ತಾಲೂಕಿನ ಬೆಳವಿ ಸರಕಾರಿ ಪ್ರೌಢ ಶಾಲೆಯ ನೂತನ ಭೋಜನಾಲಯವನ್ನು ಪೃಥ್ವಿ ಕತ್ತಿ ಉದ್ಘಾಟಿಸಿದರು. ಬಿ.ಇ.ಒ ಪ್ರಭಾವತಿ ಪಾಟೀಲ, ಸತ್ಯೆಪ್ಪಾ ನಾಯಿಕ, ಎಸ್.ಆರ್.ಕರ್ಕಿನಾಯಿಕ, ಪಾರ್ವತಿ ಚಿಕ್ಕಣಗಿ, ಶೋಭಾ ಘಸ್ತಿ ಇತರರಿದ್ದರು.
ಹುಕ್ಕೇರಿ:ತಾಲೂಕಿನ ಬೆಳವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದ್ದು ಇತರ ಶಾಲೆಗಳಿಗೆ ಹಿರಿಯಜ್ಜ ಆಗಿದೆ.ಇಂತಹ ಶಾಲೆಯ ಸರ್ವತೋಮುಖ ಬೆಳವಣಿಗೆ ಮತ್ತು ಆಧುನೀಕತೆ ರೂಪಿಸಲು ಗ್ರಾಮ ಪಂಚಾಯತಿಯವರು ಹಲವಾರು ಕೊಡುಗೆ ನೀಡಿದ್ದು ಶ್ಲಾಘನೀಯ ಕಾರ್ಯ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಸೋಮವಾರದಂದು ಬೆಳವಿ ಗ್ರಾಮ ಪಂಚಾಯತಿ ವತಿಯಿಂದ ಪ್ರಾಥಮಿಕ ಶಾಲೆಗೆ ಕೊಡುಗೆ ನೀಡಿದ ಸ್ಮಾರ್ಟ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮ ಪಂಚಾಯತಿಯವರು ಗ್ರಾಮದ ಸ್ಥಿತಿವಂತರ ಜೊತೆಗೂಡಿ ಶಾಲೆಗೆ ಆಧುನೀಕ ತಂತ್ರಜ್ಞಾನ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಲು ಮುಂದಾಗಬೇಕು.
ಗ್ರಾಮ ಪಂಚಾಯತಿ ಸದಸ್ಯ ಸತ್ಯಪ್ಪಾ ನಾಯಿಕ ಮಾತನಾಡಿ ಸರಕಾರಿ ಶಾಲೆಗಳನ್ನು ಸಶಕ್ತಗೊಳಿಸುವುದು ಮತ್ತು ನಮ್ಮೂರಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ನೈತಿಕ ಶಿಕ್ಷಣ ದೊರೆಯಬೇಕು ಹಾಗೂ ಇನ್ನು ಕೆಲವೇ ದಿನಗಳಲ್ಲಿ ಸದರಿ ಶಾಲೆಯ ಭೋಜನಾಲಯ ಕೊಠಡಿ ಕಾರ್ಯ ಪ್ರಾರಂಭಿಸಲಾಗುವುದು ಎಂದರು. ಶತಮಾನದ ಶಾಲೆಗೆ ಸ್ಮಾರ್ಟ ಕ್ಲಾಸ್, ನಲಿ ಕಲಿ ತರಗತಿ ಮಕ್ಕಳಿಗೆ ಪೀಠೋಪಕರಣ ಮತ್ತು ಬೆಳವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿದರು. ಇದೇ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಯ ಭೋಜನಾಲಯವನ್ನು ಉದ್ಘಾಟಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಚಿಕ್ಕಣಗಿ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷೆ ಶೋಭಾ ಘಸ್ತಿ, ಸದಸ್ಯರಾದ ವಿಠ್ಠಲ ಅವುಬಾಯಿಗೋಳ, ಜಯಶ್ರೀ ಪಾಟೀಲ, ಶೋಭಾ ಮಗದುಮ್ಮ, ಪಿಕೆಪಿಎಸ್ ಅಧ್ಯಕ್ಷ ಲಿಂಗರಾಜ ನಾಯಿಕ, ಪ್ರೌಢ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಸುರೇಶ ಖಡಕಭಾವಿ. ಮುಖಂಡರಾದ ಎಸ್.ಆರ್. ಕರ್ಕಿನಾಯಿಕ, ಎಂ.ಬಿ.ನಾಯಿಕ, ಮಾರುತಿ ಘಸ್ತಿ, ರಾಮಣ್ಣಾ ಘಸ್ತಿ, ಶಿವನಾಯಿಕ ನಾಯಿಕ, ಸಂಜು ಚಿಕ್ಕೋಡಿ, ಸಾತವೀರ ನಾಯಿಕ. ಮಹಾದೇವ ನಾಯಿಕ. ಸುಭಾಷ ಘಸ್ತಿ, ಭಾಪು ಚಿಕ್ಕಣಗಿ ಆರ್‌ಡಿಪಿಆರ್ ಇಲಾಖೆ ರಾಜು ಢಂಗೆ, ಬಿಸಿಯೂಟ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಪಿಡಿಓ ಶೀಲಾ ತಳವಾರ, ಕಾರ್ಯದರ್ಶಿ ಶಕ್ತಿಸಿಂಗ ಖಟಾವಕರ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಿನಾಯಕ ನಾಯಿಕ. ಮತ್ತಿತರರಿದ್ದರು. ಪ್ರಧಾನ ಗುರುಗಳಾದ ಬಸವಪ್ರಭು ಅಂಗಡಿ ಸ್ವಾಗತಿಸಿದರು, ಶಿಕ್ಷಕ ವಿರುಪಾಕ್ಷ ದೊಡಮನಿ ನಿರೂಪಿಸಿ, ವಂದಿಸಿದರು.





