಗಳ ಉತ್ಪಾದನೆ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.ಅAತಹವರ ಜೀವನ ಯುವ ಜನಾಂಗಕ್ಕೆ ಮಾದರಿಯಾಗಲಿ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪವನ ಕತ್ತಿ ಅವರನ್ನು ಸಂತ್ರಾಮ ಐಹೊಳೆ ಕುಟುಂಬಸ್ಥರು ಸನ್ಮಾನಿಸಿದರು.

     ಬಡಕುಂದ್ರಿ ಪಿಕೆಪಿಎಸ್ ಅಧ್ಯಕ್ಷ ಸಿದ್ದು ಮಾನಗಾಂವಿ, ವಿರೂಪಾಕ್ಷಿ ನಿಪ್ಪಾಣಿ, ತಾ.ಪಂ ಮಾಜಿ ಸದಸ್ಯ ಎಚ್.ಎಲ್.ಪೂಜೇರಿ, ಯಲ್ಲಪ್ಪಾ ಪಟಗುಂದಿ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept