ಶಾಸಕ ನಿಖಿಲ ಕತ್ತಿ ಅವರಿಂದ ಮುಂಗಾರು ಬಿತ್ತನೆ ಬೀಜಗಳ ವಿತರಣೆ

ಸ್ಥಳೀಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ನಿಖಿಲ ಕತ್ತಿ ಅವರು ರೈತರಿಗೆ ಮುಂಗಾರು ಬಿತ್ತನೆ ಬೀಜಗಳ ವಿತರಿಸಿದರು. ಸತ್ತೆಪ್ಪಾ ನಾಯಿಕ, ರಾಚಯ್ಯಾ ಹಿರೇಮಠ, ಕಲಗೌಡ ಪಾಟೀಲ, ಮಹಾವೀರ ನಿಲಜಗಿ, ಆರ್.ಕೆ.ಪಾಟೀಲ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ ಇತರರಿದ್ದರು.

ಹುಕ್ಕೇರಿ : ರೈತರು ತೇವಾಂಶ ನೋಡಿಕೊಂಡು ಮುಂಗಾರು ಬಿತ್ತನೆ ಮಾಡಬೇಕು. ಸೋಯಾಬಿನ್ ಸೇರಿದಂತೆ ಮುಂಗಾರು ಬಿತ್ತನೆ ಬೀಜಗಳ ದಾಸ್ತಾನು ಸಾಕಷ್ಟಿದ್ದು ಬೀಜಗಾಗಿ ರೈತರು ಚಿಂತಿಸಬಾರದು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

  ಸೋಮವಾರದಂದು ಸ್ಥಳೀಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮುಂಗಾರು ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಈ ವರ್ಷ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗುತ್ತಿದೆ.ಇದರಿಂದ ಮುಂಗಾರು ಬಿತ್ತನೆ ಬೇಗ ಆಗುತ್ತಿದೆ ಎಂದರು.ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಬೇಕಾದ ಎಲ್ಲ ಬೀಜಗಳನ್ನು ಮತ್ತು ಬಿತ್ತನೆ ಮಾಹಿತಿ, ರೋಗ ಕೀಟಗಳ ಬಾಧೆ ಬರದಂತೆ ಸಲಹೆ ಸೂಚನೆ ನೀಡಬೇಕೆಂದರು.ನಂತರ ರೈತರಿಗೆ ಬೀಜಗಳನ್ನು ವಿತರಿಸಿದರು.

ಸ್ಥಳೀಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ನಿಖಿಲ ಕತ್ತಿ ಅವರು ರೈತರಿಗೆ ಮುಂಗಾರು ಬಿತ್ತನೆ ಬೀಜಗಳ ವಿತರಣೆಗೆ ಆಗಮಿಸಿದರು.

   ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಅವರು ಮಾತನಾಡಿ ತಾಲೂಕಿನಲ್ಲಿ ಇರುವ 3 ರೈತ ಸಂಪರ್ಕ ಕೇಂದ್ರ ಮತ್ತು 37 ಪಿಕೆಪಿಎಸ್‌ಗಳಿಂದ ರೈತರಿಗೆ ಬೀಜ ವಿತರಿಸಲಾಗುತ್ತಿದೆ ಎಂದರು.ಖಾಸಗಿ ಬೀಜ ಮಾರಾಟಗಾರರಿಂದ ಬೀಜ ಅಥವಾ ರಸಗೊಬ್ಬರಗಳನ್ನು ಖರೀದಿಸುವಾಗ ರಶೀದಿ ಕಡ್ಡಾಯವಾಗಿ ಪಡೆಯಬೇಕು.ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರೆ ನಮಗೆ ತಿಳಿಸುವಂತೆ ರೈತರಿಗೆ ಹೇಳಿದರು.ಸರಕಾರದಿಂದ ಕೊಡುತ್ತಿರುವ ಬೀಜಗಳು ಗುಣಮಟ್ಟದಿಂದ ಕೂಡಿವೆ ಎಂದರು.   ಮುಖಂಡರಾದ ಸತ್ತೆಪ್ಪಾ ನಾಯಿಕ, ರಾಚಯ್ಯಾ ಹಿರೇಮಠ, ಕಲಗೌಡ ಪಾಟೀಲ, ಮಹಾವೀರ ನಿಲಜಗಿ, ಆರ್.ಕೆ.ಪಾಟೀಲ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಚನ್ನಪ್ಪಾ ಗಜಬರ, ಎಚ್.ಎಲ್.ಪೂಜೇರಿ, ಬಿ.ಕೆ.ಮಗೆನ್ನವರ, ಶಿವನಗೌಡ ಪಾಟೀಲ, ಆನಂದ ಲಕ್ಕುಂಡಿ,  ಪ್ರಭು ವಂಟಮೂರೆ, ಆರ್.ಬಿ.ಪಾಟೀಲ ಹಾಗೂ ಇಲಾಖೆ ಅಧಿಕಾರಿಗಳಾದ ಪುರುಷೋತ್ತಮ ಪೀರಾಜೆ, ಶಿವಾನಂದ ಕಮತ, ಉದಯ ಅಗನೂರ, ಸಮೀರ ಲೋಕಾಪೂರೆ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept