ಮಾಜಿ ಸಚಿವ ಎ.ಬಿ.ಪಾಟೀಲ ಅವರ ಹುಟ್ಟು ಹಬ್ಬದ ಭವ್ಯ ಸಮಾರಂಭ

ಪಟ್ಟಣ ಹೊರವಲಯದ ರವದಿ ಫಾರ್ಮ ಹೌಸದಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲ ಅವರು   ಜನ್ಮದಿನಚಾರಣೆ ಆಚರಿಸಿಕೊಳ್ಳುತ್ತಿರುವುದು.

ಹುಕ್ಕೇರಿ:ಗಡಿ ಭಾಗದಲ್ಲಿ ಶೈಕ್ಷಣೀಕ ಕ್ರಾಂತಿ ಕೈಕೊಂಡು ಜನ ಮೆಚ್ಚಿದ ನಾಯಕರಾದ ಮಾಜಿ ಸಚಿವ ಎ.ಬಿ. ಪಾಟೀಲ ಅವರು ಸಾಮಾಜಿಕ. ಧಾರ್ಮಿಕ ಕಾರ್ಯಗಳ ಜತೆಗೆ ಶೈಕ್ಷಣೀಕ ಕ್ರಾಂತಿ ಮಾಡಿದ್ದಾರೆ. ಸಹಸ್ರಾರು ವಿದ್ಯಾರ್ಥಿಗಳು ಅವರು ಸ್ಥಾಪಿಸಿರುವ ಶಾಲಾ ಕಾಲೇಜಿನಲ್ಲಿ ಕಲಿಯುವ ಮೂಲಕ ಬದುಕಿನ ಬಂಡಿ ಕಟ್ಟಿಕೊಂಡಿದ್ದಾರೆಂದು ಕ್ಯಾರಗುಡ್ಡ ಅವಜೀಕರ ಮಠದ ಅಭಿನವ ಮಂಜುನಾಥ ಶ್ರೀಗಳು ಹೇಳಿದರು.

       ಅವರು ಪಟ್ಟಣದ ರವದಿ ಫಾರ್ಮ ಹೌಸದಲ್ಲಿ ಮಾಜಿ ಸಚಿವ ಎಬಿ ಪಾಟೀಲ ಅವರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಸಹಕಾರಿ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಕಳಂಕ ರಹಿತ ರಾಜಕೀಯ ಜೀವನ ನಡೆಸಿದ್ದಾರೆಂದರು.

 ಮಾಜಿ ಸಚಿವ ಎಬಿ ಪಾಟೀಲ ಮಾತನಾಡಿ ಕ್ಷೇತ್ರ‍್ರದ  ಅಭಿಮಾನಿಗಳ ಒತ್ತಾಸೆಯಿಂದ ನನ್ನ ೭೩ ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಜನರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಶ್ರಮಿಸುವುದಾಗಿ ಹೇಳಿದರು. 

        ಮಾಜಿ ಸಚಿವ ಎ.ಬಿ ಪಾಟೀಲರಿಂದ ಸಸಿ ನೆಡುವ ಮೂಲಕ ಅವರ ಅಭಿಮಾನಿಗಳು, ಹಿತೈಷಿಗಳು, ಸಹಕಾರಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹುಟ್ಟು ಹಬ್ಬಕ್ಕೆ ಚಾಲನೆ ನೀಡಿದರು.

ಪಟ್ಟಣ ಹೊರವಲಯದ ರವದಿ ಫಾರ್ಮ ಹೌಸದಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲ ಅವರು  ತಮ್ಮ ಜನ್ಮದಿನದ ನಿಮಿತ್ಯ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿರುವುದು.

 ಅವರ ಹಿತೈಷಿಗಳು, ಅಭಿಮಾನಿಗಳು, ಜನಪ್ರತಿನಿಧಿಗಳು ಮಾಜಿ ಸಚಿವ ಎ.ಬಿ. ಪಾಟೀಲ ಅವರನ್ನು ಸತ್ಕರಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ವಿಎಸ್ ಸಂಘದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ರೈತಪರ ಹೋರಾಟಗಾರರನ್ನು  ಸನ್ಮಾನಿಸಲಾಯಿತು.          ಘೋಡಗೇರಿ ಕಾಶೀನಾಥ ಸ್ವಾಮಿಜಿ, ಯುವ ನಾಯಕ ವಿನಯ ಪಾಟೀಲ,    ಮಾಜಿ ಸಚಿವ ಶಶಿಕಾಂತ ನಾಯಿಕ, ಬ್ಲಾಕ ಕಾಂಗ್ರೆಸ ಅಧ್ಯಕ್ಷ ವಿಜಯ ರವದಿ, ಡಾ.ಮಹಾಂತೇಶ ಕಡಾಡಿ, ಎಸ್‌ಡಿವ್ಹಿಎಸ್ ನಿದೇರ್ಶಕ ಆರ್.ಬಿ.ಪಾಟೀಲ ಕಾರ್ಯದರ್ಶಿ ಬಿ.ಎ.ಪೂಜೇರಿ. ರಾಮಣ್ಣಾ ಹುಕ್ಕೇರಿ, ಸಂಗಮ ಸಕ್ಕರೆ ಉಪಾಧ್ಯಕ್ಷ ಬಸಗೌಡಾ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡಾ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೆಕರ, ನಿರ್ದೇಶಕರು ಮತ್ತು ಮುಖಂಡರಾದ ಬಸಗಡಾ ಪಾಟೀಲ, ಡಾ. ಮಹಾಂತೇಶ ಕಡಾಡಿ, ಮಹಾವೀರ ನಿಲಜಗಿ. ಅಶೋಕ ಪಾಟೀಲ, ಗಜಾನನ ಕೊಳ್ಳಿ, ಮಲ್ಲಿಕಾರ್ಜುನ ರಾಶಿಂಗೆ, ಗವೀಶ ರವದಿ, ಚಂದ್ರಶೇಖರ ಪಾಟೀಲ, ಮಹಾಂತೇಶ ಮಗದುಮ್ಮ, ನ್ಯಾಯವಾದಿ ವಿಕ್ರಮ ಕರನಿಂಗ, ಪುರಸಭೆ ಉಪಾಧ್ಯಕ್ಷೆ ಜ್ಯೋತಿ ಬಡಿಗೇರ, ರೇಖಾ ಚಿಕ್ಕೋಡಿ,  ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರಿದ್ದರು. ವಿಜಯ ರವದಿ ಸ್ವಾಗತಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept